Advertisement
ಬುಧವಾರ ಮುಂಜಾನೆ ಆರಂಭವಾಗಿದ್ದ ದಾಳಿ ನಿರಂತರ ನಾಲ್ಕು ದಿನ ಮುಂದುವರಿದು ಶನಿವಾರ ಅಂತ್ಯಗೊಂಡಿತು. ಶೋಧ ನಡೆಸಿದ ಸಂದರ್ಭದಲ್ಲಿ ಎಲ್ಲೆಡೆ ಪತ್ತೆಯಾದ ದಾಖಲೆ, ಹಣ, ಚಿನ್ನಾಭರಣ ಹಾಗೂ ಮತ್ತಿತರ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆಯ ಪ್ರಧಾನ ಕಚೇರಿಗೆ ತಲುಪಿಸಲಾಗಿದೆ. ಅತ್ತ ಮೈಸೂರಿನ ಮಾವನ ಮನೆಯಲ್ಲಿಯೂ ಶನಿವಾರ ಮಧ್ಯಾಹ್ನ ದಾಳಿ ಅಂತ್ಯಗೊಳಿಸಿದ ಐಟಿ ಅಧಿಕಾರಿಗಳು, ವಶಪಡಿಸಿಕೊಂಡಿರುವ ದಾಖಲೆಗಳೆಲ್ಲವನ್ನೂ ಪ್ರಾದೇಶಿಕ ಕಚೇರಿಗೆ ಸಾಗಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದ ಎಲ್ಲಾ ದಾಖಲೆ ಪತ್ರ ಸೇರಿದಂತೆ ವಿವಿಧ ವಸ್ತುಗಳ ಬಗ್ಗೆ ಪಂಚನಾಮೆ ನಡೆಸಿದರು. ಅಗತ್ಯ ದಾಖಲೆ ಗಳನ್ನು ಕಾರಿನಲ್ಲಿ ಹಾಕಿಕೊಂಡು ಭದ್ರತಾ ಸಿಬ್ಬಂದಿ ಜತೆ ಕಚೇರಿಯತ್ತ ಸಾಗಿದರು. ದಾಳಿ ನಡೆಸಿದ ಎಲ್ಲಾ ಸ್ಥಳಗಳಲ್ಲಿಯೂ ದೊರೆತ ಆಸ್ತಿ ದಾಖಲೆಗಳು, ರಿಯಲ್ ಎಸ್ಟೇಟ್ ವ್ಯವಹಾರದ ದಾಖಲೆಗಳು, ಕಂಪೆನಿಗಳಲ್ಲಿ ಹೂಡಿಕೆ, ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ
ಪರಿಶೀಲನೆ ನಡೆಸುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಮ್ಮ ಬಳಿಯಿರುವ ದಾಖಲೆಗಳ ಜೊತೆಗೆ ಶಿವಕುಮಾರ್ ಅವರ ಆಸ್ತಿ ಮೌಲ್ಯ, ಅವರ ಆದಾಯದ ಮೂಲ, ಕುಟುಂಬ ಸದಸ್ಯರ ಆದಾಯ ಮೂಲ, ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಷೇರುಗಳನ್ನು ತಾಳೆ ನೋಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
Related Articles
ಸಕ್ರಮವಾಗಿದ್ದರೆ ಯಾವುದೇ ವರದಿ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಸಚಿವ ಡಿ.ಕೆ ಶಿವಕುಮಾರ್, ಸದ್ಯಕ್ಕೆ ಇಡಿ ವಿಚಾರಣೆ ನಡೆಸುವ ಸಾಧ್ಯತೆಗಳು ಕಡಿಮೆ. ಏಕೆಂದರೆ, ಕಳೆದ ನಾಲ್ಕು ದಿನಗಳಲ್ಲಿ ಶೋಧ ಕಾರ್ಯದಲ್ಲಿಯೇ ಅಕ್ರಮ ಕಂಡು ಬಂದಿದ್ದರೆ ಈ ವೇಳೆಗಾಗಲೇ ಐಟಿ ಇಲಾಖೆ ಇಡಿಗೆ ವರದಿ ನೀಡುತ್ತಿತ್ತು ಎಂದೂ ಹೇಳಲಾಗಿದೆ.
Advertisement
ಇಂದು ಸಂಜೆ ದೆಹಲಿಗೆ?ಕಳೆದ ಒಂದು ವಾರದಿಂದ ಬೆಂಗಳೂರು ಹೊರವಲಯದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರು ಭಾನುವಾರ ಸಂಜೆ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ರಕ್ಷಾ ಬಂಧನ ಹಬ್ಬ ಇರುವುದರಿಂದ ಸೋನಿಯಾ ಗಾಂಧಿ ಕೈಯಿಂದ ರಕ್ಷೆ ಕಟ್ಟಿಸಿಕೊಂಡು
ಗುಜರಾತ್ ಶಾಸಕರು ಸೋಮವಾರ ಸಂಜೆ ಅಹಮದಾಬಾದ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ ಶಾಸಕರ ಜವಾಬ್ದಾರಿ ವಹಿಸಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕೂಡ ಅವರೊಂದಿಗೆ
ದೆಹಲಿಗೆ ತೆರಳಿ ಹೈ ಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.