ನವದೆಹಲಿ: ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ತಾಪ್ಸಿ ಪನ್ನು, ನಟ ವಿಕಾಸ್ ಬಹ್ಲ ಮತ್ತು ನಿರ್ಮಾಪಕ ಮಧು ಮಂಟೇನಾ ನಿವಾಸದ ಮೇಲೆ ಬುಧವಾರ(ಮಾರ್ಚ್ 03) ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿ.ಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ
ಫ್ಯಾಂಟಮ್ ಫಿಲ್ಮ್ ಕಂಪನಿಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ಫ್ಯಾಂಟಮ್ ಫಿಲ್ಮ್ಸ್ ಅನುರಾಗ್ ಕಶ್ಯಪ್, ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನಿ, ನಿರ್ಮಾಪಕ ಮಧು ಮಾಂಟೇನಾ, ವಿಕಾಸ್ ಬಹ್ಲ್ ಅವರ ಸಿನಿಮಾ ನಿರ್ಮಾಣ ಮತ್ತು ಸಿನಿಮಾ ವಿತರಣೆ ಕಂಪನಿಯಾಗಿದ್ದು, 2018ರಲ್ಲಿ ಈ ಕಂಪನಿಯನ್ನು ಮುಚ್ಚಲಾಗಿತ್ತು.