ಮುಂಬೈ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ (ಫೆ.08) ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಇದನ್ನೂ ಓದಿ:J&K; ಇಲ್ಲಿ ಕೇಂದ್ರ ಸರಕಾರ ಹೇಳಿಕೊಂಡಿರುವ ಹಾಗೆ ಪರಿಸ್ಥಿತಿ ಇಲ್ಲ: ಒಮರ್ ಅಬ್ದುಲ್ಲಾ
ವಂಚನೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂಬೈನ ಅಂಧೇರಿಯಲ್ಲಿರವ ಪ್ರದೀಪ್ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ಪೊಲೀಸ್ ಇಲಾಖೆಯಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಕರೆಯಲ್ಪಡುತ್ತಿದ್ದ ಪ್ರದೀಪ್ ಶರ್ಮಾ ಈ ಮೊದಲು ಮನ್ ಸುಖ್ ಹಿರಾನ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. 2021ರ ಫೆ.25ರಂದು ಅಂಬಾನಿಯ ಐಶಾರಾಮಿ ಅಂಟಿಲಿಯಾ ನಿವಾಸದ ಸಮೀಪದ ನಿರ್ಜನ ಪ್ರದೇಶದಲ್ಲಿ ಜಿಲೆಟಿನ್ ತುಂಬಿದ್ದ ಎಸ್ ಯುವಿ ಪತ್ತೆಯಾಗಿತ್ತು. ನಂತರ ಎಸ್ ಯುವಿ ಮಾಲೀಕ ಹಿರಾನ್ ಶವ ಥಾಣೆ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಎನ್ ಐಎ, 2021ರ ಜೂನ್ ನಲ್ಲಿ ಪ್ರದೀಪ್ ಶರ್ಮಾ ಅವರನ್ನು ಬಂಧಿಸಿತ್ತು ಎಂದು ವರದಿ ತಿಳಿಸಿದೆ.