Advertisement

ಜನರಿಗೆ ಸೌಲಭ್ಯ ಒದಗಿಸುವುದು ನಗರಸಭೆ ಕರ್ತವ್ಯ

08:08 PM Dec 12, 2020 | Suhan S |

‌ಚಳ್ಳಕೆರೆ: ನಗರ ತನ್ನ ವಿಸ್ತರಣೆಯನ್ನು ಹೆಚ್ಚಿಸಿಕೊಂಡಿದ್ದು, ಜನರಿಗೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸುವುದು ನಗರಸಭೆಯಮೂಲ ಕರ್ತವ್ಯ ಎಂದು ನಗರಸಭೆಯ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ ಕೃಷ್ಣಮೂರ್ತಿ ತಿಳಿಸಿದರು.

Advertisement

ಅವರು, ಶುಕ್ರವಾರ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯ ಚೊಚ್ಚಲ ಸಭೆಯಲ್ಲಿ ಮಾತನಾಡಿದರು. ಸುಮಾರು ಮೂರು ಗಂಟೆಗಳ ಕಾಲ ನಗರಸಭೆಯ ಸಾಮಾನ್ಯ ಸಭೆ ನಡೆದು ಎಲ್ಲಾ ಸದಸ್ಯರು ತಮ್ಮ ವಾರ್ಡ್ ಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳ ಬಗ್ಗೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ಗಮನಸೆಳೆದರು.

ನಗರಸಭಾ ಸದಸ್ಯರಾದ ಕೆ.ಸಿ.ನಾಗರಾಜು, ಸಿ.ಶ್ರೀನಿವಾಸ್‌, ವಿ.ವೈ.ಪ್ರಮೋದ್‌, ಹೊಯ್ಸಳಗೋವಿಂದ, ಪ್ರಶಾಂತ್‌ಕುಮಾರ್‌, ವಿಶುಕುಮಾರ್‌, ಕವಿತಾನಾಯಕಿ, ನಾಗಮಣಿ,ನಿರ್ಮಲ, ತಿಪ್ಪಮ್ಮ, ಎಸ್‌.ಜಯಣ್ಣ, ವೆಂಕಟೇಶ್‌, ಪಾಲಮ್ಮ, ಸಾಕಮ್ಮ ಮುಂತಾದವರು ಮಾತನಾಡಿ,ಕಳೆದ ಎರಡು ವರ್ಷಗಳ ನಂತರ ನಡೆಯುತ್ತಿರುವ ಸಾಮಾನ್ಯ ಸಭೆಯಲ್ಲಿ ನಗರದ ಅಭಿವೃದ್ಧಿಗೆ ಪ್ರೇರಕವಾಗುವಂತಹ ಯೋಜನೆಗಳಿಲ್ಲದೆ ಕೇವಲ ಲೇಔಟ್‌ಗಳ ಅನುಮೋದನೆಗೆ ಆದ್ಯತೆ ನೀಡುವುದು ಸರಿಯಲ್ಲ. ಖಾಸಗಿ ಲೇಔಟ್‌ ನಿರ್ಮಾಣ ಸಂದರ್ಭದಲ್ಲಿ ನಗರಸಭೆಯ ನಿಯಮಗಳನ್ನು ನಿರ್ಲಕ್ಷಿಸಲಾಗುತ್ತಿದೆ, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಗತ್ಯವಿರುವ ಲೆ„ಸನ್ಸ್‌ಗಳನ್ನು ಪಡೆಯುತ್ತಿಲ್ಲವೆಂಬ ಸಾರ್ವಜನಿಕ ಆರೋಪವಿದ್ದು

ಈ ಬಗ್ಗೆ ಅಧಿ ಕಾರಿಗಳು ಗಮನಹರಿಸಬೇಕು. ನಗರಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಪೌರಾಯುಕ್ತ ಪಿ.ಪಾಲಯ್ಯ ಮಾತನಾಡಿ, ಖಾಸಗಿ ಲೇಔಟ್‌ ನೀಡುವಾಗ ಎಲ್ಲಾ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತದೆ. ಲೋಪಗಳಿದ್ದರೆ ಗಮನಕ್ಕೆ ತರಬಹುದು. ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದ್ದರೂ ಸಹ ಕೋವಿಡ್ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಭಾರತ್‌ ಯೋಜನೆಯಡಿ 13 ನೂತನ ಕಸ ಸಾಗಾಣಿಕೆ ವಾಹನಗಳು ಮಂಜೂರಾಗಿವೆ ಎಂದರು.

ಉಪಾಧ್ಯಕ್ಷೆ ಜೈತುಂಬಿ, ಸಹಾಯಕ ಕಾರ್ಯಪಾಲಕ ಅಭಿಯಂತರೆ ಜೆ.ಶ್ಯಾಮಲ, ಕಂದಾಯಾಧಿಕಾರಿ ವಿ.ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಎಚ್‌.ಟಿ.ಮಹಲಿಂಗಪ್ಪ, ಪ್ರಥಮ ದರ್ಜೆ ಸಹಾಯಕರಾದ ತಿಪ್ಪೇಸ್ವಾಮಿ, ಬೋರಣ್ಣ, ನಾಗರಾಜ, ಓಬಳೇಶ್‌, ವೆಂಕಟೇಶ್‌, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next