ಬಡತನದ ಕಾರಣಕ್ಕೆ ಏಳನೇ ತರಗತಿ ಮುಗಿಸಿ ಶಾಲೆಗೆ ಗುಡ್ ಬೈ ಹೇಳಿದ್ದ ನಾನು, ನನ್ನ ಕಲಿಯುವ ಆಸಕ್ತಿಯಿಂದ 1999ರಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್.ಎಸ್‌ಎಲ….ಸಿ ಪರೀಕ್ಷೆ ತೆಗೆದುಕೊಂಡಿ¨ªೆ. ಕಷ್ಟಪಟ್ಟು ಅಭ್ಯಾಸ ಮಾಡಿ¨ªೆ. ಪಾಸಾಗುವ ಧೈರ್ಯವೂ ಇತ್ತು. ಏಳು ವರ್ಷದಿಂದ ಪರೀಕ್ಷೆಯ ಅನುಭವವಿರದಿದ್ದರಿಂದ ಸ್ವಲ್ಪ ಮಟ್ಟಿನ ಅಳುಕೂ ಇತ್ತು.
ಅಂತೂ ಕನ್ನಡ, ಸಮಾಜವಿಜ್ಞಾನ ಪರೀಕ್ಷೆ ಮುಗಿಸಿದೆ. ಮೂರನೇ ದಿನ ಇಂಗ್ಲೀಷ್ ಪರೀಕ್ಷೆ ಬಂತು ನೋಡಿ! ಭಯ ಶುರುವಾಯಿತು, ಏಕೆಂದರೆ, ಮನೆಯಲ್ಲಿಯೇ ಕುಳಿತು ಅಭ್ಯಾಸ ಮಾಡಿ ನಾನು ಇಂಗ್ಲೀಷನ್ನು ನನಗೆ ತಿಳಿದಂತೆ ಉಚ್ಛಾರಣೆ ಮಾಡಿಕೊಂಡು ಓದಿಕೊಂಡವನು. ಅದೂ ಒಂದು ಅಂಕದ ಪ್ರಶ್ನೆಗಳನ್ನು ಮಾತ್ರ ಅಭ್ಯಸಿಸಿ¨ªೆ. ನಾಲ್ಕು ಅಂಕದ ಒಂದು ಪೊಯೆಮ್ಮು ಅದರಲ್ಲಿ ಸೇರಿತ್ತು. ಎಷ್ಟೇ ತಿಪ್ಪರಲಾಗ ಹಾಕಿ ಎಣಿಸಿದರೂ ನಾನು ಬರೆದದ್ದು ನಲವತ್ತು ಅಂಕ ದಾಟಲೊಲ್ಲದು. ಬರೆದದ್ದೇ ನಲವವತ್ತಾದರೆ, ಅದರಲ್ಲಿ ತಪ್ಪೆಷ್ಟು? ನಾನು ಪಡೆಯುವುದೆಷ್ಟು ಅಂಕಗಳು? ಎಂಬ ಚಿಂತೆ ಶುರುವಾಯಿತು.
ಅಷ್ಟರಲ್ಲಿ ಅದೆಲ್ಲಿಂದ ಬಂದನೋ ಒಬ್ಬ ಪುಣ್ಯಾತ್ಮ! ಕಿಟಕಿ ಬಳಿಯಿದ್ದ ನನ್ನ ಕೈಗೆ ಒಂದು ಚೀಟಿ ಕೊಟ್ಟವನೇ ಓಡಿ ಹೋಗಿಬಿಟ್ಟ. ಮೊದಲ ಬಾರಿ ಕಾಪಿಚೀಟಿ ಹಿಡಿದ ಕೈ ನಡುಗುತ್ತಿದ್ದರೆ, ಎದೆ ಬಿಡುವಿಲ್ಲದೇ ಹೊಡೆದುಕೊಳ್ಳುತ್ತಿತ್ತು. ಹಣೆ ಮೇಲೆ ಬೆವರ ಹನಿ ಕಾಣಿಸಿದವು. ಮುದುಡಿದ ಆ ಚೀಟಿಯನ್ನು ಬಿಚ್ಚುವಷ್ಟರಲ್ಲಿ ಮೂರು ಸಾರಿ ಮೇಲ್ವಿಚಾರಕರನ್ನು ದಿಟ್ಟಿಸಿ¨ªೆ. ಹೇಗೋ ಬರೆಯುವ ಪ್ರಯತ್ನ ಮಾಡುತ್ತಿರುವಾಗಲೇ ನನ್ನ ಪಕ್ಕದ ಬೆಂಚಿನ ಪರೀûಾರ್ಥಿ “ಆ ಚೀಟಿಯನ್ನು ನನಗೆಂದು ಕೊಟ್ಟಿದ್ದು. ಬೇಗ ತಾ’ ಎನ್ನುತ್ತಿದ್ದ. ಅವನ ಅವಸರಕ್ಕೆ ನನ್ನ ಕೈ ಪೈಪೋಟಿ ನೀಡಲಿಲ್ಲ. ಚೀಟಿಯಲ್ಲಿದ್ದದ್ದು ಭರ್ತಿ ನಾಲ್ಕು ಅಂಕದ ಉತ್ತರ. ಹಾಗೂ ಹೀಗೂ ಯುದ್ಧ ಗೆದ್ದಂತೆ ಬರೆಯುವುದನ್ನು ಮುಗಿಸಿದೆ.
ತುಂಬಾ ಅಳುಕಿನಿಂದ, ಗಾಬರಿಗೊಂಡು ಬರೆದಿದ್ದರಿಂದ ಸಾಲುಗಳು ಪಕ್ಕಾ ವಾಸ್ತುಪ್ರಕಾರ ಆಗ್ನೇಯ ಮೂಲೆಯತ್ತ ವಾಲಿದ್ದವು. ಅದುವರೆಗಿನ ಅಕ್ಷರಗಳಿಗೂ ಈ ಅಕ್ಷರಗಳಿಗೂ ಅಜಗಜಾಂತರ. ಇಂತಿಪ್ಪ ನನ್ನ ಅಕ್ಷರಗಳನ್ನು ನಾನೇ ಓದಲು ಪರದಾಡಿದೆ. ಇನ್ನು ಮೌಲ್ಯಮಾಪಕರ ಗತಿ ದೇವರೇ ಬಲ್ಲ ಎಂದುಕೊಂಡೆ. ಫಲಿತಾಂಶ ಬಂದಾಗ ಇಂಗ್ಲೀಷ್ ವಿಷಯದಲ್ಲಿ 30 ಅಂಕ ಪಡೆದು ಪಾಸಾಗಿ¨ªೆ.
ಮೊದಲು ನಾನು ಬರೆದಿದ್ದ ನಲವತ್ತು ಅಂಕಗಳ ಉತ್ತರದÇÉೇ 30 ಅಂಕ ಬಂತೋ ಅಥವಾ ಆ ಕಾಪಿಯಿಂದಲೇ ಸಹಾಯವಾಯಿತೋ ನನಗೆ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ: ಈಗಲೂ ನನಗೆ ಕಾಪಿ ಮಾಡಿದ ಪಾಪಪ್ರಜ್ಞೆ ಕಾಡುತ್ತಿದೆ.
– ಅಶೋಕ ವಿ ಬಳ್ಳಾ, ಹುನಗುಂದ