Advertisement

ಕನ್ನಡಿಗರ ಅವಹೇಳನ ಸಲ್ಲದು

04:45 PM Jan 18, 2018 | Team Udayavani |

ಮಂಡ್ಯ: ಕನ್ನಡಿಗರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿರುವ ಗೋವಾ ರಾಜ್ಯದ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌ ವಿರುದ್ಧ ರಾಜ್ಯ ರೈತಸಂಘದ ಕಾರ್ಯಕರ್ತರು ನಗರದಲ್ಲಿ ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ನಗರದ ಸರ್‌ ಎಂ.ವಿ. ಪ್ರತಿಮೆ ಬಳಿ ಜಮಾಯಸಿದ ಕಾರ್ಯಕರ್ತರು, ಕೆಲ ಕಾಲ ಹೆದ್ದಾರಿ ತಡೆ ನಡೆಸಿ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದರು. ಕರ್ನಾಟಕದವರನ್ನು “ಹರಾಮಿ’ ಗಳು ಎಂದು ಕರೆದ ಗೋವಾ ಜಲಸಂಪನ್ಮೂಲ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದರಲ್ಲದೆ, ತಕ್ಷಣ ಕನ್ನಡಿಗರ ಕ್ಷಮೆಯಾಚಿ ಸುವಂತೆ ಒತ್ತಾಯಿಸಿದರು.

ಇಂತಹ ಸಚಿವರನ್ನು ಸಂಪುಟದಲ್ಲಿ ಇಟ್ಟು ಕೊಂಡು ಆಡಳಿತ ನಡೆಸುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರೂ ಸಹ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಕನ್ನಡಿಗರು ಶಾಂತಿಪ್ರಿಯರು, ಹೃದಯ ವೈಶಾಲ್ಯತೆಯುಳ್ಳವರು. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಕನ್ನಡಿಗರು ಒಮ್ಮೆ ಸಿಡಿದೆದ್ದರೆ ಎಲ್ಲರನ್ನೂ ಮಣಿಸುವ ಚೈತನ್ಯ ವಿದೆ. ಕನ್ನಡಿಗರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕೇ ಹೊರತು ಹರಿತವಿರ ಬಾರದು ಎಂದು ಕಿಡಿಕಾರಿದರು. 

ಕುಡಿಯುವ ನೀರಿನ ಉದ್ದೇಶಕ್ಕೆ ಮಹದಾಯಿ ನೀರನ್ನು ಕೇಳುತ್ತಿದ್ದೇವೆಯೇ ಹೊರತು ಕೃಷಿ ಉದ್ದೇಶಕ್ಕಲ್ಲ. ಕುಡಿಯುವ
ನೀರನ್ನು ನೀಡುವ ಕನಿಷ್ಠ ಮಾನವೀಯತೆಯೂ ನಿಮಗಿಲ್ಲ. ಜನರ ದಾಹ ಇಂಗಿಸುವ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಹರಿಸುವ ದುಷ್ಟತನ ನಿಮ್ಮಲ್ಲಿರುವುದೇ ವಿನಃ ನಮ್ಮಲ್ಲಲ್ಲ ಎಂದು ಆಕ್ರೋಶದಿಂದ ಹೇಳಿದರು. 

ರಾಜ್ಯಸರ್ಕಾರ ಸರ್ವೋತ್ಛ ನ್ಯಾಯಾಲಯದ ಆದೇಶವನ್ನು ಎಂದೂ ಉಲ್ಲಂಘಿಸಿದ ಉದಾಹರಣೆಗಳಿಲ್ಲ. ಅದು ಕಾವೇರಿ ವಿಚಾರವಾಗಿರಲಿ, ಮಹದಾಯಿ ವಿಚಾರವಾಗಿರಲಿ. ಕನ್ನಡಿಗರ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಪಾಲೇಕರ್‌ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. 

Advertisement

ಕನ್ನಡಿಗರ ಬಗ್ಗೆ ಹಗುರವಾಗಿ ಮಾತ ನಾಡಿರುವುದು ಪಾಲೇಕರ್‌ರ ಮುಠ್ಠಾಳತನ ವನ್ನು ತೋರಿಸುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾಡಿರುವ ಅಪಮಾನ. ಒಂದು ರಾಜ್ಯದ ಸಚಿವನಾಗಿ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಮತ್ತೂಂದು ರಾಜ್ಯದ ಜನರ ಬಗ್ಗೆ ಇಂತಹ ಕೀಳು ಮಟ್ಟದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು ತಕ್ಷಣ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶಂಭೂನಹಳ್ಳಿ ಸುರೇಶ್‌, ರಾಮಕೃಷ್ಣೇಗೌಡ, ಬೊಮ್ಮೇಗೌಡ, ಲತಾ ಶಂಕರ್‌ ಇತರರು
ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next