Advertisement

ಭೂ ಮಂಜೂರಲ್ಲಿ ಬಡವರನ್ನು ಕೈಬಿಟ್ಟರೆ ಸುಮ್ಮನಿರಲ್ಲ

07:29 AM Jan 30, 2019 | Team Udayavani |

ಶ್ರೀನಿವಾಸಪುರ: 1992 ರಲ್ಲಿ ಬಡವರು ಕೊಟ್ಟಿರುವ ಅರ್ಜಿದಾರರಿಗೆ ಸಾಗುವಳಿ ಚೀಟಿ ಕೊಡದೆ ಅರಣ್ಯ ಭೂಮಿ ಎಂದು ನೋಟಿಸ್‌ ನೀಡಿ, ಡಾಬಾಗಳಲ್ಲಿ ಕುಳಿತು ಅರಣ್ಯ ಒತ್ತುವರಿ ಮಾಡಿದ ಬಲಾಡ್ಯರಿಗೆ ಆರಿrಸಿ ಕೊಟ್ಟಿರುವುದು ತನಗೆ ಗೊತ್ತಿದೆ. ಕೂಡಲೇ 4 ತಿಂಗಳೊಳಗೆ ಇರುವ ಫೈಲು, ಪಿ.ನಂಬರ್‌ ಭೂಮಿ ಕ್ಲಿಯರ್‌ ಮಾಡಬೇಕೆಂದು ತಹಶೀಲ್ದಾರ್‌ರಿಗೆ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಬಡವರ ಅಕ್ರಮ ಸಕ್ರಮ ಅರ್ಜಿಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

Advertisement

ಆತುರ ಬೀಳಲ್ಲ: 1992ರಲ್ಲಿ ಪಡೆದ 248 ಅರ್ಜಿ ಪೈಕಿ ಇನ್ನೂ 124 ಅರ್ಜಿದಾರರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆಂದು ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ತಿಳಿಸಿದಾಗ ಬಡವರ ಫೈಲು ಕೆಳಗಾಕಿ ಕೊಂಡರೆ ರೈತರೇನಾಗಬೇಕೆಂದು ಕೆಂಡಾಮಂಡಲ ವಾದರು. ಅಲ್ಲ ದೇ, ನಾವು ಮಾತಾಡಿದರೆ ರಾಜಕಾ ರಣಿಗಳೆನ್ನುತ್ತಾರೆ. ಆದರೆ ತಾನು ಆತುರಬಿದ್ದು ಮಾತನಾಡುವುದಿ ಲ್ಲ. ರೈತರು, ಬಡವರು, ಕೂಲಿಕಾರರು, ಪರಿಶಿಷ್ಟರು ಎಕರೆ, ಅರ್ಧ ಎಕರೆ ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿದ್ದರೆ, ಅದನ್ನು ನೀವೇ ಅರಣ್ಯ ಭೂಮಿ ಎನ್ನಲು ನಿಮಗೇನು ಗೊತ್ತಿದೆ. ಬಲಾಡ್ಯರು ನೂರಾರು ಎಕರೆ ಒತ್ತುವರಿ ಮಾಡಿದರೆ ಅದನ್ನು ಮಂಜೂರು ಮಾಡಿ, ಬಡವರನ್ನು ಕೈ ಬಿಡುವುದಾ ದರೆ ತಾನು ಸುಮ್ಮನಿರುವುದಿಲ್ಲ ಎಂದರು.

ಅರ್ಜಿ ಕೊಟ್ಟಿರುವ ಬಡವರು ತನ್ನನ್ನು ಕೇಳುತ್ತಾರೆ. ನೀವು ನೋಡಿದರೆ ಅರ್ಜಿ ವಜಾಗೊಂಡಿದೆ ಎನ್ನುತ್ತೀರಿ, ಇದು ತರವಲ್ಲ. ಯಾವತ್ತಾದರೂ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕುಲ, ಗೋತ್ರ ಏನೆಂದು ತಿಳಿಯದ ನೀವು, ಅರಣ್ಯದವರು ಬಂದು ಹೇಳಿದರೆ ಅದು ಅರಣ್ಯ ಭೂಮಿ ಎಂದು ನೀವು ನೋಂದಣಿ ಮಾಡ್ತೀರಿ. ಕಾನೂನು ಮತ್ತು ನಿಯಮಗಳು ಏನು ಹೇಳುತ್ತೆ ಅದನ್ನು ನೋಡಿ ಸರ್ವೆ ಮಾಡಿ ಪೋಡಿ ಮಾಡಿ. ಅರಣ್ಯ ಇಲಾಖೆ ಬಸ್‌ ನಿಲ್ದಾಣ, ತಾಲೂಕು ಕಚೇರಿ ಸಹ ನಮಗೆ ಸೇರಿದೆ ಎಂದರೆ ಸೇರಿಸಿ ಬಿಡಿ ಎಂದ ಅವರು, ಮೊದಲು ಲ್ಯಾಂಡ್ರಿ ಫಾರಂ ಓದಿದ್ದೀರಾ. ಅರಣ್ಯ ಯಾವುದನ್ನು ಡಿ.ಮಾರ್ಕ್‌ ಮಾಡಿಲ್ಲವೆಂದು ಕಿಡಿಕಾರಿದರು.

ಜಿಲ್ಲಾಧಿಕಾರಿಗೆ ಕರೆ: ಜಿಲ್ಲಾಧಿಕಾರಿಯವ ರನ್ನು ದೂರವಾಣಿಯಲ್ಲಿ ಮಾತಾಡಿ ಪೋಡಿ ಪರಸ್ಪರ ಸರ್ವೇ ಇಂಡಿಕಲ್‌ ಮಾಡಿಲ್ಲ. ಗ್ರ್ಯಾಂಟ್ ಆಗಿದೆ. ಫೈಲ್‌ ಇಲ್ಲ ಅಂದರೆ ಏನರ್ಥ. 92ರಲ್ಲಿ ಕೊಟ್ಟಿರುವ ಅರ್ಜಿಗಳು ಆರಿrರ್ಸಿ ಎಂಟ್ರಿ ಮಾಡಿದ್ದಾರೆ. ಅರಣ್ಯದವರು ನೋಟಿಸ್‌ ಕೊಟ್ಟು ಫೈನಲ್‌ ಮಾಡಿದ್ದರೆ. ಇವರಿಷ್ಟ ಬಂದಂಗೆ ಅನಕ್ಷ ರಸ್ಥರು ಮತ್ತು ಬಡವರ ಜಮೀನುಗಳನ್ನು ಅರಣ್ಯಕ್ಕೆ ಸೇರಿಸಿ, ಹಣವಂತರಿಗೆ ಸಾಗುವಳಿ ಚೀಟಿ ಕೊಟ್ಟಿದ್ದಾರೆ. ನಿಮಗೆ ಎಲ್ಲಾ ಗೊತ್ತಿದೆ. ಬಡವರಿ ಗ್ಯಾಕೆ ಈ ರೀತಿ ಮಾಡಿದ್ದಾರೆ ಗೊತ್ತಾಗುತ್ತಿಲ್ಲ. ಇದನ್ನು ನೀವೇ ಪರಿಶೀಲಿಸಿ ಸರಿಪಡಿಸುವಂತೆ ಹೇಳಿ ಸಭೆಗೆ ತೆರೆ ಎಳೆದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಗೋವಿಂದಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next