Advertisement
ಅನುಭವ ಮಂಟಪ ಪರಿಸರದಲ್ಲಿ ವಿಶ್ವಬಸವಧರ್ಮ ಟ್ರಸ್ಟ್, ಅನುಭವ ಮಂಟಪ ಮತ್ತು ಬಸವಕಲ್ಯಾಣ ಅಭಿವೃದ್ಧಿಮಂಡಳಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಶರಣ ಕಮ್ಮಟ ಮತ್ತು ಅನುಭವ ಮಂಟಪ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇಂಥ
ಶಿಬಿರಗಳು ಪೂರಕವಾಗುತ್ತವೆ ಎಂದರು.
ಎಂದರು. ಬಸವಗುರು ಪೂಜೆ ನೆರವೇರಿಸಿದ ಬಿಜೆಪಿ ಮುಖಂಡ ವಿಜಯಕುಮಾರ ಮಂಠಾಳೆ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಜ್ಞಾನಗಂಗೆ ಸಂಸ್ಥೆಯಿಂದ ಬಹುಮಾನ ನೀಡುವದಾಗಿ ಪ್ರಕಟಿಸಿದರು. ಪ್ರಥಮ 5100 ರೂ., ದ್ವಿತೀಯ 3100 ರೂ. ಹಾಗೂ ತೃತೀಯ ಬಹುಮಾನ 2100 ರೂ. ನೀಡಲಾಗುವದು ಎಂದು ಪ್ರಕಟಿಸಿದರು.
ಸಾನ್ನಿಧ್ಯ ವಹಿಸಿದ್ದ ಡಾ| ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಶಾಲೆ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ಸೀಗಬೇಕೆಂದು ಶಿಬಿರ ಏರ್ಪಡಿಸಲಾಗಿದೆ.
Related Articles
ಸದುಪಯೋಗ ಪಡೆಯಬೇಕು. ಈ ಶಿಬಿರದಲ್ಲಿ ಸೇವೆ, ಇಷ್ಟಲಿಂಗದ ವೈಜ್ಞಾನಿಕತೆ, ಪಂಚಾಚಾರ , ಷಟ್‌ಸ್ಥಲ, ಶಿಸ್ತು ಸ್ವತ್ಛತೆ ಮತ್ತು ಉತ್ಸಾಹ, ಆತ್ಮವಿಶ್ವಾಸ, ನೈತಿಕ ಶಿಕ್ಷಣ, ಅಷ್ಟಾವರಣ, ದೇಶಭಕ್ತಿ ಹೀಗೆ ಹಲವು
ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.
Advertisement
ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ ಮಾತನಾಡಿದರು. ಇದೇ ವೇಳೆ ಚೆನ್ನೈ ಶಾಂತಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಹುಲಸೂರನ ಡಾ| ಶಿವಾನಂದ ಮಹಾಸ್ವಾಮೀಜಿ ಹಾಗೂ ಗುವಿವಿಯಿಂದ ಡಾಕ್ಟರೇಟ್ ಪಡೆದ ಕಸಾಪ ತಾಲೂಕು ಅಧ್ಯಕ್ಷ ಡಾ| ರುದ್ರಮಣಿ ಮಠಪತಿ ಅವರನ್ನು ಸನ್ಮಾನಿಸಲಾಯಿತು. ಡಾ| ಎಸ್.ಬಿ. ದುರ್ಗೆಸ್ವಾಗತಿಸಿದರು. ಶಿವಶಂಕರ ಹಡಪದ ನಿರೂಪಿಸಿದರು.