Advertisement

ಸಿದ್ದು ಸರಕಾರ ಇರುವವರೆಗೆ ಅಭಿವೃದ್ಧಿ ಅಸಾಧ್ಯ: ಸ್ಮತಿ ಇರಾನಿ

07:50 AM May 08, 2018 | Team Udayavani |

ಸೋಮವಾರಪೇಟೆ: ಕರ್ನಾಟಕದಲ್ಲಿ ಸಿದ್ದರುಪಯ್ನಾ ಸರಕಾರ ಇರುವವರೆಗೆ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಹೇಳಿದರು. ಭಾರತೀಯ ಜನತಾ ಪಕ್ಷದ ವತಿಯಿಂದ ಇಲ್ಲಿನ ಜೇಸಿ ವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ರೈತರ ಬಗ್ಗೆ ಕಾಂಗ್ರೆಸ್‌ ಸರಕಾ ರಕ್ಕೆ ಕಾಳಜಿ ಇಲ್ಲ. ಅಭಿವೃದ್ಧಿಯ ಚಿಂತನೆಯಿಲ್ಲ. ಜನನಿ ಜನ್ಮ ಭೂಮಿಯ ಮೇಲೆ ಕಾಂಗ್ರೆಸ್ಸಿಗೆ ಪ್ರೀತಿ ಮತ್ತು ಗೌರವ ಇಲ್ಲ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣೆಯ ಸಂದರ್ಭ ಮಾತ್ರ ರಾಜ್ಯಕ್ಕೆ ಬರು ತ್ತಾರೆ. ಆದರೆ ಕನ್ನಡ ನಾಡಿನ ಮಣ್ಣಿನ ಮಹಿಮೆ ಮತ್ತು ವೀರರ ಬಗ್ಗೆ ಗೊತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

ರಾಹುಲ್‌ ಗಾಂಧಿ ಪ್ರತಿನಿಧಿ
ಸುವ ಅಮೇಠಿ ಕ್ಷೇತ್ರವನ್ನು ಅಭಿ ವೃದ್ಧಿ ಪಡಿಸಿದ ಮೋದಿಯವರು ಮಣ್ಣು ಪರೀûಾ ಕೇಂದ್ರ, ಕೃಷಿ ಅಧ್ಯಯನ ಕೇಂದ್ರ, ಪಾರ್ಸ್‌ಪೋರ್ಟ್‌ಸೇವಾ ಕೇಂದ್ರ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೋದಿ ಅವರು ಮಾಡಿದ್ದಾರೆ. ಈ ಅಭಿವೃದ್ಧಿಯನ್ನು ಮನಗಂಡು ಮೋದಿಯವರಿಗೆ ಮತ ಹಾಕಿ ಎಂದು ರಾಹುಲ್‌ ಗಾಂಧಿ ಹೇಳಬೇಕಿತ್ತು. ಆದರೆ ಕರ್ನಾಟಕದ ಸಿದ್ದರುಪಾಯ್ಯ ಅವರಿಗೆ ಮತ ನೀಡಿ ಎನ್ನುವುದು ಹಾಸ್ಯಾಸ್ಪದ ಎಂದರು.

ದೇಶದ ವಿಕಾಸ‌ಕ್ಕೆ ಶ್ರಮಿಸುತ್ತಿರುವ ಮೋದಿ ಕೈಯನ್ನು ಬಲಪಡಿಸಲು ಬಿಜೆಪಿಯನ್ನು ಬೆಂಬಲಿಸಿ ಕೇಂದ್ರ ಸರಕಾರದ ಯೋಜನೆಯನ್ನು, ಅಭಿವೃದ್ಧಿಯನ್ನು ಅರಿತುಕೊಳ್ಳುವ ಮೂಲಕ ಕಮಲದ ಚಿಹ್ನೆಗೆ ಮತ ನೀಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹೇಳಿದರು.

ಕರ್ನಾಟಕದಲ್ಲಿ ವೀರಸೇನಾನಿ, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಅವರನ್ನು ನೆನೆದು ಭಾಷಣವನ್ನು ಪ್ರಾರಂಭಿಸಿದ ಸ್ಮತಿ ಇರಾನಿ ಈ ಮಣ್ಣು ವೀರಯೋಧರ ನಾಡು ಆದರೆ, ವಂದೇ ಮಾತರಂಗೆ ಅವಮಾನ ಮಾಡಿದ ರಾಹುಲ್‌ಗಾಂಧಿ, ಅವರನ್ನು ಸಹಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು. ವಂದೇಮಾತರಂ ಗೀತೆ ಹಾಡಬೇಕಾದ ಸಂದರ್ಭದಲ್ಲೂ ಅವರು ಸಮಯವನ್ನು ನೋಡುತ್ತಾರೆ. ಇದೇನಾ ದೇಶಭಕ್ತಿ ? ಎಂದರು. ಭಾಷಣದ ನಡುವೆ ರಸ್ತೆಯಲ್ಲಿ ಸಾಗಿದ ಆ್ಯಂಬುಲೆನ್ಸ್‌ ನಲ್ಲಿರುವವರ ಆರೋಗ್ಯ ಚೇತರಿಕೆಗೆ ಸ್ಮತಿ ಇರಾನಿ ಹಾರೈಸಿ, ಚಪ್ಪಾಳೆ ಗಿಟ್ಟಿಸಿದರು. ಭಾಷಣ ಮುಗಿದ ಅನಂತರ ಬಸ್‌ನಿಲ್ದಾಣದ ಕ್ಯಾಂಟಿನೊಂದರಲ್ಲಿ ಜನಸಾಮಾನ್ಯರ ನಡುವೆ ಕಾಫಿ ಕುಡಿದು ತೆರಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next