Advertisement
ಲೈಟ್ ಮತ್ತು ಇಂಡಿಕೇಟರ್ನಿಮ್ಮ ವಾಹನ ಹಳತಾಗಿದ್ದರೂ, ಹೊಸತಾಗಿದ್ದರೂ, ನಿಯಮಿತವಾಗಿ ಹೆಟ್‌ಲೆçಟ್ ಮತ್ತು ಇಂಡಿಕೇಟರ್ ಲೈಟ್ ಗಳು ಅಲ್ಪ ಒದ್ದೆ ಬಟ್ಟೆಯಿಂದ ಒರೆಸುತ್ತಿರಬೇಕು. ಇದರ ರಿಫ್ಲೆಕ್ಟರ್ ಚೆನ್ನಾಗಿದ್ದು ಬೆಳಕು ಚೆನ್ನಾಗಿ ರಸ್ತೆಗೆ ಬೀಳುವಂತೆ ಇರಬೇಕು. ಒಂದು ವೇಳೆ ನಿಮ್ಮ ದ್ವಿಚಕ್ರವಾಹನ ಹಳತಾಗಿದ್ದು ಅದರ ಫೈಬರ್ ಗ್ಲಾಸ್ ತೀರ ಹಳತಾಗಿದೆ ಎಂದರೆ ಅದನ್ನು ಬದಲಾಯಿಸುವುದು ಒಳ್ಳೆಯದು. ಒಂದು ವೇಳೆ ಬಣ್ಣ ಮಾಸಿದ್ದರೆ ಟೂತ್ ಪೇಸ್ಟ್ (ಕೋಲ್ಗೇಟ್ ವೈಟ್) ರೀತಿಯದ್ದು ಚೆನ್ನಾಗಿ ಹಚ್ಚಿ ಬಟ್ಟೆಯಲ್ಲಿ ಒರೆಸಿದರೆ ಹೊಳಪು ಬರುತ್ತದೆ. ಬ್ರೇಕ್‌ಲೈಟ್, ಇಂಡಿಕೇಟರ್‌ಗಳಿಗೂ ಇದೇ ಮಾದರಿ ಮಾಡುವುದು ಉತ್ತಮ. ಒಂದು ವೇಳೆ ಬಲ್ಬ್ ಸರಿಯಾಗಿಲ್ಲ. ಇಂಡಿಕೇಟರ್ ಮುರಿದಿದ್ದರೆ ಕೂಡಲೇ ಬದಲಾಯಿಸಿ. ಕಾನೂನು ಪ್ರಕಾರ ಇದು ಸುಸ್ಥಿತಿಯಲ್ಲಿರಬೇಕಾದ್ದು ಅಗತ್ಯ.
ಹಾರನ್ ಒಳಗೆ ಒಂದು ಕಾಯಿಲ್ ಇದ್ದು ಇಲ್ಲಿ ಧನ ಮತ್ತು ಋಣ ವಿದ್ಯುತ್ ಹರಿಯುವುದರಿಂದ ಶಬ್ದ ಹೊರಸೂಸುತ್ತದೆ. ಒಂದು ವೇಳೆ ವಿದ್ಯುತ್ ಹರಿವ ಭಾಗದಲ್ಲಿ ಸಮಸ್ಯೆ ಇದ್ದರೆ ಹಾರನ್ ಚಾಲೂ ಆಗದು ಅಥವಾ ಬೈಕ್‌ನಲ್ಲಿ ಫ್ಯೂಸ್ ಹೋಗಿದ್ದರೆ ಹಾರನ್ ಆಗದು. ಹಾರನ್‌ನಲ್ಲಿ ಶಬ್ದ ಹೊರಸೂಸಲು ಬೇಕಾದ ಧನ-ಋಣದ ನಡುವಿನ ಪಿನ್ ರೀತಿಯ ವ್ಯವಸ್ಥೆ ಸರಿಯಾಗಿರದಿದ್ದರೂ ಶಬ್ದ ಬಾರದು. ಇದಕ್ಕಾಗಿ ಹಾರನ್ ಹಿಂಭಾಗ ಪುಟ್ಟ ಬೋಲ್ಟ್ ಇದ್ದು ಅದನ್ನು ಸರಿಯಾಗಿರಿಸುವುದು ಅಗತ್ಯ. ಆದಾಗ್ಯೂ ಹಾರನ್ ಸರಿಇಲ್ಲ ಅಥವಾ ವಿದ್ಯುತ್ ಹರಿವ ಕ್ಲಿಪ್ ಗಳು ಸರಿಯಾಗಿಲ್ಲ ಎಂದರೆ ಬದಲಾಯಿಸಬೇಕಾದ್ದು ಅಗತ್ಯ. ಮಳೆ ಸಂದರ್ಭದಲ್ಲಿ ನೀರು ಇದರೊಳಗೆ ಹರಿದು ಹಾರನ್ ಕೈಕೊಡುವುದು ಹೆಚ್ಚು. ಹಾನಿಯಾಗುವ ಸಾಧ್ಯತೆ
ಪ್ರಕಾಶ ಮಾನವಾದ ಬೆಳಕಿಗೆ ಹೆಚ್ಚಿನ ಸಾಮರ್ಥ್ಯದ ಬಲ್ಬ್ ಗ ಳನ್ನು ಅಳವಡಿಸಿಕೊಳ್ಳಬಹುದಾದರೂ, ಇದರಿಂದ ರಿಪ್ಲೆಕ್ಟರ್‌ಗೆ ಹಾನಿಯಾಗುವ ಸಾಧ್ಯತೆ ಇದೆ. ಜತೆಗೆ ಬೈಕ್‌ನ ಕಾಯಿಲ್ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಇದೆಯೇ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು.
Related Articles
Advertisement