Advertisement
ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಗುತ್ತಿಗೆದಾರನ ಮೇಲೆ ಕ್ರಮ ನಿಶ್ಚಿತ. ಮಳೆ ಬಂದಾಗ ಮಾತ್ರ ಈ ವಿಚಾರ ಚರ್ಚೆ ಮಾಡಿ ನಂತರ ಸುಮ್ಮನಾಗುವುದಿಲ್ಲ. ಈ ವಿಚಾರದಲ್ಲಿ ಸರಕಾರ ಗಂಭೀರವಾಗಿ ಪರಿಗಣಿಸಿದೆ.ಮಳೆ ಬಂದಾಗ ನಿರಂತರ ನೀರು ತುಂಬುವ ಪ್ರದೇಶ ಗುರುತು ಮಾಡಿ, ಅವಕ್ಕೆ ಶಾಸ್ವತ ಪರಿಹಾರ ಕಂಡು ಹಿಡಿಯಲಾಗುತ್ತದೆ.ಮೈಸೂರಿನಲ್ಲಿ ಸಿಎಂ ಹೇಳಿಕೆ ನೀಡಿದ್ದಾರೆ.
Related Articles
ಬೇರೆ ಬೇರೆ ಸೈಕ್ಲೋನ್ ಆಗುತ್ತಿದ್ದು, ಮಳೆ ಬರುತ್ತಿದೆ, ಹೀಗಾಗಿ ಗುಂಡಿ ಮುಚ್ಚೋಕು ಕಷ್ಟ ಆಗುತ್ತಿದೆ. ನೀರು ನಿಂತು ಒಣಗುವ ವರೆಗೂ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.
Advertisement
ಕೂಡಲೇ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ ನೀರು ನುಗ್ಗಿರುವ ಕಡೆ ಎಚ್ಚೆತ್ತುಕೊಂಡು ಸರಿ ಮಾಡಲು ಸೂಚಿಸಿದ್ದೇನೆ.ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಂಡ ಮಾಡಿ ಮರ ಬಿದ್ದಾಗ ತುಂಡರಿಸಲು ಹೇಳಿದ್ದೇನೆ. ನಾನು ಕೂಡ ಸ್ಥಳಕ್ಕೆ ಹೋಗುತ್ತೇನೆ. ದಸರಾ ಕಾರ್ಯಕ್ರಮ ಮುಗಿಸಿಕೊಂಡು ಬಂದು ಇದನೆಲ್ಲ ನೋಡುತ್ತೇನೆ ಎಂದರು. ಬೆಂಗಳೂರು ಉಸ್ತುವಾರಿ ವಿಚಾರ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನದಲ್ಲಿ ಇದೆ ಅವರೆ ತೀರ್ಮಾನ ಮಾಡುತ್ತಾರೆ. ಸದ್ಯ ಮಳೆ ಅನಾಹುತದ ಬಗ್ಗೆ ಮೊದಲು ತೀರ್ಮಾನ ಮಾಡುವುದು ಎಂದರು.