Advertisement

ಕಾಪು‌ ಲೈಟ್ ಹೌಸ್ ನಿಂದ 15 ಕಿ. ಮೀ. ದೂರದಲ್ಲಿ‌ ಸಂಕಷ್ಟಕ್ಕೆ ಸಿಲುಕಿರುವ ಬೋಟ್ ಸಿಬ್ಬಂದಿಗಳು

12:55 PM May 16, 2021 | Team Udayavani |

ಕಾಪು: ನವಮಂಗಳೂರು ಬಂದರಿನ  ಹೊರವಲಯದಲ್ಲಿ  ಮೂರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಗ್  ಕೋರಂಗಲ ಆಪರೇಷನ್ ಮೈನ್  ಕಾಪು ಬಳಿ ಕಲ್ಲಿಗೆ ಢಿಕ್ಕಿಹೊಡೆದು ಅಪಾಯಕ್ಕೆ ಸಿಲುಕಿದೆ.

Advertisement

ಇದರಲ್ಲಿ 9 ಜನ ಸಿಬಂದಿಗಳಿದ್ದು, ಅಪಾಯದಲ್ಲಿದ್ದಾರೆ. ಇದರಲ್ಲಿ ಅಪಾರ ಪ್ರಮಾಣದ ಡೀಸೆಲ್, ಆಯಿಲ್ ಇದೆ ಎಂದು ತಿಳಿದು ಬಂದಿದೆ. ದೂರದ ಸಮುದ್ರದಲ್ಲಿ ಮೂರಿಂಗ್ ಸೆಂಟರ್ ಇದ್ದು ತೈಲ ಕಚ್ಚಾ ಸರಕು ಹೊತ್ತು ತರುವ ಬೃಹತ್ ಹಡಗುಗಳಿಗೆ ಈ ಟಗ್ ಗಳು ನೆರವು ನೀಡುವ ಕೆಲಸ ಮಾಡುತ್ತಿದೆ. ಈ ಟಗ್ ಗುತ್ತಿಗೆ ಕಂಪನಿಯ ಗುತ್ತಿಗೆ ಕೊನೆಗೊಂಡಿದ್ದು ,ನವಮಂಗಳೂರಿನ ಬಂದರಿನ ಹೊರ ವಲಯದಲ್ಲಿ ಆಂಕರ್ ಹಾಕುವಂತೆ ಬಂದರು ಮಂಡಳಿಯಿಂದ  ಸೂಚಿಸಲಾಗಿತ್ತು.

ಇದನ್ನೂ ಓದಿ:  ಕಾಪು ಬಳಿ ಕಲ್ಲಿಗೆ ಢಿಕ್ಕಿ ಹೊಡೆದ ಟಗ್: ಅಪಾಯದಲ್ಲಿ 9 ಜನ ಸಿಬ್ಬಂದಿಗಳು

ಭಾರೀ ಗಾಳಿಗೆ ಆಂಕರ್ ತುಂಡಾಗಿ ಇದೀಗ ಕಾಪು ಸಮೀಪ ಕಾಣ ಅಪಘಾತಕ್ಕೀಡಾಗಿದೆ. ಇವರ ರಜ್ಷಣಾ ಕಾರ್ಯಾಚರಣೆಗೆ ಕೋಸ್ಟ್ ಗಾರ್ಡ್ ಗೆ  ಹೆಲಿಕಾಪ್ಟರ್ ನ ನೆರವು ಮುಂಬೈನಿಂದ ಬರಬೇಕಿದ್ದು , ಕೆಲವೇ ಗಂಟೆಗಳಲ್ಲಿ ರಕ್ಷಣೆ ನಡೆಯುವ ನಿರೀಕ್ಷೆಯಿದೆ.

Advertisement

ಕಾಪು ಲೈಟ್ ಹೌಸ್ ಬಳಿಯ ಬಂಡೆಯ ಮೇಲೆ ಸಿಲುಕಿಕೊಂಡಿರುವ ಕೋರಂಗಲ್ ಎಕ್ಸ್ ಪ್ರೆಸ್ ವೆಸೆಲ್ ಬೋಟ್ ನಲ್ಲಿ‌ ಸಿಲುಕಿರುವವರ ರಕ್ಷಣೆಗೆ ಕರಾವಳಿ ಕಾವಲು ಪಡೆ, ಉಡುಪಿ ಜಿಲ್ಲಾ ಪೊಲೀಸ್ ಪಡೆ, ಕೀರೋಸ್ ಕಂಪೆನೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಕೋರಂಗಲ್ ವೆಸೆಲ್ ಬೋಟ್ ನಲ್ಲಿ ಇರುವವರ ಹೆಸರು : ಮುಲ್ಲಾ ಖಾನ್ (ಕ್ಯಾಪ್ಟನ್), ಗೌರವ್ ಕುಮಾರ್ (ಸೆಕೆಂಡ್ ಕ್ಯಾಪ್ಟನ್), ಶಾಂತನು ಎ.ವಿ., ರಾಹುಲ್,  ದೀಪಕ್, ಪ್ರಶಾಂತ್, ತುಷಾರ್, ಲಕ್ಷ್ಮೀ ನಾರಾಯಣ್, ರೂಡ್ ಅಹಮದ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೀ ರೋಸ್ ಕಂಪೆನಿಯ ಮ್ಯಾನೇಜರ್ ವೇಲು ತಿಳಿಸಿದ್ದಾರೆ.

ಇದನ್ನೂ ಓದಿ: ‘ತೌಕ್ತೆ’ ಅಬ್ಬರ : ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಬಿ.ಎಸ್. ವೈ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next