Advertisement

ಒಂದನೇ ಮಹಾಯುದ್ಧ ಮುಗಿದು 100 ವರ್ಷ

08:10 AM Nov 12, 2018 | Karthik A |

ವಿಶ್ವದ ಮೊದಲ ಮಹಾಯುದ್ಧ ಮುಕ್ತಾಯವಾಗಿ ರವಿವಾರಕ್ಕೆ ಸರಿಯಾಗಿ ನೂರು ವರ್ಷಗಳು ಸಂದಿವೆ. 1914ರ ಜು.28ರಿಂದ 1918 ನ.11ರವರೆಗೆ ಭೀಕರವಾಗಿ ನಡೆದ ಯುದ್ಧದಲ್ಲಿ 4 ಕೋಟಿ ಮಂದಿಯ ಜೀವಹಾನಿಯಾಗಿದೆ. 2.3 ಕೋಟಿ ಸೈನಿಕರು ಗಾಯಗೊಂಡಿದ್ದರು. ಭಾರತದಿಂದಲೂ ಸಾವಿರಾರು ಮಂದಿ ಸೈನಿಕರು ಯುದ್ಧದಲ್ಲಿ ಭಾಗಿಯಾಗಿ ಹುತಾತ್ಮರಾಗಿದ್ದಾರೆ. ಹೊಸದಿಲ್ಲಿ, ನ್ಯೂಯಾರ್ಕ್‌ ಸೇರಿದಂತೆ ವಿಶ್ವದ ಎಲ್ಲೆಡೆ ಮಡಿದವರಿಗಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

74 ಸಾವಿರ – ಅಸುನೀಗಿದ ಭಾರತೀಯರು
13 ಲಕ್ಷ ಪಾಲ್ಗೊಂಡಿದ್ದ ಭಾರತದ ಸೈನಿಕರು
11 ವಿಕ್ಟೋರಿಯಾ ಕ್ರಾಸ್‌- ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ಸಿಕ್ಕ ಪದಕಗಳು
37 ಲಕ್ಷ ಟನ್‌- ಯುದ್ಧದ ವೇಳೆ ಪೂರೈಕೆಯಾದ ವಿವಿಧ ವಸ್ತುಗಳು

ವಿಶ್ವದ ಮೊದಲ ಮಹಾಯುದ್ಧ ಮುಕ್ತಾಯವಾಗಿ ಸರಿಯಾಗಿ 100 ವರ್ಷ ಸಂದಿದೆ. ವಿಶ್ವದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಸೌಹಾರ್ದಯುತ, ಭ್ರಾತೃತ್ವದ ವಾತಾವರಣ ಉಂಟು ಮಾಡಲು ಪ್ರಯತ್ನಿಸುತ್ತಿದ್ದೇವೆ. ಹುತಾತ್ಮರಾದ ನಮ್ಮ ಭಾರತೀಯರನ್ನು ಯಾವತ್ತೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ.
— ನರೇಂದ್ರ ಮೋದಿ ಪ್ರಧಾನ ಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next