Advertisement

ಸ್ವತ್ಛ ಮನಸ್ಸುಗಳಿಂದ ಮಾತ್ರದೇಶ ಸದೃಢವಾಗಲು ಸಾಧ್ಯ

05:58 PM Mar 13, 2018 | Team Udayavani |

ಸುರಪುರ: ಭಗವಂತನು ಕೊಟ್ಟಿರುವ ದೇಹದಲ್ಲಿ ಇರುವ ಇಂದ್ರೀಯಗಳು ಕೇವಲ ಬೋಗಕಲ್ಲ. ದೇಶ ಸೇವೆಗೆ ಒಂದಿಷ್ಟು ಅಣಿಗೊಳಿಸಬೇಕು. ದೇಹ ಒಂದೆ ದಂಢಿಸಿದರೆ ಸಾಲದು ಇದಕ್ಕೆ ತನು ಮನ ಎರಡನ್ನು ಸ್ವತ್ಛವಾಗಿಟ್ಟುಕೊಂಡಾಗ ಮಾತ್ರ ಭಾರತ ಸದೃಢವಾಗಲು ಸಾಧ್ಯ ಎಂದು ಕಣ್ವಮಠದ ವಿದ್ಯಾವಾರಿತೀರ್ಥರು ಹೇಳಿದರು.

Advertisement

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸೋಮವಾರ ದೇವತೀರ್ಥದ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ನನ್ನ ಭಾರತ ಸ್ವರ್ಣಿಮ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಯುವ ಪೀಳಿಗೆ ಯಾವ ಹಾದಿಯಲ್ಲಿ ನಡೆಯುತ್ತಿದೆ, ಅದೇ ಹಾದಿಯಲ್ಲಿ ದೇಶ ಸಾಗುತ್ತಿದೆ. ಕಾರಣ ಈ ಅಭಿಯಾನದೊಂದಿಗೆ ಸದೊಪಯೋಗ ಪಡಿಸಿಕೊಂಡ ಸ್ವಧರ್ಮ ನಿಷ್ಠ ಪರಧರ್ಮಸಹಿಷ್ಣುತೆಯೊಂದಿಗೆ ದೇಶಕಟ್ಟುವಲ್ಲಿ ಕೈ ಜೋಡಿಸಿ ಎಂದು ಯುವಕರಿಗೆ ಕರೆ ನೀಡಿದರು.

ನಂತರ ಗುಜುರಾತನಿಂದ ಆಗಮಿಸಿ ಅಭಿಯಾನದ ರುವಾರಿ ಬ್ರಹ್ಮಕುಮಾರಿ ರಾಣಿ ಮಾತನಾಡಿ, ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕತೆಯನ್ನು ಬೆನ್ನು ಹತ್ತಿ ಯುವಕರು ಪಾಶ್ಚಾತ್ಯ ಸಂಸ್ಕೃತಿ ಮೊರೆ ಹೊಗುತ್ತಿದ್ದಾರೆ. ಇದರಿಂದ ಯುವಕರಲ್ಲಿ ನಕಾರತ್ಮಕ ಚಿಂತನೆಗಳು ಹೆಚ್ಚುತ್ತಿವೆ. ಭಾರತೀಯ ಸಂಸಕೃತಿಯನ್ನು ಅಳವಡಿಸಿಕೊಂಡು ಭಾರತವನ್ನು ವಿಶ್ವಗುರುವಾಗಿಸುವಂತೆ ಕರೆ ನೀಡಿದರು.ಇದಕ್ಕೂ ಮೊದಲು ಅಭಿಯಾನದ ಬಸ್ಸು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಅಭಿಯಾನ ನಡೆಸಿದರು.
 
ಬ್ರಹ್ಮಕುಮಾರಿಯರಾದ ವಿಜಯ, ಜ್ಯೋತಿ ರಾಧಾಬೆನ್‌ ಮಾತನಾಡಿದರು. ಧೇವತೀರ್ಥದ ಬಿಕೆ ರಾಗಿಣಿ ನೇತೃತ್ವ ವಹಿಸಿದ್ದರು. ಸುಮನ್‌, ಕಮಲ್‌, ಅತುಲ, ರಾಯಚಂದ ಜೈನ್‌, ಸಿಸ್ಟರ್‌ ಜೆಸ್ಸಿ, ಸೂಗುರೇಶ ವಾರದ, ಉಸ್ತಾದ ವಜಾಹತ್‌ ಹುಸೇನ್‌, ಭಿಮಣ್ಣ ಅವಂಟಿ, ಗ್ಯಾನಚಂದ ಜಾಛೇಡ್‌, ಮಾಣಿಕಚಂದ, ಬಸಣ್ಣ ಶರಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next