Advertisement

ಉದ್ಯೋಗಿಗಳ ಬೆವರ ಮೇಲೆ ಐಟಿ ದೋಣಿ ವಿಹಾರ!

01:01 PM Jan 03, 2018 | |

ಅತ್ತ ಅಮೆರಿಕದಂಥ ವಿಕಸಿತ ದೇಶಗಳಲ್ಲಿ “ಭಾರತೀಯರೇ ದೇಶ ಬಿಟ್ಟು ತೊಲಗಿ’ ಎಂಬ ಎಚ್ಚರಿಕೆಯ ಸಂದೇಶಗಳು ಬರುತ್ತಿವೆ. ಇನ್ನೊಂದೆಡೆ ಐಟಿ ಉದ್ಯೋಗದ ಮೂಲನೆಲೆಯೇ ಟೊಳ್ಳಾಗಿ ಬಿಟ್ಟಿದೆ. ಸುಮಾರು 1 ದಶಕದಿಂದ ಸಾಫ್ಟ್ವೇರ್‌ ವಲಯದ ಹೊಸ ಉದ್ಯೋಗಿಗಳು (ಫ್ರೆಷರ್ಸ್‌) ಮತ್ತು ಕೆಳ-ಮಧ್ಯಮ ಕ್ರಮದ ಕೆಲಸಗಾರರ ಸಂಬಳ ಅತ್ತಿತ್ತ ಅಲುಗಾಡುತ್ತಿಲ್ಲ. 

Advertisement

ಅದೊಂದು ಸಮಯವಿತ್ತು. ಆಗ ಐಟಿ ಕ್ರಾಂತಿ ದೇಶದ ಉದ್ಯೋಗ ವಲಯಕ್ಕೆ ರೆಕ್ಕೆ ಕಟ್ಟಿ ಹಾರಾಡಿಸಲು ಯಶಸ್ವಿಯಾಗಿ ಬಿಟ್ಟಿತು. ಅದಕ್ಕೂ ಮೊದಲು ವಿದ್ಯಾವಂತ ಯುವಕರು ಯಾವುದೋ ಮಾಮೂಲಿ ವೇತನದ ನೌಕರಿ ಮಾಡುವುದೋ ಅಥವಾ ನಿರುದ್ಯೋಗಿಯಾಗುಳಿಯುವ ಅನಿವಾರ್ಯತೆ ಎದುರಿ ಸು ತ್ತಿದ್ದರು. ಐಟಿ ಕ್ರಾಂತಿಯಾದದ್ದೇ ಭಾರತೀಯ ಯುವಕ ದೇಶ- ವಿದೇಶದಲ್ಲಿ ಅತ್ಯುತ್ತಮ ಕೆಲಸದ ಹಕ್ಕುದಾರನಾದ ಮತ್ತು ತನ್ನ ಪ್ರತಿಭೆಯ ಪತಾಕೆಯನ್ನು ಹಾರಿಸಿದ. ಆದರೆ ಈಗ ಒಂದಾದ ನಂತರ ಒಂದರಂತೆ ಈ ಕ್ಷೇತ್ರದಿಂದ ಕೆಟ್ಟ ಸುದ್ದಿಗಳು ಹೊರಬರುತ್ತಿವೆ. ಟ್ರಂಪ್‌ ಆಡಳಿತ ಎಚ್‌-1ಬಿ ವೀಸಾದ ನಿಯಮಗಳನ್ನು ಬಿಗಿಗೊಳಿ ಸುತ್ತಲೇ ಸಾಗುತ್ತಿದೆ. ಇದೇ ವೇಳೆಯಲ್ಲೇ ಐಟಿ ಕ್ಷೇತ್ರದಲ್ಲಿ ಚೀನ- ಫಿಲಿಪ್ಪೀನ್ಸ್‌ನಂಥ ರಾಷ್ಟ್ರಗಳು ಭಾರತಕ್ಕೆ ಕಡಕ್‌ ಪೈಪೋಟಿ ನೀಡುವ ಸಾಮರ್ಥಯ ಬೆಳೆಸಿಕೊಂಡುಬಿಟ್ಟಿವೆ. ಹೊರಗಿನ ಅಂಧಕಾರದ ಮಾತು ಹಾಗಿರಲಿ, ಮನೆಯೊಳಗಿನ ಕತ್ತಲಿನ ಕಥೆಯೇನು? ಅದನ್ನೇನು ಮಾಡುವುದು? ಐಟಿಯನ್ನು ಕವಿದಿರುವ ಈ ಕಾರ್ಮೋಡದ ಒಂದು ಸಂಕೇತವು ಇತ್ತೀಚೆಗೆ ಇನ್ಫೋಸಿಸ್‌ ಸಹ- ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆಯೊಂದರಲ್ಲಿ ದೊರಕಿತು. ಐಟಿ ಕ್ಷೇತ್ರದ ಹಿರಿಯ ಅಧಿಕಾರ ವರ್ಗ ವಿಪರೀತ ವೇತನ ಪಡೆಯುವುದನ್ನು ವಿರೋಧಿಸಿದ ಮೂರ್ತಿಗಳು, ಉದ್ಯೋಗ ಕ್ಷೇತ್ರದಲ್ಲಿ ಪ್ರವೇಶಿಸುವ ನವಯುವಕರಿಗಾಗಿ ತುಸು ತ್ಯಾಗ ಮಾಡಲು ಸಲಹೆ ನೀಡಿದ್ದರು. 

 ಆದರೆ ಐಟಿ ವಲಯ ಭಾರತದ ಹೆಸರನ್ನು ಜಗತ್ತಿನಲ್ಲಿ ವಿಸ್ತರಿಸಿ ಎಷ್ಟು ಝಗಮಗಿಸುತ್ತಿದೆ ಎಂದರೆ ಅದರಲ್ಲಿನ ಮಧ್ಯಮ ಮತ್ತು ಕೆಳ ಹಂತದ ಕೆಲಸಗಾರರ ವೇತನಗಳತ್ತ ಯಾರ ಗಮನವೂ ಹೋಗುತ್ತಲೇ ಇಲ್ಲ. ಹಕೀಕತ್ತೇನೆಂದರೆ, ಸುಮಾರು 1 ದಶಕದಿಂದ ಸಾಫ್ಟ್ವೇರ್‌ ವಲಯದ ಹೊಸ ಉದ್ಯೋಗಿಗಳು(ಫ್ರೆಷರ್ಸ್‌) ಮತ್ತು ಕೆಳ-ಮಧ್ಯಮ ಕ್ರಮದ ಕೆಲಸಗಾರರ ಸಂಬಳ ಅತ್ತಿತ್ತ ಅಲುಗದೇ ಸ್ಥಿರವಾಗಿಯೇ ಇದೆ. ಆದರೆ ಇನ್ನೊಂದೆಡೆ ಹಿರಿಯ ಸ್ಥಾನದಲ್ಲಿ ಕುಳಿತಿರುವವರ ವೇತನ 1000 ಪಟ್ಟು ಹೆಚ್ಚಾಗಿಬಿಟ್ಟಿದೆ! ಒಂದೆಡೆ ಅಮೆರಿಕದಂಥ ವಿಕಸಿತ ದೇಶಗಳಲ್ಲಿ “ಭಾರತೀಯರೇ ದೇಶ ಬಿಟ್ಟು ತೊಲಗಿ’ ಎಂಬ ಎಚ್ಚರಿಕೆಯ ಸಂದೇಶಗಳು ಬರುತ್ತಿವೆ. ಇನ್ನೊಂದೆಡೆ ಐಟಿ ಉದ್ಯೋಗದ ಮೂಲನೆಲೆಯೇ ಟೊಳ್ಳಾಗಿ ಬಿಟ್ಟಿದೆ. ಈ ಟೊಳ್ಳುತನಕ್ಕೆ ಪ್ರತಿಭೆಯ ಕೊರತೆ ಕಾರಣವಲ್ಲ.

ನಾರಾಯಣ ಮೂರ್ತಿಯವರಿಗೂ ಮುನ್ನವೇ ಇಂಥದ್ದೇ ಎಚ್ಚರಿಕೆಯ ಮಾತನ್ನು ಇನ್ಫೋಸಿಸ್‌ನ ಪೂರ್ವ ಮುಖ್ಯ ವಿತ್ತ ಅಧಿಕಾರಿ ಟಿ.ವಿ. ಮೋಹನ್‌ದಾಸ್‌ ಪೈ ಅವರು  ಹೇಳಿದ್ದರು. ದೇಶ ದೊಳಗಿನ ದೊಡ್ಡ ಐಟಿ ಕಂಪನಿಗಳು ಒಂದು ಕೂಟ ಸ್ಥಾಪಿಸಿಕೊಂಡು ಹೊಸದಾಗಿ ನೌಕರಿಗೆ ಸೇರಿದ ಕೆಲಸಗಾರರಿಗೆ ಕಡಿಮೆ ಸಂಬಳ ಕೊಡುತ್ತಿವೆ ಎಂದೂ ಅವರು ಆರೋಪಿಸಿದ್ದರು. 

ಎಂಟ್ರಿ ಲೆವೆಲ್‌ ಸಾಫ್ಟ್ವೇರ್‌ ಎಂಜಿನಿಯರ್‌ಗಳಿಂದ ದಂಡಿ ಯಾಗಿ ಲಾಭ ಮಾಡಿಕೊಳ್ಳುವ ಈ ಕಂಪನಿಗಳು, ಅವರಿಗೆ ಪುಡಿಗಾಸು ನೀಡುತ್ತಿವೆ. ಕೆಳ ಮತ್ತು ಮಧ್ಯಮ ಸ್ಥರದ ಹಳೆಯ ಎಂಜಿನಿಯರ್‌ಗಳು ವಾರ್ಷಿಕ 3 ಅಥವಾ ಮೂರುವರೆ ಲಕ್ಷ ಪ್ಯಾಕೇಜ್‌ಗೂ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದರೆ ಹೊಸ ಕೆಲಸಗಾರರ ಬಗ್ಗೆ ಅವರಿಗೆ ಎಷ್ಟು ಭಯವಿದೆಯೋ ಯೋಚಿಸಿ? ಸ್ವಲ್ಪ ಅವಕಾಶ ಸಿಕ್ಕರೂ ತುಸು ಹೆಚ್ಚು ಸಂಬಳ ಪಡೆಯುವ ಎಂಜಿನಿ ಯರ್‌ಗಳಿಗೆ ಬಾಗಿಲು ತೋರಿಸಲು ಕಂಪನಿಗಳು ತಡ ಮಾಡುವುದಿಲ್ಲ. ಒಂದು ಅಂದಾಜಿನ ಪ್ರಕಾರ ಹೆಸರಾಂತ ಐಟಿ ಕಂಪನಿಗಳು ನವ ಸಾಫ್ಟ್ವೇರ್‌ ಎಂಜಿನಿಯರ್‌ಗಳಿಗೆ ವಾರ್ಷಿಕ ಮೂರುವರೆ ಲಕ್ಷ ಸಂಬಳ ಕೊಡುತ್ತವೆ. ಈ ಮೊತ್ತ 20 ವರ್ಷದ ಹಿಂದೆ ಎರಡೂವರೆ ಲಕ್ಷದಷ್ಟಿತ್ತು! ಅಂದರೆ ಇಷ್ಟು ವರ್ಷಗಳಲ್ಲಿ ತಿಂಗಳ ಸಂಬಳ 20 ಸಾವಿರದಿಂದ ಸುಮಾರು 30 ಸಾವಿರ ರೂಪಾಯಿಗೆ ಬಂದಿದೆಯಷ್ಟೆ. ಈ ವೇಳೆಯಲ್ಲೇ ದೇಶದಲ್ಲಿ ಬೆಲೆ ಏರಿಕೆಯ ದರ ಎಲ್ಲಿಂದ ಎಲ್ಲಿಗೆ ತಲುಪಿದೆಯೋ ಯೋಚಿಸಿ. 

Advertisement

ಉಲ್ಲೇಖನೀಯ ಸಂಗತಿಯೆಂದರೆ, ಪ್ರಸ್ತುತ ಸಾಫ್ಟ್ವೇರ್‌ ರಫ್ತು ವಹಿವಾಟು 110 ಶತಕೋಟಿ ಡಾಲರ್‌ನಷ್ಟಿದೆ ಮತ್ತು ಈ ಉದ್ಯೋಗದಲ್ಲಿ 2.5 ದಶಲಕ್ಷ ಕೆಲಸಗಾರರಿದ್ದಾರೆ. ಇದರಲ್ಲೂ ಗಮನಿಸಬೇಕಾದ ತಥ್ಯವೇನೆಂದರೆ, ಜಾಗತಿಕ ಔಟ್‌ಸೋರ್ಸಿಂಗ್‌(ಹೊರಗುತ್ತಿಗೆ) ಮಾರುಕಟ್ಟೆಯಲ್ಲಿ 60 ಪ್ರತಿಶತದಷ್ಟು ಹಿಡಿತ ನಮ್ಮ ದೇಶಕ ಕೈಯಲ್ಲಿದೆ. ಜಗತ್ತಿನ ಹತ್ತು ಪ್ರಮುಖ   ನಿಗಳು ಭಾರತದ್ದು. ಭಾರತ ಮೂಲದ ಪ್ರಮುಖ ಹತ್ತು ಐಟಿ ಕಂಪನಿಗಳಲ್ಲೇ ಅಜಮಾಸು 20 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಇದರಲ್ಲೂ  70 ಪ್ರತಿಶತ ಭಾರತೀಯ ಯುವಕ ರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡಿದರೆ ಇಂದಿಗೂ ಸಾಫ್ಟ್ವೇರ್‌ ಉದ್ಯೋಗದಲ್ಲಿ ಭಾರತಕ್ಕೆ ಪ್ರತಿಸ್ಪರ್ಧಿಯೇ ಇಲ್ಲ. ಆದರೂ ಈ ಚಿತ್ರಣ ಸಂಪೂರ್ಣವಾಗಿ ಪ್ರಕಾಶಮಾನವಾಗಿಲ್ಲ. 

ಐಟಿ ಉದ್ಯೋಗದಲ್ಲಿ ನಮ್ಮ ಯುವಕರಿಗೆ ನಿರಂತರ ಶೋಷಣೆ ಯಾಗುತ್ತಿದೆ ಎನ್ನುವ ಆರೋಪ ಬರುತ್ತಲೇ ಇದೆ. ಈ ಉದ್ಯೋಗಿ ಗಳಿಗೆ ಅಸಂಬದ್ಧ ಕರಾರುಗಳನ್ನು ವಿಧಿಸಲಾಗುತ್ತದೆ, ಕೆಲಸದ ಅವಧಿಯಂತೂ ಅಸ್ವಸ್ಥಗೊಳಿಸುವಂತಿರುತ್ತದೆ, ಒತ್ತಡ ವಿಪರೀತ ವಿರುತ್ತದೆ ಮತ್ತು ಭಾರತೀಯ ಕೆಲಸಗಾರರೆಡೆಗೆ ವಿದೇಶಿಯರ ವರ್ತನೆ ತುಂಬಾ ಕೆಟ್ಟದಾಗಿರುತ್ತದೆ. ಅದರಲ್ಲೂ ಬಿಪಿಒಗಳಲ್ಲಿ ಕೆಲಸ ಮಾಡುವ ಯುವಕರು ಸಾಮಾನ್ಯವಾಗಿ ಮಾನಸಿಕ ಸುಸ್ತು ಮತ್ತು ಒತ್ತಡಕ್ಕೆ ತುತ್ತಾಗುತ್ತಾರೆ ಎನ್ನುವ ಮಾತು ಸುಳ್ಳೇನೂ ಅಲ್ಲ. ಅವರ ಕೆಲಸದ ಸಮಯವೇ ವಿಚಿತ್ರವಾಗಿರು ತ್ತದೆ(ಬಹುತೇಕ ಬಿಪಿಒ ಕಚೇರಿಗಳು ರಾತ್ರಿಯ ವೇಳೆ ಆರಂಭ ಗೊಳ್ಳುತ್ತವೆ). ಅಲ್ಲಿ ಕೆಲಸ ಮಾಡುವ ಯುವತಿಯರು ಶೋಷಣೆ  ಗೊಳಗಾಗುವ ಸುದ್ದಿಗಳೂ ಆಗಾಗ ಬರುತ್ತಿರುತ್ತವೆ. ಅತಿ ಹೆಚ್ಚು ನೌಕರಿ ತೊರೆಯುತ್ತಿರುವವರ ಸಂಖ್ಯೆ ಬಿಪಿಒದಲ್ಲೇ ಇದೆ ಮತ್ತು ಈ ಕಾರಣಕ್ಕಾಗಿಯೇ “ಕೆಲಸಕ್ಕಾಗಿ ಕರೆ’ ನೀಡುವ ಜಾಹೀರಾತು
ಗಳಲ್ಲಿ ಬಿಪಿಒಗಳದ್ದೇ ಬಹುಪಾಲಿದೆ. 

ಇನ್ನು ಬಿಪಿಒ ಕೆಲಸಗಾರ ಭಾರತೀಯ ಎಂದು ಗೊತ್ತಾಗಿ ಬಿಟ್ಟರೆ ಸಾಕು, ವಿದೇಶಿ ಗ್ರಾಹಕರು ಅವರೊಂದಿಗೆ ಬಹಳ ಕೆಟ್ಟದಾಗಿ ಮಾತ ನಾಡುತ್ತಾರೆ ಎನ್ನುವ ಆರೋಪವೂ ಇದೆ. ಇದು ಸಾಲ ದೆಂಬಂತೆ, ಈ ಉದ್ಯೋಗಗಳ ಆಂತರಿಕ ಪರಿಸ್ಥಿತಿ ಹೇಗಿದೆಯೆಂದರೆ ಕೆಲಸದಲ್ಲಿ ಚಿಕ್ಕ ತಪ್ಪು ಮಾಡಿದರೂ ಯುವಕರು ನೌಕರಿ ಕಳೆದು ಕೊಳ್ಳಬೇಕಾಗುತ್ತದೆ. ಒಬ್ಬ ಉದ್ಯೋಗಿ 3 ತಪ್ಪು ಮಾಡಿದರೆ ಆತನನ್ನು ಕೆಲಸದಿಂದ ತೆಗೆಯುವ ಒಳ ನಿಯಮ ಕೆಲವು ಕಂಪನಿಗಳಲ್ಲಿದೆ.   

ಈ ಎಲ್ಲಾ ಸ್ಥಿತಿಯ ವಿಸ್ತೃತ ಅಧ್ಯಯನದ ಆಧಾರದ ಮೇಲೆಯೇ “ವಿವಿ ಗಿರಿ ರಾಷ್ಟ್ರೀಯ ಶ್ರಮ ಸಂಸ್ಥೆ’ ತನ್ನ ವರದಿಯಲ್ಲಿ, “”ಐಟಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿರುವ ಯುವಕರ ಪರಿಸ್ಥಿತಿ, 19ನೇ ಶತಮಾನದಲ್ಲಿ ರೋಮನ್‌ ಗುಲಾಮರೊಂದಿಗೆ ಭರ್ತಿ ಯಾಗಿದ್ದ ಹಡಗುಗಳಲ್ಲಿನ ಕೈದಿಗಳಂತಿದೆ” ಎಂದಿರುವುದು!  ಈ ವರದಿಯ ಹಿನ್ನೆಲೆಯಲ್ಲೇ ಎಡಪಂಥೀಯ ದಳಗಳು ಬಿಪಿಒ ಉದ್ಯಮ ನಿಜಕ್ಕೂ ಜಾಗತಿಕ ಬಂಡವಾಳಶಾಹಿ ಹಗರಣವಾಗಿದ್ದು, ಇದರಲ್ಲಿ ಸಿಲುಕಿ ನಮ್ಮ ಪ್ರತಿಭಾವಂತ ಯುವಕರ ಉಸಿರುಗಟ್ಟುತ್ತಿ ದ್ದಾರೆ ಎಂದಿದ್ದವು. ಡೆಲೋಯಾಯಿಟ್‌ ರಿಸರ್ಚ್‌ ಫ‌ರ್ಮ್ ಹೆಸರಿನ ಅಂತಾ ರಾಷ್ಟ್ರೀಯ ಸಂಸ್ಥೆಯೊಂದು “ಐಟಿ ಕ್ಷೇತ್ರದಲ್ಲಿ ಯುವಕರಿಗೆ ಅತ್ಯಧಿಕ ಸಂಬಳ ದೊರೆಯುತ್ತಿದೆ’ ಎನ್ನುವ ಭ್ರಮೆಯನ್ನು ಒಡೆಯುವ ಕೆಲಸ ಮಾಡಿದೆ. ಈ ಸಂಸ್ಥೆಯ ಪ್ರಕಾರ, ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ದೇಶದಲ್ಲಿನ ಸಾಫ್ಟ್ವೇರ್‌ ಎಂಜಿನಿಯರ್‌ಗಳಿಗಿಂತ ಎಂಟು ಪಟ್ಟು ಕಡಿಮೆ ಸಂಬಳವನ್ನು ಭಾರತೀಯ ಎಂಜಿನಿಯರ್‌ಗಳಿಗೆ ಕೊಡುತ್ತಿವೆಯಂತೆ. ಅಂದರೆ ವಿದೇಶಿ ಸಾಫ್ಟ್ವೇರ್‌ ಕಂಪನಿಯ ಉದ್ಯೋಗಿಯೊಬ್ಬ ತನ್ನ ದೇಶದಲ್ಲಿ ಭಾರತೀಯ ಉದ್ಯೋಗಿಗಿಂತ ಎಂಟು ಪಟ್ಟು ಹೆಚ್ಚು ಸಂಬಳ ಪಡೆಯುತ್ತಾನೆ ಎಂದರ್ಥ. ಬಿಪಿಒ ಉದ್ಯೋಗಿಗಳ ವಿಚಾರ ದಲ್ಲಂತೂ ಈ ಅಂತರ ಇನ್ನಷ್ಟು ಅಧಿಕವಿದೆ. 

ಹೆಚ್ಚು ಪದವೀಧರರು ಲಭ್ಯವಿರುವುದು ಮತ್ತು ಯುರೋಪ್‌- ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ವೇತನ ವ್ಯವಸ್ಥೆ ನಮ್ಮಲ್ಲಿರುವುದರಿಂದಲೇ ಅನೇಕ ನಗರಗಳು ಐಟಿ ವೃತ್ತಿಯ ದೊಡ್ಡ ಕೇಂದ್ರಗಳಾಗಿ ಬದಲಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಭಾರತದಿಂದ ಕೆಲಸ ಮಾಡಿಸಿದರೆ ಕಡಿಮೆ ಖರ್ಚಾಗುತ್ತದೆ ಮತ್ತು ಇಲ್ಲಿನ ಯುವಕರ ಇಂಗ್ಲಿಷ್‌ ಚೆನ್ನಾಗಿದೆ ಎಂಬ ಕಾರಣಕ್ಕಾಗಿ ಯುರೋಪ್‌-ಅಮೆರಿಕದ ನೂರಾರು ಕೆಲಸಗಳು ನಮ್ಮ ಕಾಲ್‌ಸೆಂಟರ್‌ ಆಪರೇಟರ್‌ಗಳಿಗೆ, ಡಾಟಾ ಎಂಟ್ರಿ ಕ್ಲರ್ಕ್‌ಗಳಿಗೆ, ಟೆಲಿಮಾರ್ಕೆಟಿಂಗ್‌ ನಿರ್ವಾಹಕರಿಗೆ ಮತ್ತು ಐಟಿ ವೃತ್ತಿಪರರಿಗೆ ಸಿಗುತ್ತಿವೆ. ಆದರೆ ಬಿಪಿಒ ಉದ್ಯೋಗದಲ್ಲಿರುವವರ ಪರಿಸ್ಥಿತಿ ಮತ್ತು ಶೋಷಣೆ ನಿಜಕ್ಕೂ ಚಿಂತೆಗೀಡುಮಾಡುವಂತಿದೆ. ಅಪಾಯ ಇಷ್ಟಕ್ಕೇ ನಿಲ್ಲುವುದಿಲ್ಲ. ಆಟೋಮೇಷನ್‌ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಸವಾಲಿದೆ. ಡಿಜಿಟಲ್‌ ತಂತ್ರಜ್ಞಾನದ ವ್ಯವಸ್ಥೆಯ ಕಾರ್ಯನಿರ್ವಹಣಾ ವೈಖರಿ ಬದಲಾಗುತ್ತಿದೆ. ಐಟಿ ಕಂಪನಿಗಳು ಉದ್ಯೋಗಿಗಳ ಸಂಬಳವನ್ನು ತಗ್ಗಿಸಿ, ಮಾನವ ಶ್ರಮದ ಜಾಗದಲ್ಲಿ ಸ್ವಚಾಲಿತ ತಂತ್ರಜ್ಞಾನಗಳನ್ನು ತರುತ್ತಿವೆ. ಎರಡು ದಶಕಗಳಿಂದ ಈ ಕಂಪನಿಗಳೂ ವಹಿವಾಟಿನಲ್ಲಿ ಯಾವ ಪಾಟಿ ಲಾಭ ಗಳಿಸಿವೆ ಯೆಂದರೆ, ಈಗ ಆಗಿನಷ್ಟು ಲಾಭ ಗಳಿಸುವುದಕ್ಕೆ ಸಾಧ್ಯವಿಲ್ಲ (ವ್ಯಾಪಾರ ಕುಸಿದಿದೆ). ಹಾಗೆಂದು ಒಂದು ವೇಳೆ ಇವೇನಾದರೂ ಉದ್ಯೋಗಿಗಳ ಸಂಬಳಕ್ಕೆ ಇನ್ನಷ್ಟು ಕತ್ತರಿ ಹಾಕಲು ಮುಂದಾದ ವೆಂದರೆ, ಐಟಿ ಎಂಬ ಜಾಗತಿಕ ಉದ್ಯೋಗದ ತಾರೆ ಉದುರಿ ಬಿದ್ದರೂ ಆಶ್ಚರ್ಯಪಡಬೇಕಿಲ್ಲ!

(ಮೂಲ: ಜನಸತ್ತಾ)
ಅಭಿಷೇಕ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next