Advertisement

ನಾಯಕರ ನೈತಿಕ ಶಕ್ತಿ ಕುಗ್ಗಿಸಲು ಐಟಿ ದಾಳಿ

03:12 PM Mar 30, 2019 | Team Udayavani |

ಮೈಸೂರು: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರ ಮನೆ ಮೇಲೆ ಆದಾಯ ತೆರಿಗೆ ದಾಳಿ ಮಾಡಿಸಿ, ನೈತಿಕ ಶಕ್ತಿ ಕುಗ್ಗಿಸಲು ಯತ್ನಿಸುತ್ತಿದ್ದಾರೆ.

Advertisement

ಇದಕ್ಕೆ ಯಾರು ಹೆದರಬೇಕಾಗಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ತಕ್ಕಪಾಠ ಕಲಿಸಿ ಎಂದು ಶಾಸಕ ಡಾ. ಯತೀಂದ್ರಸಿದ್ದರಾಮಯ್ಯ ಮನವಿ ಮಾಡಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಡಕೊಳ, ಬೀರಿಹುಂಡಿ, ಡಿಎಂಜಿ ಹಳ್ಳಿ, ಹಿನಕಲ್‌ ಗ್ರಾಪಂ ಕೇಂದ್ರಗಳಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಪರವಾಗಿ ಮತಯಾಚಿಸಿ ಮಾತನಾಡಿದರು.

ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೆ ರಾಮಮಂದಿರ, ಸರ್ಜಿಕಲ್‌ ದಾಳಿಯಂತಹ ಭಾವನಾತ್ಮಕ ವಿಷಯಗಳನ್ನು ಮಂದಿಟ್ಟುಕೊಂಡು ಚುನಾವಣೆಗೆ ಬಂದಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ರೈತರು ದೇಶಾದ್ಯಂತ ಚಳವಳಿ ಮಾಡುತ್ತಿದ್ದಾರೆ.

ಕೋಟಿಗಟ್ಟಲೆ ಬ್ಯಾಂಕ್‌ನಲ್ಲಿ ಸಾಲಮಾಡಿ ವಿದೇಶಕ್ಕೆ ಪರಾರಿಯಾಗುವವರಿಗೆ ಸಹಾಯಮಾಡುತ್ತಿದ್ದಾರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಬಿಜೆಪಿ ಸರ್ಕಾರ ಎಲ್ಲಾ ಭರವಸೆಗಳನ್ನು ಈಡೇರಿಸಲು ವಿಫ‌ಲವಾಗಿದೆ ಎಂದರು.

Advertisement

ನಮ್ಮ ಶಕ್ತಿ ನಮ್ಮ ಕಾರ್ಯಕರ್ತರು ಪ್ರತಿಯೊಬ್ಬ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಾಗಿ ಮನೆ ಮನೆಗೆ ತೆರಳಿ ಸಮ್ಮಿಶ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ತಿಳಿಸಿ ಮತದಾರರ ಮನವೊಲಿಸಿ ನಮ್ಮ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಜಿಪಂ ಮಾಜಿ ಸದಸ್ಯ ಪಟೇಲ್‌ ಜವರೇಗೌಡ, ನಾರಾಯಣ, ತಾಪಂ ಸದಸ್ಯರಾದ ಶ್ರೀಕಂಠ ತೊಂಡೇಗೌಡ, ಮಾರ್ಬಳ್ಳಿ ಕುಮಾರ್‌, ಗ್ರಾಪಂ ಅಧ್ಯಕ್ಷ ರಮೇಶ್‌, ಗುರುಪಾದಸ್ವಾಮಿ, ಕಡಕೊಳ ಕುಮಾರಸ್ವಾಮಿ, ಮಹೇಶ, ನಂಜಪ್ಪ ಮಹಾದೇವ್‌, ಚಂದ್ರು, ಸಿದ್ದರಾಮೇಗೌಡ, ಪಟೇಲ್‌ರಮೇಶ್‌, ನಾಗರಾಜು ಧನಗಳ್ಳಿ ಬಸವರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next