ಚಿತ್ತಾಪುರ: ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಸಮೀಪದ ಶ್ರೀ ಸಿಮೆಂಟ್ ಕಂಪನಿಯಲ್ಲಿ ಇತ್ತೀಚೆಗೆ ಬೆಲ್ಟ್ ಕಡಿದ ಅವಘಡದಲ್ಲಿ ಮೃತಪಟ್ಟಿದ್ದ ತಾಲೂಕಿನ ಅಳ್ಳೊಳ್ಳಿ ಗ್ರಾಮದ ಕಾರ್ಮಿಕ ಲಕ್ಷ್ಮಣ ಅವರ ಪತ್ನಿಗೆ ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ಅಧಿಕಾರಿ ಅರವಿಂದ ಪಾಟೀಲ್ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ನಂತರ ಸಿಪಿಐ ಶಂಕರಗೌಡ ಪಾಟೀಲ ಮಾತನಾಡಿ, ಕಂಪನಿ ಅಂದ ಮೇಲೆ ಸುತ್ತ ಮುತ್ತಲಿನ ಗ್ರಾಮದ ಹಾಗೂ ವಿವಿಧ ರಾಜ್ಯಗಳಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಕಂಪನಿ ಅಧಿಕಾರಿಗಳು ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಹೊಂದಬೇಕು. ಕಾರ್ಮಿಕರು ಹೆಲ್ಮೆಟ್, ಶೂ, ಜಾಕಿಟ್ ಹಾಕಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಬೇಕು. ಕಾರ್ಮಿಕರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಸಿ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಹೇಳಿದರು.
ಕಂಪನಿ ಅಧಿಕಾರಿಗಳು ನೀಡಿರುವ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕುಟುಂಬದವರಿಗೆ ಸಲಹೆ ನೀಡಿದರು.
ಮುಖಂಡ ನಿಂಗಣ್ಣ ಹೇಗಲೇರಿ ಮಾತನಾಡಿ, ಕಂಪನಿ ಆಡಳಿತ ಮಂಡಳಿಯವರು ಇಲ್ಲಿಯವರೆಗೆ ಕಂಪನಿಯಲ್ಲಿ ಯಾವುದೇ ಘಟನೆಗಳು ನಡೆದರೂ 15 ಲಕ್ಷ ರೂ. ನೀಡಿದ್ದರು. ಆದರೆ ಸೇಡಂ ಸಿಪಿಐ ಶಂಕರಗೌಡ ಪಾಟೀಲ ಅವರು ಚಿತ್ತಾಪುರ ತಾಲೂಕಿನಲ್ಲಿ ಕಳೆದ ಎಂಟಹತ್ತು ವರ್ಷಗಳಿಂದ ಸೇವೆ ಸಲ್ಲಿಸಿ ಸೇಡಂಗೆ ಸಿಪಿಐ ಆಗಿ ಹೋದರೂ ಮುತುವರ್ಜಿ ವಹಿಸಿ ಮೃತ ಕಾರ್ಮಿಕರ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದರು. ಅನಾಹುತವಾದ ಕೂಡಲೇ ಆಡಳಿತ ಮಂಡಳಿಗೆ ಹೇಳಿ ಹೈದ್ರಾಬಾದನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಈಗ ಕಾರ್ಮಿಕನ ಕುಟುಂಬಕ್ಕೆ ನ್ಯಾಯ ದೊರಕಿಸಿದ್ದಾರೆ ಎಂದರು.
ಸೇಡಂ ಪಿಎಸ್‌ಐ ಸುಶೀಲಕುಮಾರ ಮುಖಂಡರಾದ ಶಾಂತಪ್ಪ ಚಾಳಿಕಾರ, ಚನ್ನಮಲ್ಲಪ್ಪ, ಶರಣು ಡೋಣಗಾಂವ, ಕಾಶಪ್ಪ ಕಲಕರ್ಟಿ, ಶಿವಶರಣ ಮೇಂಗಾ, ನಂದಪ್ಪ ನಂಜಳ್ಳಿ, ಕಂಪನಿ ಆಡಳಿತ ಮಂಡಳಿ ಅಧಿಕಾರಿಗಳಾದ ಅರವಿಂದ ಪಾಟೀಲ, ಸತೀಶ ಶರ್ಮಾ, ಜಗನ್ನಾಥ ಚಿಂಚೋಳಿ, ಬಾಬು ತಿರಕನ್ನನವರ್ ಹಾಗೂ ಗ್ರಾಮಸ್ಥರು ಇದ್ದರು.
ಚಿತ್ತಾಪುರ: ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ಇತ್ತೀಚೆಗೆ ನಡೆದ ಅವಘಡದಲ್ಲಿ ಮೃತಪಟ್ಟಿರುವ ಅಳ್ಳೊಳ್ಳಿ ಗ್ರಾಮದ ಕಾರ್ಮಿಕ ಲಕ್ಷ್ಮಣ ಅವರ ಪತ್ನಿಗೆ ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ಅಧಿಕಾರಿ ಅರವಿಂದ ಪಾಟೀಲ 20 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.