Advertisement

ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌: ಭಾರತಕ್ಕೆ ಐದನೇ ಬಂಗಾರ

11:06 PM Oct 16, 2022 | Team Udayavani |

ಕೈರೊ (ಈಜಿಪ್ಟ್): ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ವರ್ಣ ಪದಕಗಳ ಸಂಖ್ಯೆ ಐದಕ್ಕೇರಿದೆ.

Advertisement

ರವಿವಾರದ 10 ಮೀ. ಏರ್‌ ರೈಫ‌ಲ್‌ ತಂಡ ಸ್ಪರ್ಧೆಯಲ್ಲಿ ರುದ್ರಾಂಕ್‌ ಬಾಳಾಸಾಹೇಬ್‌ ಪಾಟೀಲ್‌, ಕಿರಣ್‌ ಅಂಕುಶ್‌ ಜಾಧವ್‌ ಮತ್ತು ಅರ್ಜುನ್‌ ಬಬುಟ ಸೇರಿಕೊಂಡು ದೇಶಕ್ಕೆ 5ನೇ ಬಂಗಾರವನ್ನು ತಂದಿತ್ತರು.

ಇದು ರುದ್ರಾಂಕ್‌ ಪಾಟೀಲ್‌ ಗೆದ್ದ ದ್ವಿತೀಯ ಸ್ವರ್ಣ ಪದಕ. ಇದಕ್ಕೂ ಮೊದಲು 10 ಮೀ. ಆರ್‌ ರೈಫ‌ಲ್‌ ವೈಯಕ್ತಿಕ ವಿಭಾಗದಲ್ಲೂ ಅವರು ಬಂಗಾರಕ್ಕೆ ಗುರಿ ಇರಿಸಿದ್ದರು.

ರವಿವಾರದ ಸ್ಪರ್ಧೆಗಳಲ್ಲಿ ಭಾರತ ಒಂದು ಬೆಳ್ಳಿ ಹಾಗೂ 2 ಕಂಚಿನ ಪದಕವನ್ನೂ ಜಯಿಸಿತು. ಇದ ರೊಂದಿಗೆ ಭಾರತ ಒಟ್ಟು 5 ಚಿನ್ನ, ಒಂದು ಬೆಳ್ಳಿ ಹಾಗೂ 5 ಕಂಚಿನ ಪದಕ ಗಳೊಂ ದಿಗೆ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಿ ಯಾಗಿದೆ. ಚೀನ ಅಗ್ರಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next