ಹೊಸದಿಲ್ಲಿ: ಜರ್ಮನಿಯ ಸುಹ್ಲನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಧನುಷ್ ಶ್ರೀಕಾಂತ್ ಬಂಗಾರದ ಪದಕ ಜಯಿಸಿದ್ದಾರೆ. ಅವರು ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಈ ಸಾಧನೆಗೈದರು.
24 ಶಾಟ್‌ಗಳ ಫೈನಲ್‌ನಲ್ಲಿ ಧನುಷ್ ಶ್ರೀಕಾಂತ್ 249.4 ಅಂಕ ಸಂಪಾದಿಸಿ ದರು. ಈ ಸಂದರ್ಭದಲ್ಲಿ ಸ್ವೀಡನ್‌ನ ಪೊಂಟಸ್ ಕ್ಯಾಲಿನ್ ಮತ್ತು ಧನುಷ್ ಸಮಬಲ ಸಾಧನೆಗೈದರು. ಆದರೆ ಕ್ಲಿನಿಕಲ್ ಫಿನಿಶ್‌ನಲ್ಲಿ 1.3 ಅಂಕಗಳ ಹಿನ್ನಡೆ ಕಂಡ ಕ್ಯಾಲಿನ್‌ಗೆ ಬೆಳ್ಳಿ ಲಭಿಸಿತು. ಫ್ರಾನ್ಸ್‌ನ ರೊಮೇನ್ ಔಫ್ರೆàರ್ ಕಂಚು ಜಯಿಸಿದರು.
ಸ್ಕೀಟ್ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಒಲಿಯಿತು. ಹರ್ಮಿಹರ್ ಲಾಲಿ-ಸಂಜನಾ ಸೂದ್ ತೃತೀಯ ಸ್ಥಾನದ ಸ್ಪರ್ಧೆಯಲ್ಲಿ ಸ್ವೀಡನ್‌ನ ಡೇವಿಡ್ ಜಾನ್ಸನ್-ಫೆಲಿಶಿಯಾ ರಾಸ್ ವಿರುದ್ಧ ಜಯ ಸಾಧಿಸಿದರು.
ಭಾರತ ಈ ಕೂಟದಲ್ಲಿ 3 ಚಿನ್ನ, ಒಂದು ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದು ಅಗ್ರಸ್ಥಾನದಲ್ಲಿದೆ. ಅಮೆರಿಕ ದ್ವಿತೀಯ ಸ್ಥಾನದಲ್ಲಿದೆ (2 ಚಿನ್ನ, ಒಂದು ಬೆಳ್ಳಿ).
ಭಾರತಕ್ಕೆ ಇನ್ನೂ ಕೆಲವು ಪದಕಗಳು ಒಲಿಯಲಿವೆ. ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಮೂವರು ಫೈನಲ್ ತಲುಪಿದ್ದಾರೆ. ಧನುಷ್ ಶ್ರೀಕಾಂತ್ ಕೂಡ ಇದರಲ್ಲಿ ಸೇರಿದ್ದಾರೆ. ಉಳಿದಿಬ್ಬರೆಂದರೆ ಪ್ರಥಮ್ ಭದಾನ ಮತ್ತು ಅಭಿನವ್ ಶಾ.