ಲಿಮಾ (ಪೆರು): ಕಿರಿಯರ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ ಅಗ್ರಸ್ಥಾನದ ಗೌರವದೊಂದಿಗೆ ಸ್ಪರ್ಧೆ ಮುಗಿಸಿದೆ. ಭಾರತ ಒಟ್ಟು 30 ಪದಕಗಳಿಗೆ ಗುರಿ ಇರಿಸಿತು.
ಅಂತಿಮ ದಿನ ಅನೀಶ್ ಭನ್ವಾಲಾ, ಆದರ್ಶ್ ಸಿಂಗ್, ವಿಜಯವೀರ್ ಸಿಧು ಅವರನ್ನೊಳಗೊಂಡ ಪುರುಷರ ತಂಡ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿತು.
ಮಹಿಳೆಯರ ಡಬಲ್‌ಟ್ರ್ಯಾಪ್ ವಿಭಾಗದಲ್ಲಿ ಮಾನ್ವಿ ಸೋನಿ (105) ಚಿನ್ನ ಗೆದ್ದರು. ಭಾರತೀಯರೇ ಆದರೆ ಯೇಶಾಯಾ ಹಫೀಜ್ ಕಾಂಟ್ರಾಕ್ಟರ್ (90) ಬೆಳ್ಳಿ ಜಯಿಸಿರು. ಕಂಚಿನ ಪದಕವೂ ಭಾರತಕ್ಕೆ ಒಲಿಯಿತು. ಇದನ್ನು ಗೆದ್ದವರು ಹಿತಾಶಾ.
ಪುರುಷರ ಡಬಲ್ ಟ್ರ್ಯಾಪ್‌ನಲ್ಲಿ ವಿನಯ್ ಪ್ರತಾಪ್ ಸಿಂಗ್ ಚಂದ್ರಾವತ್ ಚಿನ್ನ ಗೆದ್ದರು. ಅವರು ಒಟ್ಟು 120 ಅಂಕ ಗಳಿಸಿದರು. ಬೆಳ್ಳಿ ಸೆಹಜ್‌ಪ್ರೀತ್ ಸಿಂಗ್‌ಗೆ, ಕಂಚು ಮಾಯಾಂಕ್ ಶೊಕೀನ್‌ಗೆ ಲಭಿಸಿತು.
ಇದನ್ನೂ ಓದಿ:ಲಖೀಂಪುರ ಹಿಂಸೆ: ಆಶಿಷ್ ಮಿಶ್ರಾ ಬಂಧನ; ಸತತ 8 ಗಂಟೆ ಎಸ್‌ಐಟಿ ವಿಚಾರಣೆ