Advertisement

ಜನವರಿಯಲ್ಲಿ 31 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

02:11 PM Dec 30, 2017 | Team Udayavani |

ಹೊಸದಿಲ್ಲಿ: ಇದೇ ವರ್ಷ ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಹಾರಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಂದಿನ ತಿಂಗಳು, ಒಮ್ಮೆಲೇ 31 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿ ಪ್ರಕಟಿಸಿದೆ. ಇವುಗಳಲ್ಲಿ ಭಾರತದ ಕಾಟೋìಸ್ಯಾಟ್‌ -2  ಸರಣಿಯ ಉಪಗ್ರಹವೂ ಸೇರಿದೆ ಎಂದು ಇಸ್ರೋ ಹೇಳಿದೆ. 

Advertisement

ಜನವರಿ 10ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ದಲ್ಲಿ ರುವ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ತನ್ನ ಪಿಎಸ್‌ಎಲ್‌ವಿ ರಾಕೆಟ್‌ನಲ್ಲಿ ಈ ಉಪಗ್ರಹಗಳನ್ನು ಕಳುಹಿಸುವುದಾಗಿ ಸಂಸ್ಥೆ  ತಿಳಿಸಿದೆ. 

ಇದೇ ವರ್ಷ ಆಗಸ್ಟ್‌ ತಿಂಗಳಲ್ಲಿ ಸಂಸ್ಥೆ ಕೈಗೊಂಡಿದ್ದ ಐಆರ್‌ಎನ್‌ಎಸ್‌ಎಸ್‌-1ಎಚ್‌ ಉಪಗ್ರಹದ ಉಡಾವಣೆ ವಿಫ‌ಲವಾಗಿತ್ತು. ಆ ವೈಫ‌ಲ್ಯದ ಅನಂತರ ಇಸ್ರೋ ವತಿಯಿಂದ ಯಾವುದೇ ಉಪಗ್ರಹಗಳ ಉಡಾವಣೆ ಆಗಿರಲಿಲ್ಲ. ಆಗಸ್ಟ್‌ ಪ್ರಕರಣದ ಅನಂತರ ಇಸ್ರೊ ಕೈಗೊಳ್ಳುತ್ತಿರುವ ಮೊದಲ ಉಡಾವಣೆ ಇದಾಗಿದೆ. ಅಂದಹಾಗೆ, ಕಾಟೋì ಸ್ಯಾಟ್‌-2 ಮಾದರಿಯ ಉಪಗ್ರಹವು ಭಾರತದ ಗಡಿಯೊಳಗಿನ ಭೂ ಪರಿವೀಕ್ಷಣೆಗಾಗಿ ಕಳುಹಿಸಲಾ ಗುತ್ತಿರುವ ಉಪಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next