Advertisement
ಯುಕೆ ಮೂಲದ ಒನ್‌ವೆಬ್ ಸಂಸ್ಥೆಯ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಹೊತ್ತು ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಎಲ್‌ವಿಎಂ3-ಎಂ2 ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಶನಿವಾರ ತಡರಾತ್ರಿ 12.07 ನಿಮಿಷಕ್ಕೆ ರಾಕೆಟ್ ಉಡಾವಣೆಯಾಗಿದ್ದು, ಈ ಮೂಲಕ ಇಸ್ರೋ ಹೊಸ ಇತಿಹಾಸ ಬರೆದಿದೆ.
Related Articles
ಮಹತ್ವದ ಮೈಲುಗಲ್ಲು ಸಾಧಿಸಿರುವ ಇಸ್ರೋ ವಿಜ್ಞಾನಿಗಳಿಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ದೇಶೀಯ ಸಾಮರ್ಥ್ಯಗಳನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದ ನಮ್ಮ ವಿಜ್ಞಾನಿಗಳ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಮುರ್ಮು ಟ್ವೀಟ್ ಮಾಡಿದ್ದಾರೆ.
Advertisement
ಭೂಸ್ವಾಧೀನ ಪೂರ್ಣತಮಿಳುನಾಡಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಕೆಟ್ ಉಡಾವಣಾ ವಲಯಕ್ಕಾಗಿ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ ಎಂದು ಇಸ್ರೋ ಮುಖ್ಯಸ್ಥರು ಭಾನುವಾರ ತಿಳಿಸಿದ್ದಾರೆ. ಶ್ರೀಹರಿಕೋಟದಿಂದ ಸುಮಾರು 650 ಕಿ.ಮೀ. ದೂರದಲ್ಲಿರುವ ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ ಉಡಾವಣಾ ವಲಯ ರೂಪಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ, 2023ರೊಳಗಾಗಿ ಭಾರತದಾದ್ಯಂತ ಕನೆಕ್ಟಿವಿಟಿ ಕಲ್ಪಿಸುವಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಲಂಡನ್ ಮೂಲಕ ಉಪಗ್ರಹ ಸಂವಹನ ಕಂಪನಿ ಒನ್‌ವೆಬ್ ಹೇಳಿದೆ.