Advertisement
ಚಂದ್ರನಲ್ಲಿ ನೀರಿನ ಅಂಶವಿರುವುದನ್ನು ಚಂದ್ರಯಾನ-2ರ ಭಾಗವಾಗಿದ್ದ ಆರ್ಬಿಟರ್ ಪತ್ತೆ ಹಚ್ಚಿದೆ. 2019ರ ಜು. 22ರಂದು “ಚಂದ್ರಯಾನ-2′ ಅನುಷ್ಠಾನಗೊಂಡಿತ್ತು. ಅದರಲ್ಲಿದ್ದ ಆರ್ಬಿಟರ್, ವಿಕ್ರಮ್ ಎಂಬ ಲ್ಯಾಂಡರ್ ಹಾಗೂ ಪ್ರಗ್ಯಾನ್ ಎಂಬ ರೋವರ್‌ಗಳನ್ನು ಹೊತ್ತಿದ್ದ “ಜಿಎಸ್‌ಎಲ್‌ವಿ ಮಾರ್ಕ್ 3′ ಎಂಬ ರಾಕೆಟ್, ಚಂದ್ರನತ್ತ ಪ್ರಯಾಣಿಸಿತ್ತು. ಆಕಾಶಕಾಯವು ಚಂದ್ರನನ್ನು ಪ್ರವೇಶಿಸುವ ಮೊದಲು ಅದರಲ್ಲಿದ್ದ ಆರ್ಬಿಟರ್, ಆಕಾಶಕಾಯದಿಂದ ಬೇರ್ಪಟ್ಟು ಚಂದ್ರನನ್ನು ಗಿರಕಿ ಹೊಡೆಯಲು ಆರಂಭಿಸಿತ್ತು. ಅದರಲ್ಲಿನ ಸ್ವದೇಶಿ ನಿರ್ಮಿತ “ಇಮೇಜಿಂಗ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್’ (ಐಐಆರ್‌ಎಸ್) ಎಂಬ ಇಮೇಜಿಂಗ್ ಪರಿಕರ, ಚಂದ್ರನ ವಿದ್ಯುದಯಸ್ಕಾಂತ ತರಂಗ ಗುತ್ಛಗಳನ್ನು ಅವಲೋಕಿಸಿ, ಚಂದ್ರನ ವಾತಾವರಣದಲ್ಲಿ ತೇವಾಂಶಕ್ಕೆ ಕಾರಣವಾಗುವ ಹೈಡ್ರಾಕ್ಸಿಲ್ ಹಾಗೂ ನೀರಿನ ಕಣಗಳನ್ನು ಪತ್ತೆ ಮಾಡಿದೆ.
Related Articles
Advertisement
ಒಂದು ಹೈಡ್ರಾಕ್ಸಿಲ್ ಕಣದಲ್ಲಿ ಒಂದು ಆಮ್ಲಜನಕ, ಮತ್ತೂಂದು ಜಲಜನಕ ವೆಂದು ಕರೆಯಲಾಗುತ್ತದೆ. ಇದು ಇಂಗಾಲದ ಯಾವುದೇ ಕಣ ಅಥವಾ ಧಾತುವಿನೊಂದಿಗೆ ಸಮ್ಮಿಳಿತಗೊಂಡರೆ ಆ ಕಣ ಅಥವಾ ಧಾತುವಿಗೆ “ನೀರಿನಲ್ಲಿ ಸುಲಭವಾಗಿ ಕರಗುವಂಥ ಗುಣ’ ಕೊಡುತ್ತದೆ. ಈ ಕಣಗಳು ಚಂದ್ರನಲ್ಲಿ ಇರಬಹುದಾದ ಕೆಲವು ಅನ್ಯ ಹೈಡ್ರಾಕ್ಸಿಲ್ ಕಣಗಳೊಂದಿಗೆ ಸಮ್ಮಿಳಿತಗೊಂಡಿರುವುದರಿಂದ ಅಲ್ಲಿ ನೀರಿನ ಕಣ ಪತ್ತೆಯಾಗಿರಬಹುದು.