Advertisement

ಕಾರ್ಟೋಸ್ಯಾಟ್-2 ಉಡಾವಣೆ ಯಶಸ್ವಿ

09:52 AM Jan 13, 2018 | |

ಶ್ರೀಹರಿಕೋಟಾ: ಹವಾಮಾನ ವೀಕ್ಷಣೆ ಸೇರಿ ಇನ್ನೂ ಅನೇಕ ಉದ್ದೇಶಗಳ ಉಪಗ್ರಹ ಕಾರ್ಟೋಸ್ಯಾಟ್-2 ಹಾಗೂ ಆರು ರಾಷ್ಟ್ರಗಳ 25 ನ್ಯಾನೋ ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ ಸಿ- 40 ಉಡಾವಣೆ ಯಶಸ್ವಿಗೊಳಿಸಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 100ನೇ ಉಪಗ್ರಹ ಉಡಾವಣೆಯೊಂದಿಗೆ, ಹೊಸ ಇತಿಹಾಸ ನಿರ್ಮಿಸಿತು.

Advertisement

ಪೊಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (ಪಿಎಸ್‌ಎಲ್‌ವಿ) ಸಿ-39 ವಾಹಕ ಕಳೆದ ಆಗಸ್ಟ್‌ನಲ್ಲಿ ವಿಫ‌ಲಗೊಂಡ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಸಹಜವಾಗಿಯೇ ಒಂದು ಆತಂಕವಿತ್ತು.  ಆದರೆ ಸಿ-40 ಯಾವುದೇ ಅಡೆತಡೆ ಗಳಿಲ್ಲದೇ ಉಪಗ್ರಹವನ್ನು ನಿರೀಕ್ಷಿತ ಕಕ್ಷೆ ಸೇರಿಸುವಲ್ಲಿ ಯಶಸ್ವಿಯಾ ಗಿದೆ. 30 ಇತರೆ ಉಪಗ್ರಗಳೊಂದಿಗೆ ಕಾರ್ಟೋಸ್ಯಾಟ್-2 ಸೀರಿಸ್‌ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕ ವಿಜ್ಞಾನಿಗಳ ಎಣಿಕೆಯಂತೆ ಕಾರ್ಯನಿರ್ವಹಿಸಿದ್ದಾಗಿ ಇಸ್ರೋ ಹೇಳಿಕೊಂಡಿದೆ.

ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಉಪಗ್ರಹ ಉಡಾವಣಾ ಕೇಂದ್ರದ ಮೊದಲ ಲಾಂಚ್‌ ಪ್ಯಾಡ್‌ನ‌ಲ್ಲಿ ಬೆಳಗ್ಗೆ 5.29ಕ್ಕೇ ಅಂತಿಮ ಕ್ಷಣದ ತಯಾರಿ ಮಾಡಿಕೊಂಡಿದ್ದ  ಇಸ್ರೋ 9.29ಕ್ಕೆ ತೆಳುವಾದ ಮೋಡಗಳ ನಡುವೆ ಉಡಾವಣೆ ಮಾಡಿತು. ಕೆನಡ, ಫಿನ್‌ಲೆಂಡ್‌, ಫ್ರಾನ್ಸ್‌, ಕೊರಿಯಾ, ದಿ ಯುನೈಟೆಡ್‌ ಕಿಂಗ್‌ಡಮ್‌ ಹಾಗೂ ಅಮೆರಿಕ ದೇಶಗಳ ನ್ಯಾನೋ ಉಪಗ್ರಹಗಳು ಇದ್ದವು.

ಅಧ್ಯಕ್ಷ ಹರ್ಷ: ಉಡಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌, ಇದೇ ಸರಣಿ ಹಾಗೂ ಸಾಮರ್ಥ್ಯದ ರಾಕೆಟ್‌ ಅನ್ನು ಕಳೆದ ಆಗಸ್ಟ್‌ನಲ್ಲಿ ಉಡಾ ವಣೆ ಮಾಡಲಾಗಿತ್ತು.  ಇದೀಗ ಅದೇ ಸರಣಿಯ ರಾಕೆಟ್‌ ಸಿ-40 ಉಡಾವಣೆ ಯನ್ನು ನಮ್ಮ ತಂಡ ಯಶಸ್ವಿಯಾಗಿಸಿದೆ. ಇದು ದೇಶದ ಜನತೆಗೆ ಇಸ್ರೋ ನೀಡುವ ಹೊಸ ವರ್ಷದ ಗಿಫ್ಟ್ ಎಂದಿದ್ದಾರೆ. ಕಾಟೋìಸ್ಯಾಟ್‌, ನ್ಯಾನೋಸ್ಯಾಟ್‌ ಹಾಗೂ ಮೈಕ್ರೋ ಸ್ಯಾಟ್‌ಲೈಟ್‌ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

ಇದಕ್ಕೂ ಪಾಕ್‌ ಕ್ಯಾತೆ 
ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಬೆನ್ನಿಗೇ ಸಾಂಪ್ರದಾ ಯಿಕ ವೈರಿ ಪಾಕಿಸ್ಥಾನ ನಿರೀಕ್ಷೆ ಯಂತೆ ಕ್ಯಾತೆ ತೆಗೆದಿದೆ. ಈ ಉಪ ಗ್ರಹದಿಂದ ಪ್ರಾದೇಶಿಕ ಕಾರ್ಯ ತಂತ್ರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದೆ. ಭಾರತ ಈ ಮೂಲಕ ಪಾಕಿಸ್ಥಾನ ವನ್ನು ಗುರಿಯಾಗಿಸಿ ಕೊಳ್ಳಲಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದೆ.

Advertisement

ದೈತ್ಯ ಪಿಎಸ್‌ಎಲ್‌ವಿ
ಕಾರ್ಟೋಸ್ಯಾಟ್-2 ಹಾಗೂ 30 ಇತರೆ ಉಪಗ್ರಹ ಒಳಗೊಂಡ ಪಿಎಸ್‌ಎಲ್‌ವಿ ಸಿ-40 ಈ ಮಾದರಿಯ ವಾಹಕಗಳ ಪೈಕಿ ಅತಿದೊಡ್ಡದು. 737.5 ಕೆ.ಜಿ ತೂಕದ ಈ ವಾಹನ 44.4 ಮೀಟರ್‌ ಎತ್ತರದ್ದಾಗಿತ್ತು. 

ಇಸ್ರೋ 100ನೇ ಉಪಗ್ರಹ ಉಡಾಯಿಸಿ ಮಹತ್ವದ ಸಾಧನೆ ಮಾಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂದು ತೋರಿಸಿದಂತಾಗಿದೆ.
ನರೇಂದ್ರ ಮೋದಿ, ಪ್ರಧಾನಮಂತ್ರಿ

ಇಸ್ರೋ ಪಿಎಸ್‌ಎಲ್‌ವಿ ಸಿ-40 ಯಶಸ್ವಿ ಉಡಾವಣೆ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ನಿಖರ ನಿರ್ಧಾರ, ಕಠಿಣ ಶ್ರಮದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಏನೆನ್ನುವುದು ಗೊತ್ತಾಗುವಂತಾಗಿದೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌  ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next