Advertisement

ಬಾಹ್ಯಾಕಾಶದಲ್ಲಿ ಭಾರತ- ರಷ್ಯಾ ಉಪಗ್ರಹ ಮುಖಾಮುಖಿ: ಅಲ್ಪ ಅಂತರದಲ್ಲಿ ತಪ್ಪಿದ ಘರ್ಷಣೆ !

02:57 PM Nov 29, 2020 | Mithun PG |

ನವದೆಹಲಿ: ಭಾರತ ಮತ್ತು ರಷ್ಯಾದ ಉಪಗ್ರಹಗಳು ಶುಕ್ರವಾರ (ನ.29) ಬಾಹ್ಯಾಕಾಶದಲ್ಲಿ ಮುಖಾಮುಖಿಯಾದ ಘಟನೆ ನಡೆದಿದ್ದು, ಅಲ್ಪ ಅಂತರದಲ್ಲಿ, ಘರ್ಷಣೆಯನ್ನು ತಪ್ಪಿಸಲಾಗಿದೆ ಎಂದು ವರದಿಯಾಗಿದೆ.

Advertisement

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ರಿಮೋಟ್ ಸೆನ್ಸಿಂಗ್ ಉಪಗ್ರಹವು, ರಷ್ಯಾದ ಭೂ ವೀಕ್ಷಣಾ ಉಪಗ್ರಹ ‘ಕನೋಪಸ್-ವಿ’ ಗೆ  ಅಪಾಯಕಾರಿಯಾಗಿ  ಸಮೀಪಕ್ಕೆ ಬಂದಿದ್ದು , ಕೂಡಲೇ ನಡೆಯಬಹುದಾದ ಭಾರೀ ಘರ್ಷಣೆಯನ್ನು ತಪ್ಪಿಸಲಾಗಿದೆ.  ಈ ಘಟನೆಯು ಭೂಮಿಯ ಸಮೀಪ ಕಕ್ಷೆಯಲ್ಲಿ ಸಂಭವಿಸಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

ರಷ್ಯಾದ ಬಾಹ್ಯಕಾಶ ಸಂಸ್ಥೆಯಾದ ರೋಸ್ಕೋಸ್ ಮೊಸ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಾರತದ ಉಪಗ್ರಹವು ರಷ್ಯಾದ ಸ್ಯಾಟಿಲೈಟ್ ಗೆ 224 ಮೀಟರ್ ನಷ್ಟು ಸಮೀಪ ಬಂದಿದ್ದು, ಕೂಡಲೇ ನಡೆಯಬಹುದಾಗಿದ್ದ ಘರ್ಷಣೆಯನ್ನು  ತಪ್ಪಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಲವ್ ಜಿಹಾದ್ ಕಾಯ್ದೆ ತರುವಮೊದಲು ಯಾವ ನಾಯಕರ ಮಕ್ಕಳುಯಾರನ್ನು ಲವ್ ಮಾಡಿದ್ದಾರೆ ನೋಡಲಿ:ಡಿಕೆಶಿ

ಈ ಕುರಿತು ಪ್ರತಿಕ್ರಿಯೆ ನೀಡಿದ ಇಸ್ರೋ, ರಷ್ಯಾದ ಉಪಗ್ರಹವು ಸುಮಾರು 420 ಮೀಟರ್ ದೂರದಲ್ಲಿತ್ತು. ಕಳೆದ 4 ದಿನಗಳಿಂದ ಇದನ್ನು ನಿರಂತರವಾಗಿ ಪರಿಶೀಲನೆ ಮಾಡಲಾಗುತ್ತಿತ್ತು. 150 ಮೀಟರ್ ಸಮೀಪಕ್ಕೆ ಬಂದಿದ್ದರೇ ಮಾತ್ರ ಅಪಾಯಕಾರಿಯಾಗಿ ಪರಣಮಿಸುವ ಸಾಧ್ಯತೆಯಿತ್ತು ಎಂದು ತಿಳಿಸಿದೆ.

Advertisement

ಬಾಹ್ಯಾಕಾಶದಲ್ಲಿ ಈ ರೀತಿಯ ವಿದ್ಯಾಮಾನ ಜರಗುವುದು ಸಾಮಾನ್ಯ. ಸಾವಿರಾರು ಉಪಗ್ರಹಗಳು ಇರುವ ಸಂದರ್ಭದಲ್ಲಿ ಎದುರುಬದುರಾಗುವುದು ನಿರೀಕ್ಷಿತ. ಇದೀಗ ಎರಡು ಬಾಹ್ಯಾಕಾಶ ಸಂಸ್ಥೆಗಳು ನಡೆಯಬಹುದಾಗಿದ್ದ ಘರ್ಷಣೆಯನ್ನು ತಪ್ಪಿಸಿವೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

ಇದನ್ನೂ ಓದಿ:  ಯಡಿಯೂರಪ್ಪ ನೀವು ಧೈರ್ಯವಾಗಿ ಮುನ್ನುಗ್ಗಿ: ಮುರುಘಾ ಶರಣರ ಅಭಯ

Advertisement

Udayavani is now on Telegram. Click here to join our channel and stay updated with the latest news.

Next