Advertisement

“ವೈಜ್ಞಾನಿಕ ಅನ್ವೇಷಣೆಗೆ ಇಸ್ರೋದಿಂದಲೂ ನೆರವು’

10:43 PM Feb 19, 2021 | Team Udayavani |

ಪಿಲಿಕುಳ : ಯಾವುದೇ ಬಗೆಯ ಹೊಸ ವೈಜ್ಞಾನಿಕ ಅನ್ವೇಷಣೆಗೆ ಇಸ್ರೋ ಸಹಿತ ದೇಶದ ವೈಜ್ಞಾನಿಕ ಸಂಸ್ಥೆಗಳು ಪೂರಕ ನೆರವನ್ನು ನೀಡಲಿದ್ದು, ಈ ದಿಸೆಯಲ್ಲಿ ನವ ವಿಜ್ಞಾನಿಗಳು ಅನ್ವೇಷಣೆಯತ್ತ ಮನಸ್ಸು ಮಾಡಬೇಕು ಎಂದು ಹಿರಿಯ ಲೇಖಕ ಡಾ| ಟಿ.ಆರ್‌. ಅನಂತರಾಮು ತಿಳಿಸಿದರು.

Advertisement

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು ವತಿಯಿಂದ ಫೆ. 21ರ ವರೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿರುವ “ವಿಜ್ಞಾನ ಸಾಹಿತ್ಯ ಕಮ್ಮಟ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಸಾಕ್ಷ ರ ಅಗ ತ್ಯ

ವಿಜ್ಞಾನದ ಕುರಿತಂತೆ ಎಲ್ಲರಲ್ಲಿಯೂ ಸಾಕ್ಷರತೆ ಬೇಕು. ಇದಕ್ಕಾಗಿ ವಿಜ್ಞಾನ ಸಂಬಂಧಿತ ವಿಚಾರ ಗಳನ್ನು ಓದುವ, ಆ ಕುರಿತಂತೆ ವಿಶ್ಲೇಷಿಸುವ ಮನೋಭಾವ ಹೊಂದಿರಬೇಕು. ಜತೆಗೆ ಸಮಾಜದಲ್ಲಿ ನಡೆಯುವ ಯಾವುದೇ ಸಂಗತಿಗಳನ್ನು ವಿಜ್ಞಾನದ ಕೋನದಿಂದ ಅವಲೋಕಿಸಿ ಅದಕ್ಕೆ ಬರಹ ರೂಪ ನೀಡಬೇಕು. ಈ ಮೂಲಕ ಸಮಾಜದಲ್ಲಿ ವಿಜ್ಞಾನ ಕುರಿತ ಜಾಗೃತಿ ಮೂಡಿಸಬೇಕು ಎಂದರು.

ಹಿಂದೆ ರೇಬಿಸ್‌ ಲಸಿಕೆ ಬರಲು ಹಲವು ವರ್ಷ ಬೇಕಾಗಿತ್ತು. ಆದರೆ ಕೊರೊನಾ ಬಂದು ಒಂದು ವರ್ಷದೊಳಗೆ ಭಾರತದಲ್ಲಿ ಲಸಿಕೆ ಬಂದಿದೆ. ಈ ಮೂಲಕ ಭಾರತದ ವಿಜ್ಞಾನ ಕ್ಷೇತ್ರ ಯಾವ ಮಟ್ಟದಲ್ಲಿ ಬದಲಾವಣೆ ಕಾಣುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದರು.

Advertisement

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್‌, ಕಮ್ಮಟದ ನಿರ್ದೇಶಕ ಎಂ.ಎಸ್‌. ಚೈತ್ರಾ, ಅಕಾಡೆಮಿ ಸದಸ್ಯ ಸಂಚಾಲಕ ಡಾ| ಬಿ.ಎಂ. ಶರಭೇಂದ್ರಸ್ವಾಮಿ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಎನ್‌. ಸ್ವಾಗತಿಸಿದರು.

 

ಇಂದು, ನಾಳೆ ಗೋಷ್ಠಿ, ತರಬೇತಿ ;

ಸಾಹಿತ್ಯ ಕಮ್ಮಟದ ಎರಡನೇ ದಿನ ಶನಿವಾರ ಯೋಗ ಮತ್ತು ಧ್ಯಾನ ಎಂಬ ವಿಷಯದಲ್ಲಿ ತರಬೇತಿ, ವಿಜ್ಞಾನ ಮತ್ತು ಶ್ರೀಸಾಮಾನ್ಯರ ಜನಜೀವನ ಗೋಷ್ಠಿ, ಆಧ್ಯಾತ್ಮಿಕ ಆರೋಗ್ಯ ದರ್ಶನ: ವೈಜ್ಞಾನಿಕ ನೋಟ ಗೋಷ್ಠಿ, ವಿಜ್ಞಾನ, ಮೌಡ್ಯ ಮತ್ತು ವೈಜ್ಞಾನಿಕ ದೃಷ್ಟಿ ಬಗ್ಗೆ ಗೋಷ್ಠಿ, ವಿಜ್ಞಾನ ಮತ್ತು ಭಾಷೆ-ಸಾಹಿತ್ಯ-ಸಂಸ್ಕೃತಿ ಕುರಿತು ವಿಷಯ ಮಂಡನೆಯಾಗಲಿದೆ. ವಿಜ್ಞಾನ ಸಾಹಿತ್ಯದ ರಚನ ವಿನ್ಯಾಸಗಳ ಬಗ್ಗೆ ಗೋಷ್ಠಿ ನಡೆಯಲಿದೆ. ಮೂರನೇ ದಿನ ಶನಿವಾರ ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕುರಿತು ಸಂಗೀತಲಕ್ಷ್ಮೀ ತರಬೇತಿ ನೀಡಲಿದ್ದಾರೆ. ವಿಜ್ಞಾನ ಮತ್ತು ಆರೋಗ್ಯ: ವಿಭಿನ್ನ ಜ್ಞಾನ ಶಾಖೆಗಳ ಸಮನ್ವಯ ಗೋಷ್ಠಿ, ಕನ್ನಡ ವಿಜ್ಞಾನ ಸಾಹಿತಿಗಳು ಮತ್ತು ಅವರ ಕೊಡುಗೆ ಗೋಷ್ಠಿ ನಡೆಯಲಿದ್ದು, ಕಮ್ಮಟದ ನಿರ್ದೇಶಕರು ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲಿದ್ದಾರೆ. ಬಳಿಕ ಸಮಾರೋಪ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next