ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಸಿಂಗಾಪುರದ ಭೂ ವೀಕ್ಷಣಾ ಉಪಗ್ರಹವನ್ನು ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‌ಎಲ್‌ವಿ) ಮೂಲಕ ಕಕ್ಷೆಗೆ ಸೇರಿಸಲಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏ.22ರಂದು ಮಧ್ಯಾಹ್ನ 2.19 ಗಂಟೆಗೆ ಪಿಎಸ್‌ಎಲ್‌ವಿಸಿ-55 ಉಡಾವಣೆಗೊಳ್ಳಲಿದೆ.
ಸಿಂಗಾಪುರದ 750 ಕೆಜಿ ತೂಕದ ಉಪಗ್ರಹವನ್ನು ಕಕ್ಷಗೆ ಸೇರಿಸಲಿದೆ. ಈ ಉಪಗ್ರಹವು ಎಲ್ಲಾ ಹವಾಮಾನದಲ್ಲೂ, ಎಲ್ಲಾ ಸಮಯದಲ್ಲೂ ಭೂಮಿಯ ಚಿತ್ರಗಳನ್ನು ಸೆರೆಹಿಡಿದು, ಕಳುಹಿಸಲಿದೆ. ಇದರಿಂದ ವಿಮಾನ ಅಪಘಾತ ಸಂದರ್ಭದಲ್ಲಿ ಶೋಧ ಕಾರ್ಯಾಚರಣೆ, ರಕ್ಷಣಾ ಕಾರ್ಯಚರಣೆ ಸೇರಿದಂತೆ ಅನೇಕ ಕಾರ್ಯಗಳಿಗೆ ಉಪಯೋಗವಾಗಲಿದೆ.
ಎಸ್‌ಟಿ ಎಂಜಿನಿಯರಿಂಗ್ ವತಿಯಿಂದ ಈ ಉಪಗ್ರಹ ಅಭಿವೃದ್ಧಿಪಡಿಸಲಾಗಿದೆ. ಇನ್ನೊಂದೆಡೆ, ಇಸ್ರೋದಿಂದ ಭಾರತದಲ್ಲೇ ದೇಸಿಯವಾಗಿ ಅಭಿವೃದ್ಧಿಪಡಿಸಲಾದ ಉಡಾವಣಾ ವಾಹಕ ಪಿಎಲ್‌ಎಲ್‌ವಿ-55ನೇ ಯೋಜನೆ ಇದಾಗಿದೆ.