Advertisement
ಭಾರತೀಯ ಭೂ ಭಾಗದ ಕರಾರುವಾಕ್ ಚಿತ್ರಣ ಹಾಗೂ ನಕ್ಷೆಯ ರಚನೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಉಪಗ್ರಹವನ್ನು ಉಡಾಯಿಸಲಾಗುತ್ತಿದೆ. ಈ ಸರಣಿಯಲ್ಲಿ ಈವರೆಗೆ ಉಡಾವಣೆಯಾಗಿರುವ ಉಪಗ್ರಹಗಳಲ್ಲೇ ಕಾರ್ಟೊಸ್ಯಾಟ್ 3 ಮೂರನೇ ತಲೆಮಾರಿನ ಉಪಗ್ರಹವಾಗಿದ್ದು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಹೈ ರೆಸೆಲ್ಯೂಷನ್ ಕ್ಯಾಮೆರಾಗಳನ್ನು ಹೊಂದಿರುವ ಇದು ಅತ್ಯಂತ ಸ್ಪುಟವಾದ, ಸ್ಪಷ್ಟ ಚಿತ್ರಗಳನ್ನು ಕಳುಹಿಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ಹೇಳಿದೆ.
ಇವು ಭಾರತದ ಭೂಭಾಗಗಳ ಪರಿವೀಕ್ಷಣೆಗಾಗಿಯೇ ವಿಶೇಷವಾಗಿ ಸಿದ್ಧ ಪಡಿಸಲಾಗಿರುವ ಉಪಗ್ರಹಗಳು. ಈ ಸರಣಿಯ ಮೊದಲ ಉಪಗ್ರಹ 2005ರಲ್ಲಿ ಉಡಾವಣೆಗೊಂಡಿತ್ತು. ಆಅನಂತರ, ಕಾರ್ಟೊಸ್ಯಾಟ್ 2, 2ಎ, 2ಬಿ, 2ಸಿ, 2ಡಿ, 2ಇ, 2ಎಫ್ ಉಪಗ್ರಹಗಳನ್ನು ಕಕ್ಷೆಗೆ ಹಾರಿಬಿಡಲಾಗಿತ್ತು.