Advertisement

ISRO; ಮುಂದಿನ 5 ವರ್ಷಗಳಲ್ಲಿ 50 ಬೇಹು ಉಪಗ್ರಹ ನಭಕ್ಕೆ

12:15 AM Dec 30, 2023 | Team Udayavani |

ಹೊಸದಿಲ್ಲಿ: ಜಾಗತಿಕ ಗುಪ್ತಚರ ಉದ್ದೇಶಕ್ಕಾಗಿ, ಮುಂದಿನ ಐದು ವರ್ಷಗಳಲ್ಲಿ ಭಾರತ 50 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ವಿವಿಧ ಕಕ್ಷೆಗಳಲ್ಲಿರುವ ವಿವಿಧ ಉಪಗ್ರಹ ಗಳ ಒಂದು ಪದರವನ್ನೇ ಸಿದ್ಧಪಡಿಸಲಾಗುವುದು ಎಂದು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಸ್ಥೆ) ಮುಖ್ಯಸ್ಥ ಎಸ್‌.ಸೋಮನಾಥ್‌ ಹೇಳಿದ್ದಾರೆ.

Advertisement

ಇಸ್ರೋ ಹೊಸತಾಗಿ ಉಡಾವಣೆ ಮಾಡಲು ಉದ್ದೇಶಿಸಿರುವ ಉಪಗ್ರಹಗಳು, ಸೇನಾ ಪಡೆಗಳ ಚಲನೆ, ಸಾವಿರಾರು ಕಿ.ಮೀ. ಪ್ರದೇಶಗಳ ಚಿತ್ರಗಳನ್ನು ತೆಗೆಯಲಿವೆ. ಭಾರತವನ್ನು ಅತ್ಯಂತ ಬಲಿಷ್ಠಗೊಳಿಸ ಬೇಕಾದರೆ, ಈಗಿರುವ ಉಪಗ್ರಹಗಳ ಸಂಖ್ಯೆಯನ್ನು ಇನ್ನೂ 10 ಪಟ್ಟು ಹೆಚ್ಚಿಸಬೇಕು. ಸದ್ಯ ಇರುವ ಉಪಗ್ರಹಗಳು ತೀರಾ ಕಡಿಮೆ ಎಂದು ಸೋಮನಾಥ್‌ ಹೇಳಿದ್ದಾರೆ. ಜಾಗತಿಕವಾಗಿ ಆಗುವ ಬದಲಾ ವಣೆಗಳನ್ನು ಗುರುತಿಸಲು, ನೆರೆಯ ದೇಶಗಳ ಚಲನೆಯನ್ನು ಗಮನಿಸಲು, ಗಡಿಭಾಗದಲ್ಲಿ ನಿಗಾ ಇಡಲು ಉಪಗ್ರಹಗಳ ಅಗತ್ಯವಿದೆ. ಹಾಗೆಯೇ ಅನವಶ್ಯಕವಾಗಿ ದತ್ತಾಂಶಗಳನ್ನು ಡೌನ್‌ಲೋಡ್‌ ಮಾಡುವ ಬದಲು, ದತ್ತಾಂಶಗಳನ್ನು ವಿಶ್ಲೇಷಿಸಿ ಬಳಸಿಕೊಳ್ಳಲು ಎಐ ಸಾಧನಗಳ ಅಗತ್ಯವಿದೆ. ಇಸ್ರೋ ಉಪಗ್ರಹಗಳು ಮೇಲಿನ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶ ಹೊಂದಿವೆ ಎಂದು ಸೋಮನಾಥ್‌ ಟೆಕ್‌ಫೆಸ್ಟ್‌ ವಿಜ್ಞಾನ ಸಮಾವೇಶವೊಂದರಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next