Advertisement

Chandrayaan 3; ಕಕ್ಷೆ ಎತ್ತರಿಸುವ 4 ನೇ ಹಂತದ ಪ್ರಕ್ರಿಯೆ ಯಶಸ್ವಿ

04:35 PM Jul 20, 2023 | Team Udayavani |

ಹೊಸದಿಲ್ಲಿ: ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ 4ನೇ ಹಂತದ ಪ್ರಕ್ರಿಯೆಯನ್ನು ಗುರುವಾರ ಯಶಸ್ವಿಯಾಗಿ ಪೂರ್ಣ ಗೊಳಿಸಲಾಗಿದೆ ಎಂದು ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ(ISRO) ಹೇಳಿದೆ.

Advertisement

ಮುಂದಿನ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಜುಲೈ 25 ರಂದು ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಯೋಜಿಸಲಾಗಿದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಚಂದ್ರಯಾನ-3 ಅನ್ನು ಚಂದ್ರನ ಹತ್ತಿರ ಒಂದು ಹೆಜ್ಜೆ ಮುಂದಿಡುವ ಮೂಲಕ ಭಾರತವು 2023 ರ ಅಂತಾರಾಷ್ಟ್ರೀಯ ಚಂದ್ರ ದಿನವನ್ನು ಆಚರಿಸುತ್ತದೆ ಎಂದು ಹೇಳಿದೆ.

ಚಂದ್ರಯಾನ-3 ಮಿಷನ್ ಅನ್ನು ಜುಲೈ 14 ರಂದು ಪ್ರಾರಂಭಿಸಲಾಗಿದ್ದು ಬಾಹ್ಯಾಕಾಶ ನೌಕೆ ಚಂದ್ರನ ಹಾದಿಯಲ್ಲಿದೆ. ಕೆಲವೇ ದಿನಗಳಲ್ಲಿ ಅದು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುತ್ತದೆ ”ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಎಸ್ ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಮತ್ತು ಜಾಗೃತಿ ತರಬೇತಿ (START) ಕಾರ್ಯಕ್ರಮ 2023 ರ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದರು.

“ವಿಜ್ಞಾನಕ್ಕೆ ಸಂಬಂಧಿಸಿದಂತೆ ಚಂದ್ರಯಾನ-3 ಮೂಲಕ ಹಳ ಗಣನೀಯವಾದದ್ದನ್ನು ಕಂಡುಕೊಳ್ಳಲಿದ್ದೀರಿ ಎಂಬುದು ನನಗೆ ಖಾತ್ರಿಯಿದೆ” ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next