ನವದೆಹಲಿ: ಓಷಿಯನ್ ಸ್ಯಾಟ್-3 ಮತ್ತು ಎಂಟು ನ್ಯಾನೋ ಸ್ಯಾಟಲೈಟ್ ಗಳನ್ನು ಒಳಗೊಂಡ ಪಿಎಸ್ ಎಲ್ ವಿ-ಸಿ54 ರಾಕೆಟ್ ಅನ್ನು ಇಸ್ರೋ ಶನಿವಾರ (ನವೆಂಬರ್ 26) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇದನ್ನೂ ಓದಿ:ಕಿತವಾಡ್ ಫಾಲ್ಸ್: ಸೆಲ್ಫಿ ತೆಗೆಯುವಾಗ ಜಾರಿ ಬಿದ್ದು ಬೆಳಗಾವಿಯ ನಾಲ್ವರು ಯುವತಿಯರು ನೀರುಪಾಲು
“ಭೂ ವೀಕ್ಷಣಾ ಉಪಗ್ರಹವನ್ನು ಪಿಎಸ್ ಎಲ್ ವಿ-ಸಿ54 ತನ್ನ ಉದ್ದೇಶಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿರುವುದಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ರಾಕೆಟ್ ಉಡಾವಣೆ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಪಿಎಸ್ ಎಲ್ ವಿ-ಸಿ54ರಲ್ಲಿನ ಆರಂಭಿಕ ಪೇಲೋಡ್ ಇಒಎಸ್ -06 ಆರ್ಬಿಟ್-1ರಿಂದ ಬೇರ್ಪಡಲಿದೆ. ಥೈಬೋಲ್ಟ್ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡಿದೆ ಎಂದು ವರದಿ ತಿಳಿಸಿದೆ.