Advertisement

ಇಸ್ರೋಗೆ ಬಿಡುವೇ ಇಲ್ಲ

06:00 AM Sep 04, 2018 | Team Udayavani |

ಹೊಸದಿಲ್ಲಿ: ಐದು ತಿಂಗಳ ವಿರಾಮದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೆ.15ರಿಂದ 7 ತಿಂಗಳ ಕಾಲ ಬಿಡುವಿಲ್ಲದ ಉಪಗ್ರಹ ಉಡಾವಣೆಗಳಲ್ಲಿ ತೊಡಗಿಸಿಕೊಳ್ಳಲಿದೆ. ಅದರಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಸೇರಿದೆ. ಹತ್ತು ಉಪಗ್ರಹ ಉಡಾವಣೆ, 9 ಉಪಗ್ರಹ ವಾಹಕಗಳು ನಡೆಯಲಿವೆ.  ಈ ಪೈಕಿ ಸೆ.15ರಂದು ಉಪಗ್ರಹ ವಾಹಕ ನೌಕೆ ಪಿಎಸ್‌ಎಲ್‌ವಿ-ಸಿ4ನ ಸಂಪೂರ್ಣ ವಾಣಿಜ್ಯಿಕ ಉಡಾವಣೆ ನಡೆಯ ಲಿದೆ. ಅದರಲ್ಲಿ ಯು.ಕೆ.ಯ ನೊವಸಾರ್‌ ಮತ್ತು ಎಸ್‌1-4 ಎಂಬ ಸ್ಯಾಟಲೈಟ್‌ಗಳನ್ನು ಮುಖ್ಯ ಪೇಲೋಡ್‌ಗಳಲ್ಲಿಯೇ ಅಳವಡಿಸಿ ನಭಕ್ಕೆ ಕಳುಹಿಸಲಾಗುತ್ತದೆ.

Advertisement

ಮುಂದಿನ ತಿಂಗಳು ಜಿಎಸ್‌ಎಲ್‌ವಿ ಎಂ.ಕೆ 2- ಡಿ2 ಅನ್ನು ಉಡಾಯಿಸಲಾಗುತ್ತದೆ. ಅದಕ್ಕೆ “ಬಾಹುಬಲಿ’ ಎಂದು ಹೆಸರಿಸಲಾಗಿದೆ. ಅದು ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್‌ನ 2ನೇ ಉಡಾವಣೆಯಾಗಲಿದೆ. ಮುಂದಿನ ತಿಂಗಳು ಪಿಎಸ್‌ಎಲ್‌ವಿ ಸಿ43, ನವೆಂಬರ್‌ನಲ್ಲಿ ಐಎಎಫ್ಗೆ ಅನುಕೂಲವಾಗುವ ಜಿಸ್ಯಾಟ್‌ 7ಎ ಸ್ಯಾಟಲೈಟ್‌, ನ.30ರಂದು ಜಿಸ್ಯಾಟ್‌ 11 ಉಪಗ್ರಹ ಉಡಾಯಿಸಲಾಗುತ್ತದೆ. ಚಂದ್ರಯಾನ-2 2019ರ ಜ.3ರಿಂದ ಫೆ.16ರ ನಡುವೆ ನಡೆಯಲಿದೆ.  ಚೀನಾ, ಅಮೆರಿಕ, ರಷ್ಯಾ, ಇಸ್ರೇಲ್‌ ಅದೇ ಸಮಯದಲ್ಲಿ ಚಂದ್ರನಲ್ಲಿಗೆ ಉಪಗ್ರಹ ಉಡಾವಣೆ ನಡೆಸುತ್ತಿವೆ. ಫೆಬ್ರವರಿ, ಮಾರ್ಚ್‌ನಲ್ಲಿ ಕಾರ್ಟೊ ಸ್ಯಾಟ್‌, ರಿಯಾಸ್ಯಾಟ್‌-2ಬಿಆರ್‌1 ಸ್ಯಾಟಲೈಟ್‌ ನಭಕ್ಕೆ ನೆಗೆಯಲಿವೆ.

ಭಾರತಕ್ಕೆ ನೆರವು: ಆಕ್ಷೇಪ
ಲಂಡನ್‌: ಭಾರತಕ್ಕೆ ಬ್ರಿಟನ್‌ ನೀಡುತ್ತಿರುವ ವಾರ್ಷಿಕ 600 ಕೋಟಿ ರೂ. ಅನುದಾನದ ಬಗ್ಗೆ ಇಂಗ್ಲೆಂಡ್‌ ಸಂಸದರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ಗೆ ಹಣದ ಅಗತ್ಯವಿರುವಾಗ ಚಂದ್ರಯಾನ ನಡೆಸುವ ಸಾಮರ್ಥ್ಯ ಇರುವ ದೇಶಕ್ಕೆ ಯಾಕೆ ಅನುದಾನ ನೀಡಬೇಕು ಎಂದು ಸಂಸದರು  ಆಕ್ಷೇಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next