Advertisement

ISRO ವಿಶ್ವ ದಾಖಲೆ; ಏಕಕಾಲಕ್ಕೆ104 ಉಪಗ್ರಹಗಳ ಉಡಾವಣೆ ಸಕ್ಸಸ್;Watch

10:44 AM Feb 15, 2017 | Team Udayavani |

ಬೆಂಗಳೂರು: ಪಿಎಸ್ ಎಲ್ ವಿ-ಸಿ37 ಉಪಗ್ರಹ ವಾಹಕದ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬುಧವಾರ ಬೆಳಗ್ಗೆ ಏಕಕಾಲಕ್ಕೆ ಅಮೆರಿಕದ 96, ಭಾರತದ 4 ಸೇರಿದಂತೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

Advertisement

ಇಂದು ಬೆಳಗ್ಗೆ 9:28ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ 44.4 ಮೀಟರ್ ಎತ್ತರದ ಹಾಗೂ 320 ಟನ್ ತೂಕದ ರಾಕೆಟ್ ಮೂಲಕ 104 ಉಪಗ್ರಹ ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಇದುವರೆಗೆ ಯಾವುದೇ ದೇಶ ಒಂದೇ ರಾಕೆಟ್ ನಲ್ಲಿ 104 ಉಪಗ್ರಹ ಉಡಾಯಿಸಿಲ್ಲ. 2014ರಲ್ಲಿ ರಷ್ಯಾ ಏಕಕಾಲಕ್ಕೆ 37 ಉಪಗ್ರಹಗಳನ್ನು ಉಡಾಯಿಸಿತ್ತು. 

ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಶಹಬ್ಬಾಸ್ ಗಿರಿ:
ಇಂತಹದ್ದೊಂದು ಐತಿಹಾಸಿಕ ಸಾಧನೆ ನೆರವೇರಿಸಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ಇಂತಹ ಸಾಧನೆಗೈದಿರುವುದು ದೇಶಕ್ಕೆ ಹೆಮ್ಮೆಯ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next