Advertisement

Isro Scientist: ಚಂದ್ರಯಾನ-3 ಉಡಾವಣೆ ಕೌಂಟ್‌ಡೌನ್ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ನಿಧನ

03:20 PM Sep 04, 2023 | sudhir |

ಆಂಧ್ರಪ್ರದೇಶ : ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆ ಕ್ಷಣಗಣನೆ ಸಂದರ್ಭ ಧ್ವನಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ ಐವತ್ತು ವರ್ಷ ವಯಸ್ಸಾಗಿತ್ತು.

Advertisement

ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಅನ್ನು ಉಡಾವಣೆ ಮಾಡಲಾಯಿತು. ಈ ವೇಳೆ ವಿಜ್ಞಾನಿ ವಲಮರ್ತಿ ಅವರು ಚಂದ್ರಯಾನ-3 ಉಡಾವಣೆಯ ಸಂದರ್ಭದಲ್ಲಿ ಧ್ವನಿ ನೀಡಿದ್ದರು.

ಇಸ್ರೋದಲ್ಲಿ, ರಾಕೆಟ್ ಉಡಾವಣೆ ಸಮಯದಲ್ಲಿ ಕೌಂಟ್‌ಡೌನ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೌಂಟ್ ಡೌನ್ ಕರ್ತವ್ಯವನ್ನು ತಮ್ಮ ಗಂಭೀರ ಧ್ವನಿಯಿಂದ ನಿರ್ವಹಿಸಿದ ಉದ್ಯೋಗಿ ವಲರ್ಮತಿ ಅವರು ಶನಿವಾರ ರಾತ್ರಿ ಚೆನ್ನೈನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ವಲರ್ಮತಿ ಅವರು ಚಂದ್ರಯಾನ-3 ಸೇರಿದಂತೆ ಇಸ್ರೋ ಕೈಗೊಂಡ ಅನೇಕ ಪ್ರಯೋಗಗಳ ಉಸ್ತುವಾರಿ ವಹಿಸಿದ್ದರು. ಆದಾಗ್ಯೂ, ಜುಲೈ 14 ರಂದು ಅತ್ಯಂತ ಯಶಸ್ವಿಯಾದ ಚಂದ್ರಯಾನ-3 ಉಡಾವಣೆಯು ಅವರ ಕೊನೆಯ ಧ್ವನಿಯಾಗಿತ್ತು.

ವಲರ್ಮತಿ ಅವರ ನಿಧಾನಕ್ಕೆ ಇಸ್ರೋ ವಿಜ್ಞಾನಿಗಳು ಕಂಬನಿ ಮಿಡಿದಿದ್ದಾರೆ.

Advertisement

ತಮಿಳುನಾಡಿನ ಅರಿಯಲೂರಿನಲ್ಲಿ 1959 ರಲ್ಲಿ ಜನಿಸಿದ ವಲರ್ಮತಿ ,1984 ರಿಂದ ಇಸ್ರೋ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ಇಸ್ರೋದಲ್ಲಿ ಉಡಾವಣೆಯಾದ ರಾಕೆಟ್ ಪ್ರಯೋಗಗಳ ಉಡಾವಣೆ ಕ್ಷಣಗಣನೆಯನ್ನು ಅವರು ಹೇಳುತ್ತಿದ್ದರು. ಹೀಗಾಗಿ ಆಕೆಯ ವಿಶಿಷ್ಟ ಧ್ವನಿ ದೇಶದ ಜನತೆಗೆ ಪರಿಚಿತವಾಯಿತು. ಅವರು 2015 ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಪಡೆದರು. ಇಸ್ರೋದಿಂದ ನಿವೃತ್ತರಾದ ಅವರು ಶನಿವಾರ ಸಂಜೆ ಹೃದಯಾಘಾತದಿಂದ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇದನ್ನೂ ಓದಿ: Chikkamagaluru: ಹಳೇ ವೈಷಮ್ಯದ ಹಿನ್ನೆಲೆ ಕ್ರಿಕೆಟ್ ಆಡುವಾಗ ಕಿರಿಕ್; ಯುವಕನಿಗೆ ಚಾಕು ಇರಿತ

Advertisement

Udayavani is now on Telegram. Click here to join our channel and stay updated with the latest news.

Next