Advertisement

ISRO; ಅಯೋಧ್ಯೆ ರಾಮಮಂದಿರದ ಉಪಗ್ರಹ ಚಿತ್ರ ಬಿಡುಗಡೆ

06:31 PM Jan 21, 2024 | Team Udayavani |

ಅಯೋಧ್ಯೆ: ಇಸ್ರೋದ ಹೈದರಾಬಾದ್ ಮೂಲದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಾಹ್ಯಾಕಾಶದಿಂದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ ಒಂದು ಉಪಗ್ರಹ ಚಿತ್ರವನ್ನು ಬಿಡುಗಡೆ ಮಾಡಿದೆ.

Advertisement

ಬಾಹ್ಯಾಕಾಶದಿಂದ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹದಿಂದ ಡಿಸೆಂಬರ್ 16 ರಂದು ಫೋಟೋ ಕ್ಲಿಕ್ಕಿಸಲಾಗಿದ್ದು, ಭಾನುವಾರ ಇಸ್ರೋ ಹಂಚಿಕೊಂಡಿದೆ. ಚಿತ್ರದಲ್ಲಿ ದಶರಥ ಮಹಲ್, ಅಯೋಧ್ಯೆ ರೈಲು ನಿಲ್ದಾಣ ಮತ್ತು ಸರಯೂ ನದಿಯನ್ನು ಸಹ ತೋರಿಸುತ್ತಿದೆ.

ನಾಳೆ (ಸೋಮವಾರ,ಜನವರಿ 22) ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರರ ಸಮ್ಮುಖದಲ್ಲಿ ವೈದಿಕ ಸ್ತೋತ್ರಗಳ ನಡುವೆ ಸೋಮವಾರ ಮಧ್ಯಾಹ್ನ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆಸಿದ ಬಳಿಕ ಮಹಾಮಸ್ತಕಾಭಿಷೇಕ ನಡೆಯಲಿದೆ. ಈಗಾಗಲೇ ಸಾವಿರಾರು ಮಂದಿ ಯತಿಗಳು, ಸಾಧುಗಳು, ಗಣ್ಯಾತೀಗಣ್ಯರು ಅಯೋಧ್ಯೆಗೆ ಆಗಮಿಸಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಅಯೋಧ್ಯೆಯಲ್ಲಿ ವಿದ್ಯುದೀಪಾಲಂಕಾರ ಮತ್ತು ಪುಷ್ಪಾಲಂಕಾರ ಮಾಡಲಾಗಿದೆ. ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next