Advertisement
ನಿಜ, ಇಸ್ರೋ ಈಗ ಖಾಸಗಿಗೂ ಮುಕ್ತವಾಗಿದ್ದು, ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ನೇತೃತ್ವದ ಒಕ್ಕೂಟವು ಭಾರತದ ನೇವಿಗೇಷನ್ ವ್ಯವಸ್ಥೆಗೆಂದು ಎರಡು ಪೂರ್ಣಪ್ರಮಾಣದ ಉಪಗ್ರಹಗಳನ್ನು ಅಭಿವೃದ್ಧಿಪಡಿಸಿಕೊಡಲಿದೆ. 3 ದಶಕಗಳ ಬಾಹ್ಯಾಕಾಶ ಸಾಧನೆ ಹಾಗೂ 150 ಮಿಷನ್‌ಗಳ ಮೂಲಕ ಹೆಸರುವಾಸಿಯಾಗಿರುವ ಇಸ್ರೋ ಹಿಂದೆಂದೂ ನಡೆಸದಂತಹ ಸಾಧನೆಗೆ ಮುಂದಾಗಿದ್ದು, ಖಾಸಗಿಯೊಂದಿಗೆ ಸೇರಿ ಪೂರ್ಣಪ್ರಮಾಣದ ದಿಶಾದರ್ಶಕ ಉಪಗ್ರಹವನ್ನು ಸಿದ್ಧಪಡಿಸಲಿದೆ. ಒಟ್ಟಿನಲ್ಲಿ 70 ಮಂದಿ ಎಂಜಿನಿಯರ್‌ಗಳ ತಂಡವು ಮುಂದಿನ 6 ತಿಂಗಳೊಳಗೆ ಈ ಕೆಲಸವನ್ನು ಪೂರ್ಣಗೊಳಿಸಲಿದೆ. ಕರ್ನಲ್ ಎಚ್.ಎಸ್. ಶಂಕರ್ ಅವರೇ ಒಕ್ಕೂಟದ ನೇತೃತ್ವ ವಹಿಸಿದ್ದು, ಉಪಗ್ರಹ ನಿರ್ಮಾಣ ಪ್ರಕ್ರಿಯೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ‘ಭಾರತದ ಕಂಪೆನಿಗಳಿಗೆ ಇದು ಸವಾಲೇ ಸರಿ,’ ಎಂದಿದ್ದಾರೆ ಶಂಕರ್. Advertisement
ಹೊಸ ಜುಗಲ್‌ಬಂದಿಯತ್ತ ಇಸ್ರೋ!
12:47 PM Apr 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.