ಮಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ನಡೆಸುತ್ತಿರುವ ಯುವ ವಿಜ್ಞಾನಿ ಕಾರ್ಯ ಕ್ರಮಕ್ಕೆ ಮಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ ಎಂಆರ್‌ಪಿಎಲ್‌ನ 9ನೇ ತರಗತಿಯ ಪ್ರಥಮ್ ಡಿ. ಆಯ್ಕೆಯಾಗಿದ್ದಾರೆ.
ಇಸ್ರೋ 15 ದಿನಗಳ ವರೆಗೆ ಯುವ ವಿಜ್ಞಾನ್ ಕಾರ್ಯಕ್ರಮ ಆಯೋಜಿಸಿದೆ. ದೇಶಾದ್ಯಂತ ಆಯ್ಕೆಯಾದ 150 ವಿದ್ಯಾರ್ಥಿಗಳ ತಂಡದಲ್ಲಿ ಪ್ರಥಮ್ ಒಬ್ಬರು.
ಮೇ 15ರಿಂದ ಮೇ 30ರ ವರೆಗೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ನಡೆಯಲಿರುವ ಯುವಿಕ – 2022ರಲ್ಲಿ ಪ್ರಥಮ್ ಭಾಗವಹಿಸುವರು.
ಆಂಧ್ರದ ಶ್ರೀಹರಿ ಕೋಟ ದಲ್ಲಿರುವ ಸತೀಶ್‌ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ, ಖ್ಯಾತ
ವಿಜ್ಞಾನಿಗಳ ಜತೆ ಸಂವಾದ, ಪ್ರಯೋ ಗಾಲಯಗಳ ಭೇಟಿ, ಪ್ರಾಯೋಗಿಕ ಪ್ರದರ್ಶನಗಳ ವೀಕ್ಷಣೆಗಳು ಈ ಕಾರ್ಯಕ್ರಮದ ಭಾಗವಾಗಿರುತ್ತವೆ.
ಈ ಹಿಂದೆ ಪ್ರಥಮ್ ವಿದ್ಯಾರ್ಥಿ ವಿಜ್ಞಾನ್ ಮಂಥನ್ ಎಂಬ ರಾಷ್ಟ್ರೀಯ ವಿಜ್ಞಾನ ಪ್ರತಿಭಾನ್ವೇಷಣೆಯಲ್ಲಿ ಎರಡು ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. 2019ರಲ್ಲಿ ದಕ್ಷಿಣ ಭಾರತ ವಲಯದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.
ಪ್ರಥಮ್ ಅವರು ಎಂಆರ್‌ಪಿಎಲ್ ಉದ್ಯೋಗಿ ದಿನಕರ್ ಮತ್ತು ನಮಿತಾ ದಿನಕರ್ ದಂಪತಿಯ ಪುತ್ರ.