Advertisement
ಭಾರತದ ಐಐಎಸ್‌ಟಿಯು ಅಮೆರಿಕದ ಜೆಪಿಎಲ್‌ನ (ಜೆಟ್ ಪ್ರೊಪುಲ್ಶನ್ ಲ್ಯಾಬೊರೇಟರಿ) ಕಾರ್ಯವಿಧಾನ ಹೋಲುವಂಥ ಸಂಸ್ಥೆ. ಕ್ಯಾಲಿಫೊರ್ನಿಯಾದ ಜೆಪಿಎಲ್, ನಾಸಾದ ಧನ ಸಹಾಯದೊಂದಿಗೆ ಸಂಶೋಧನಾ ಚಟುವಟಿಕೆ ಕೈಗೊಳ್ಳುವಂತೆ, ತಿರುವನಂತಪುರದಲ್ಲಿರುವ ಐಐಎಸ್‌ಟಿ ಕೂಡ ಇಸ್ರೋಗೆ ಪೂರಕವಾಗಿ ಜನ್ಮತಾಳಿದಂಥ ಸಂಸ್ಥೆ. ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆ ಮುನ್ನಡೆಸುತ್ತಿರುವ ಐಐಎಸ್ಟಿ, ಬಾಹ್ಯಾಕಾಶ ವಿಜ್ಞಾನ ವಿದ್ಯಾರ್ಥಿಗಳ ಅಧ್ಯಯನ ಕೇಂದ್ರವೂ ಹೌದು.ಪ್ರಸ್ತುತ 28 ಬಾಹ್ಯಾಕಾಶ ಸಂಶೋಧನಾ ಯೋಜನೆಗಳನ್ನು ಇಸ್ರೋ ಗುರುತಿಸಿದ್ದು, ಇದರ ಕೆಲವು ಹೊಣೆಗಳನ್ನು ಐಐಎಸ್ಟಿಗೆ ನೀಡಲಿದೆ. ಐಐಎಸ್‌ಟಿ ಸಿಬ್ಬಂದಿ ಅನುಸರಿಸಬೇಕಾದ 2, 3-5 ಮತ್ತು ಏಳೂವರೆ ವರ್ಷದ ಯೋಜನೆಗಳು ಇದರಲ್ಲಿ ಸೇರಿವೆ.