Advertisement
ಚಂದ್ರಯಾನ 12003ರ ಆ.15ರ ಸ್ವಾತಂತ್ರ್ಯ ದಿನದಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರನಲ್ಲಿಗೆ ಭಾರತದ ಮೊದಲ “ಚಂದ್ರಯಾನ 1” ಯೋಜನೆಯನ್ನು ಘೋಷಿಸಿದರು. ಎಲ್ಲಾ ಸಿದ್ಧತೆಗಳು ಪೂರ್ಣಗೊಂಡು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ 2008ರ ಅ.22ರಂದು “ಪಿಎಸ್‌ಎಲ್‌ವಿ-ಎಕ್ಸ್‌ಎಲ್” ಬಾಹ್ಯಾಕಾಶ ನೌಕೆ ಮೂಲಕ ಉಪಗ್ರಹವನ್ನು ಉಡಾಯಿಸಲಾಯಿತು. 2008ರ ನ.8ರಂದು ಉಪಗ್ರಹವು ಚಂದ್ರನ ಕಕ್ಷೆಯನ್ನು ತಲುಪಿತು. 386 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿತ್ತು.
ಚಂದ್ರಯಾನ-1 ಉಪಗ್ರಹದ ಒಟ್ಟು ತೂಕ 1,380 ಕೆಜಿ. ಇದು ರೆಸಲ್ಯೂಶನ್ ರಿಮೋಟ್ ಸೆನ್ಸಿಂಗ್ ಸಾಧನಗಳನ್ನು ಹೊಂದಿತ್ತು. ಇದರ ಮೂಲಕ ಚಂದ್ರನ ವಾತಾವರಣ ಮತ್ತು ಅದರ ಮೇಲ್ಮೈಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಇವುಗಳಲ್ಲಿ ರಾಸಾಯನಿಕ ಅಂಶಗಳು, ಚಂದ್ರನ ಮ್ಯಾಪಿಂಗ್ ಮತ್ತು ಸ್ಥಳಾಕೃತಿಗಳು ಸೇರಿವೆ. ಇದೇ ವೇಳೆ ಉಪಗ್ರಹವು ಚಂದ್ರನ ಮೇಲ್ಮೈಯಲ್ಲಿ ನೀರಿನ ಪುರಾವೆಗಳನ್ನು ಕಂಡುಹಿಡಿದಿದೆ ಎಂದು ಇಸ್ರೋ 2009ರ ಸೆ.25ರಂದು ಘೋಷಿಸಿತು. 11 ವೈಜ್ಞಾನಿಕ ಪೇಲೋಡ್:
ಭಾರತ, ಅಮೆರಿಕ, ಬ್ರಿಟನ್, ಜರ್ಮನಿ, ಸ್ವಿಡನ್ ಮತ್ತು ಬಲ್ಗೇರಿಯಾದ 11 ವೈಜ್ಞಾನಿಕ ಪೇಲೋಡ್‌ಗಳನ್ನು ಬಾಹ್ಯಾಕಾಶ ನೌಕೆ ಕೊಂಡೊಯ್ಯದಿತ್ತು. ಭಾರತದಿಂದ ಟೆರೇನ್ ಮ್ಯಾಪಿಂಗ್ ಕ್ಯಾಮೆರಾ(ಟಿಎಂಸಿ), ಹೈಪರ್ ಸ್ಪೆಕ್ಟ್ರಲ್ ಇಮೇಜರ್, ಲೂನಾರ್ ಲೇಸರ್ ರೇಂಜಿಂಗ್ ಇನ್ಸ್‌ಟ್ರೂಮೆಂಟ್, ಹೈ ಎನರ್ಜಿ ಎಕ್ಸ್‌ರೇ ಸ್ಪೆಕ್ಟ್ರೋಮೀಟರ್, ಮೂನ್ ಇಂಪ್ಯಾಕ್ಟ್ ಪ್ರೋಬ್ ಹಾಗೂ ವಿದೇಶಗಳ ಚಂದ್ರಯಾನ್-1 ಎಕ್ಸ್‌ರೇ ಸ್ಪೆಕ್ಟ್ರೋಮೀಟರ್, ನಿಯರ್ ಇನ್‌ಫ್ರಾರೆಡ್ ಸ್ಪೆಕ್ಟ್ರೋಮೀಟರ್, ಸಬ್ ಕೆವ್ ಆಟಮ್ ರಿಪ್ಲೆಕ್ಟಿಂಗ್ ಅನಾಲೈಸರ್, ಮಿನಿಯೇಚರ್ ಸಿಂಥೆಟಿಕ್ ಅಪರೇಚರ್ ರಾಡಾರ್, ಮೂನ್ ಮಿನಿರಾಲಜಿ ಮ್ಯಾಪರ್, ರೇಡಿಯೇಶನ್ ಡೋಸ್ ಮಾನಿಟರ್‌ಗಳನ್ನು ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಹೊತ್ತು ಸಾಗಿತ್ತು.
Related Articles
ಚಂದ್ರಯಾನ-1 ಉಪಗ್ರಹವು ಒಟ್ಟು 312 ದಿನಗಳು ಕಾರ್ಯನಿರ್ವಹಿಸಿತು. 2009ರ ಆ.28ರಂದು ಉಪಗ್ರಹವು ಮಾಹಿತಿ ಕಳುಹಿಸುವುದನ್ನು ನಿಲ್ಲಿಸಿತು.
Advertisement
ಚಂದ್ರಯಾನ 2ಚಂದ್ರನ ಮೇಲ್ಮೈ ಸಂಯೋಜನೆಯಲ್ಲಿನ ವ್ಯತ್ಯಾಸಗಳನ್ನು ಪತ್ತೆ ಹಚ್ಚಲು ಮತ್ತು ವೈಜ್ಞಾನಿಕ ಅಧ್ಯಯನ ನಡೆಸಲು ಹಾಗೂ ಪ್ರಮುಖವಾಗಿ ಚಂದ್ರನಲ್ಲಿ ನೀರಿನ ಸ್ಥಳ ಗುರುತಿಸುವುದು ಮತ್ತು ನೀರಿನ ಪ್ರಮಾಣವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ ಚಂದ್ರಯಾನ 2 ಯೋಜನೆ ರೂಪಿಸಿತ್ತು. 2008ರ ಸೆ.18ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟ ಸಮಿತಿ ಈ ಯೋಜನೆಗೆ ಒಪ್ಪಿಗೆ ನೀಡಿತು. ಮುಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡನೇ ಅವಧಿಯಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆಗೆ ಸಿದ್ಧತೆ ಪೂರ್ಣಗೊಂಡಿತು. 2019ರ ಜು.22ರಂದು ಉಡಾವಣೆ:
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2019ರ ಜು.22ರಂದು ಎಲ್‌ವಿಎಂ3-ಎಂ1 ಬಾಹ್ಯಾಕಾಶ ನೌಕೆಯ ಮೂಲಕ ಚಂದ್ರಯಾನ 2 ಉಪಗ್ರಹವನ್ನು ಉಡಾಯಿಸಲಾಯಿತು. ನೌಕೆಯು 2019ರ ಆ.20ರಂದು ಚಂದ್ರನ ಕಕ್ಷೆಯನ್ನು ತಲುಪಿತು. ನೌಕೆಯು “ಲ್ಯಾಂಡರ್ ವಿಕ್ರಮ್’ನ ಲ್ಯಾಂಡಿಂಗ್‌ಗಾಗಿ ಅಗತ್ಯ ಸಿದ್ಧತೆಗಳನ್ನು ನಡೆಸಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸುಮಾರು 70 ಡಿಗ್ರಿ ದಕ್ಷಿಣದ ಅಕ್ಷಾಂಶದಲ್ಲಿ 2019ರ ಸೆ.6ರಂದು ಲ್ಯಾಂಡರ್ ಇಳಿಯಬೇಕಿತ್ತು. ಚಂದ್ರನ ಮೇಲೆ ಇಸ್ರೋ ವಿಕ್ರಮವನ್ನು ಕಣ್ತುಂಬಿಕೊಳ್ಳಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕೇಂದ್ರ ಕಚೇರಿಗೆ ಆಗಮಿಸಿದ್ದರು. ಇನ್ನೇನು ಚಂದ್ರನನ್ನು ಚುಂಬಿಸಲು ಲ್ಯಾಂಡರ್‌ಗೆ 2.1 ಕಿ.ಮೀ. ದೂರ. ಸಂಪರ್ಕ ಕಡಿತ:
ಆದರೆ ಈ ವೇಳೆಯಲ್ಲೇ ಭೂಮಿಯಿಂದ ಉಪಗ್ರಹ ಸಂಪರ್ಕ ಕಳೆದುಕೊಂಡಿತು. ಲ್ಯಾಂಡರ್ ಚಂದ್ರನ ನೆಲಕ್ಕೆ ಅಪ್ಪಳಿಸಿತು. ಇಷ್ಟು ದಿನಗಳು ಹಗಲು-ರಾತ್ರಿ ಇಸ್ರೋ ವಿಜ್ಞಾನಿಗಳ ಶ್ರಮ ಫಲ ನೀಡಲಿಲ್ಲ. ಇದರಿಂದ ದುಃಖೀತರಾದ ಅಂದಿನ ಇಸ್ರೋ ಅಧ್ಯಕ್ಷ ಕೆ.ಶಿವನ್ ಕಣ್ಣೀರು ಸುರಿಸತೊಡಗಿದರು. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಶಿವನ್ ಅವರನ್ನು ಅಪ್ಪಿಕೊಂಡು, ಸಾಂತ್ವನ ಹೇಳಿ, ಮತ್ತೂಮ್ಮೆ ಈ ನಿಟ್ಟಿನಲ್ಲಿ ಮರಳಿ ಯತ್ನವ ಮಾಡುವಂತೆ ಧೈರ್ಯ ತುಂಬಿದರು. 978 ಕೋಟಿ ರೂ. ವೆಚ್ಚ:
ನಂತರ ಇಸ್ರೋ ನಡೆಸಿದ ವಿಶ್ಲೇಷಣೆಯ ಪ್ರಕಾರ, ತಾಂತ್ರಿಕ ದೋಷ “ಸಾಫ್ಟ್ವೇರ್ ಗ್ಲಿಚ್’ ಪರಿಣಾಮ ಉಪಗ್ರಹವು ಸಂಪರ್ಕ ಕಳೆದುಕೊಂಡಿತ್ತು. ಚಂದ್ರಯಾನ 2ರ ಯೋಜನೆ ವೆಚ್ಚ 603 ಕೋಟಿ ರೂ. ಹಾಗೂ ಉಡಾವಣೆ ವೆಚ್ಚ 375 ಕೋಟಿ ರೂ. ಸೇರಿ ಒಟ್ಟು 978 ಕೋಟಿ ರೂ. ವೆಚ್ಚವಾಯಿತು. ಚಂದ್ರಯಾನ 3
ಚಂದ್ರಯಾನ 3 ಇದು ಚಂದ್ರಯಾನ 2ರ ಮುಂದುವರಿದ ಕಾರ್ಯಾಚರಣೆಯಾಗಿದೆ. ಉಪಗ್ರಹ ಉಡಾವಣೆಗೆ ಈಗಾಗಲೇ ಇಸ್ರೋ ಸಿದ್ಧತೆ ನಡೆಸಿದೆ. ಪೇಲೊಡ್‌ಗಳನ್ನು ಲಾಂಚಿಂಗ್ ಪ್ಯಾಡ್‌ನಲ್ಲಿ ಸ್ಥಾಪಿಸಲಾಗಿದೆ. ಜು.12ರಿಂದ 19ರೊಳಗೆ ಉಡಾವಣೆ ನಡೆಸಲಾಗುವುದು ಎಂದು ಇಸ್ರೋ ಈ ಹಿಂದೆ ತಿಳಿಸಿತ್ತು. ಇತ್ತೀಚೆಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು, “ಎಲ್ಲಾ ಅಂದುಕೊಂಡಂತೆ ಆದರೆ ಜು.13ರಂದು ಉಡಾವಣೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ. ಮೂರು ಪೇಲೋಡ್‌ಗಳು:
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್‌ವಿಎಂ3(ಲಾಂಚ್ ವೆಹಿಕಲ್ ಮಾರ್ಕ್ 3) ಬಾಹ್ಯಾಕಾಶ ನೌಕೆಯ ಮೂಲಕ ಉಪಗ್ರಹ ಉಡಾವಣೆಯಾಗಲಿದೆ. ಬಾಹ್ಯಾಕಾಶ ನೌಕೆಯು ಚಂದ್ರನತ್ತ ಮೂರು ಪೇಲೋಡ್‌ಗಳನ್ನು ಕೊಂಡೊಯ್ಯಲಿದೆ. ಪ್ರಪೋಲÒನ್ ಪೇಲೋಡ್, ರೋವರ್ ಪೇಲೋಡ್ ಮತ್ತು ಲ್ಯಾಂಡರ್ ಪೇಲೋಡ್ ಒಳಗೊಂಡಿದೆ. ಏನೇನು ಅಧ್ಯಯನ?:
ಲ್ಯಾಂಡರ್‌ನಲ್ಲಿ ಅಳವಡಿಸಿರುವ ಲ್ಯಾಂಗ್‌ಮುಯಿರ್ ಪ್ರೋಬ್ ಚಂದ್ರನ ಮೇಲಿನ ಪ್ಲಾಸ್ಮಾ ಸಾಂದ್ರತೆ ಮತ್ತು ಅದರಲ್ಲಿರುವ ವ್ಯತ್ಯಾಸವನ್ನು ಪತ್ತೆ ಮಾಡಲಿದೆ. ಜತೆಗೆ ಇದರಲ್ಲಿ ಅಳವಡಿಸಲಾಗಿರುವ ಚಂದ್ರನ ಮೇಲ್ಮೈ ಥರ್ಮೊಫಿಸಿಕಲ್ ಮಾದರಿಯು ಚಂದ್ರನ ಮೇಲ್ಮೈನ ತಾಪಮಾನವನ್ನು ಅಧ್ಯಯನ ಮಾಡಲಿದೆ. ಅದೇ ರೀತಿ ಇನ್ಸ್‌ಸ್ಟ್ರೆಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ ಚಂದ್ರನ ಮೇಲ್ಮೈನ ಭೂಕಂಪಗಳ ಬಗ್ಗೆ ಅಧ್ಯಯನ ನಡೆಸಲಿದೆ. ಚಂದ್ರನ ಕತ್ತಲೆಯ ಭಾಗ ಅನ್ವೇಕ್ಷಣೆ:
ಇನ್ನೊಂದೆಡೆ, ಚಂದ್ರನಲ್ಲಿರುವ ಖನಿಜಗಳು, ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನ ನಡೆಸಲು ರೋವರ್‌ನಲ್ಲಿ ಲೇಸರ್ ಇಂಡ್ನೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಮತ್ತು ಆಲ್ಫಾ ಪಾರ್ಟಿಕಲ್ ಎಕ್ಸ್‌ರೇ ಸ್ಪೆಕ್ಟ್ರೋ ಮೀಟರ್ ಅಳವಡಿಕೆಯಾಗಿದೆ. ಅದೇ ರೀತಿ ಉಪಗ್ರಹವು ಚಂದ್ರನಲ್ಲಿರುವ ನೀರಿನ ಅಂಶದ ಕುರಿತು ಅಧ್ಯಯನ ನಡೆಸಲಿದೆ. ಪ್ರಮುಖವಾಗಿ ಚಂದ್ರನ ದಕ್ಷಿಣ ಧ್ರುವದ ಕತ್ತಲಿನ ಭಾಗದ ಅನ್ವೇಕ್ಷಣೆ ನಡೆಸಲಿದ್ದು, ಅದರ ಮೇಲ್ಮೆ„ಯನ್ನು ಅಧ್ಯಯನ ನಡೆಸಲಿದೆ. ಪರಸ್ಪರ ಸಂವಹನ:
ಪ್ರೊಪಲನ್ ಪೇಲೋಡ್ ಚಂದ್ರನಿಂದ ಇಸ್ರೋದ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್(ಐಡಿಎಸ್‌ಎನ್)ನೊಂದಿಗೆ ಸಂವಹನ ನಡೆಸಲಿದೆ. ಅದೇ ರೀತಿ ಲ್ಯಾಂಡರ್ ಮಾಡ್ನೂಲ್ ಐಡಿಎಸ್‌ಎನ್ ಮತ್ತು ರೋವರ್‌ನೊಂದಿಗೆ ಸಂವಹನ ನಡೆಸಲಿದೆ. ಆದರೆ ರೋವರ್, ಲ್ಯಾಂಡರ್‌ನೊಂದಿಗೆ ಮಾತ್ರ ಸಂವಹನ ನಡೆಸುತ್ತದೆ. ಚಂದ್ರಯಾನ 3 ವೆಚ್ಚ:
ಯೋಜನೆಯ ಅಂದಾಜು ವೆಚ್ಚ 600 ಕೋಟಿ ರೂ.
ಉಡಾವಣಾ ನೌಕೆ:
ಲಾಂಚ್ ವೆಹಿಕಲ್ ಮಾರ್ಕ್ 3(ಎಲ್‌ವಿಎಂ3)
ನೌಕೆಯ ಒಟ್ಟು ತೂಕ: 1752 ಕೆಜಿ
ಇಂಧನ ಶಕ್ತಿ: 738 ವ್ಯಾಟ್ಸ್
ಯೋಜನೆಯ ಜೀವಿತಾವಧಿ: ಒಂದು ಲೂನಾರ್ ದಿನ(14 ಭೂಮಿಯ ದಿನಗಳು)
ದೇಸಿ ಎಂಜಿನ್: ಬಾಹ್ಯಾಕಾಶ ನೌಕೆಗೆ ಸ್ವದೇಶಿ ನಿರ್ಮಿತ ಕ್ರಯೋಜಿನಿಕ್ ಎಂಜಿನ್ ಅಳವಡಿಕೆ ಸವಾಲುಗಳೇನು?:
ಚಂದ್ರನ ಮೇಲೆ ನಿಖರವಾಗಿ ಲ್ಯಾಂಡರ್ ಇಳಿಯಲು ಬಹು ಹೈಟೆಕ್ ವ್ಯವಸ್ಥೆಯ ಅಗತ್ಯವಿದೆ. ಪಿನ್‌ಪಾಯಿಂಟ್ ನ್ಯಾವಿಗೇಷನ್ ಮಾರ್ಗದರ್ಶನ, ನಿಖರವಾದ ಫ್ಲೆಟ್ ಡೈನಾಮಿಕ್ಸ್ ಸ್ಪಷ್ಟವಾದ ಭೂಪ್ರದೇಶದ ಚಿತ್ರಣ, ಸರಿಯಾದ ಸಮಯದಲ್ಲಿ ಥ್ರಸ್ಟರ್ ಫೈರಿಂಗ್ ಮತ್ತು ಅಂತಿಮವಾಗಿ, ನಿಖರವಾದ ಲ್ಯಾಂಡಿಂಗ್ ಸ್ಥಳವನ್ನು ತಲುಪಲು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವೇಗದಲ್ಲಿ ಚಲಿಸುವ ಸಾಮರ್ಥ್ಯ ಅಗತ್ಯವಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಹಂತದಲ್ಲೂ ತಪ್ಪು ಹೆಜ್ಜೆ ಇಟ್ಟರೆ ಇಡೀ ಯೋಜನೆಯೇ ವಿಫಲವಾಗಲಿದೆ. ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಲ್ಯಾಂಡರ್ ಇಳಿಯಬೇಕಾದರೆ, ಲ್ಯಾಂಡರ್ ಚಂದ್ರನ ಬಳಿ ತಲುಪುವ ಹಂತದಲ್ಲೇ ಅದರ ವೇಗವನ್ನು ಗಣನೀಯವಾಗಿ ತಗ್ಗಿಸುತ್ತಾ ಬರಬೇಕಿದೆ. ಥ್ರಸ್ಟರ್‌ಗಳ ಸಹಾಯದಿಂದ ವೇಗವನ್ನು ತಗ್ಗಿಸಲಾಗುತ್ತದೆ. ವೇಗ ಮತ್ತು ಸಮಯದ ಲೆಕ್ಕಾಚಾರದಲ್ಲಿ ತಪ್ಪು ಎಣಿಕೆಯಿಂದಾಗಿ ಜಪಾನ್‌ನ ಹಕುಟೊ-ಆರ್ ಲೂನಾರ್ ಲ್ಯಾಂಡರ್ ವಿಫಲವಾಯಿತು. ಸಾಫ್ಟ್ವೇರ್ ಗ್ಲಿಚ್ ಕಾರಣದಿಂದ ಇದೇ ರೀತಿಯ ತಪ್ಪು ಲೆಕ್ಕಾಚಾರದಿಂದಾಗಿ ಭಾರತದ ಚಂದ್ರಯಾನ-2 ವಿಫಲವಾಯಿತು.