Advertisement

ಚಂದ್ರ ಶೋಧಕ್ಕೆ ಇಸ್ರೋ ಡಬಲ್‌ ಧಮಾಕಾ!

07:35 AM Jul 31, 2017 | Team Udayavani |

ಹೊಸದಿಲ್ಲಿ : ಚಂದ್ರಯಾನ 1 ಯಶಸ್ವಿಯಾಗಿ ನೆರವೇರಿಸಿ ಬೀಗಿದ್ದ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋ 2ನೇ ಬಾರಿಗೆ ಚಂದ್ರಯಾನಕ್ಕೆ ಸಿದ್ಧತೆ ನಡೆಸಿದೆ. 2018ರ ಆರಂಭ ದಲ್ಲೇ “ಚಂದ್ರಯಾನ 2′ ನೆರವೇರಲಿದೆ. ಇದರಲ್ಲಿ 2 ಯೋಜನೆಗಳನ್ನು ಹಾಕಿಕೊಂಡಿರುವುದು ವಿಶೇಷ. ಟೀಂ ಇಂಡಸ್‌ (ಐಐಟಿ ದಿಲ್ಲಿಯ ಹಳೆ ವಿದ್ಯಾರ್ಥಿ ಗಳ ತಂಡ) ಹೆಸರಿನ ಪ್ರತ್ಯೇಕ ತಂಡವೊಂದು ಚಂದ್ರನ ಮೇಲ್ಮೆ„ಗೆ 2 ಶೋಧಕ ಯಂತ್ರ ಇಳಿಸಿ ಶೋಧಿಸಲಿದ್ದರೆ, 
ಇನ್ನೊಂದು ಶೋಧಕ ಉಪಗ್ರಹವನ್ನು ಹಾರಿಬಿಡಲಾಗುವುದು. ಈ ಮೂಲಕ ಚಂದ್ರಯಾನದಲ್ಲಿ ಮತ್ತೂಂದು ದಾಖಲೆಗೆ ಇಸ್ರೋ ಸಿದ್ಧತೆ ನಡೆಸುತ್ತಿದೆ.  ಯೋಜನೆಯ ಚಿತ್ರಣ ಹೀಗಿದೆ…

Advertisement

ಆಗಸದಲ್ಲಿ ಉಪಗ್ರಹ‌, ಮೇಲ್ಮೆ„ನಲ್ಲಿ ಲ್ಯಾಂಡರ್‌, ರೋವರ್‌ 
ಈ ಬಾರಿ ಚಂದ್ರಯಾನದಲ್ಲಿ ಏಕಕಾಲಕ್ಕೆ ನೆಲದ ಮೇಲ್ಮೆ„, ಆಗಸದಲ್ಲಿ ಉಪಗ್ರಹ ಮೂಲಕ ಸಂಶೋಧನೆ ಪ್ಲಸ್‌ ಪಾಯಿಂಟ್‌. ಉಪಗ್ರಹವನ್ನು ಚಂದ್ರನ 100 ಕಿ.ಮೀ. ಮೇಲಿನ ಕಕ್ಷೆಯಲ್ಲಿ ಕೂರಿಸಲಾಗುತ್ತಿದ್ದರೆ, ಲ್ಯಾಂಡರ್‌, ರೋವರ್‌ ಶೋಧಕಗಳನ್ನು ಚಂದ್ರನ ಮೇಲೆ ಇಳಿಸಲಾ ಗುತ್ತದೆ. ಲ್ಯಾಂಡರ್‌, ರೋವರ್‌ಗಳು ಚಂದ್ರನ ಮೇಲಿನ‌ ಖನಿಜ, ಸ್ವರೂಪ, ಸಂರಚನೆ ಬಗ್ಗೆ ಶೋಧಿಸಲಿವೆ. 

ಜಿಎಸ್‌ಎಲ್‌ವಿ ಎಮ್‌ಕೆ 2 ಬಳಕೆ
ಚಂದ್ರಯಾನ 2ಗೆ ಹೊಸ ರಾಕೆಟ್‌ ಜಿಎಸ್‌ಎಲ್‌ವಿ ಎಮ್‌ಕೆ 2 ಅನ್ನು ಬಳಸಲಾಗುತ್ತದೆ. ಸುಮಾರು 3200 ಕೇಜಿಯಷ್ಟು ಪೇಲೋಡ್‌ (ಲ್ಯಾಂಡರ್‌ ಮತ್ತು ಸಂಶೋಧಕ ಉಪಗ್ರಹ) ಇದರಲ್ಲಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next