ಉಪಗ್ರಹಗಳ ಕಕ್ಷೆ ಎತ್ತರಿಸುವ ಪ್ರಕ್ರಿಯೆಗಳಿಗೆ ಈ ವಿದ್ಯುತ್‌ಚಾಲಿತ ಪ್ರೊಪಲ್ಶನ್ ವ್ಯವಸ್ಥೆ ಬಳಸಲಾಗುತ್ತದೆ. ಇದು 300 ಮಿಲಿ ನ್ಯೂಟನ್ ಥÅಸ್ಟರ್ ಅನ್ನು ಹೊಂದಿರುತ್ತದೆ ಎಂದು ಇಸ್ರೋ ತಿಳಿಸಿದೆ.
Advertisement
ಪ್ರಸ್ತುತ ಇಸ್ರೋ ಉಪಗ್ರಹಗಳನ್ನು ಕಕ್ಷೆಗೆ ಎತ್ತರಿಸುವಂಥ ಪ್ರಕ್ರಿಯೆ ನಡೆಸಲು ರಾಸಾಯನಿಕ ನೋದನ ವ್ಯವಸ್ಥೆಯನ್ನು ಬಳಸುತ್ತಿದೆ. ಇನ್ನು ಮುಂದೆ, ಇಂಥ ಪ್ರಕ್ರಿಯೆಗಳಿಗೆ ಸಾಂಪ್ರದಾಯಿಕ ವ್ಯವಸ್ಥೆಯ ಬದಲು ವಿದ್ಯುತ್‌ಚಾಲಿತ ವ್ಯವಸ್ಥೆ ಬಳಸುವುದು ಇಸ್ರೋ ಉದ್ದೇಶ. ಇದು ಸಾಧ್ಯವಾದರೆ, ಭವಿಷ್ಯದಲ್ಲಿ ರಾಸಾಯನಿಕ ಇಂಧನಗಳ ಮೇಲಿನ ಇಸ್ರೋ ಅವಲಂಬನೆ ತಗ್ಗಲಿದೆ.
ಐಐಟಿ ಮದ್ರಾಸ್‌ನ ಸಹಕಾರದೊಂದಿಗೆ ಚೆನ್ನೈಯ ಖಾಸಗಿ ಸಂಸ್ಥೆ “ಅಗ್ನಿಕುಲ ಕಾಸ್ಮೋಸ್’ ಸಿದ್ಧಪಡಿಸಿರುವ “ಅಗ್ನಿಬಾನ್ ರಾಕೆಟ್’ ನ್ನು ಉಡಾವಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಇದು ಇಸ್ರೋ ಉಡಾ ವಣೆ ಮಾಡುತ್ತಿರುವ 2ನೇ ಖಾಸಗಿ ರಾಕೆಟ್ ಆಗಿದೆ. ಇದೊಂದು ತ್ರೀಡಿ ಪ್ರಿಟಿಂಗ್ ರಾಕೆಟ್ ಆಗಿದ್ದು, ಮಾ.22ರಿಂದ 28ರ ಅವಧಿಯಲ್ಲಿ ಉಡಾವಣೆಯಾಗುವ ಸಾಧ್ಯತೆ ಇದೆ ಎಂದು ಕಂಪೆನಿ ಹೇಳಿದೆ. ಶ್ರೀಹರಿಕೋಟಾದಲ್ಲಿ ನಿರ್ಮಾಣ ಮಾಡಲಾಗಿರುವ ಖಾಸಗಿ ಲಾಂಚ್‌ಪ್ಯಾಡ್ ಮೂಲಕ ಈ ಉಡಾವಣೆ ನಡೆಯಲಿದೆ. ಇದು 2 ವಿಭಾಗಗಳನ್ನು ಹೊಂದಿರುವ ರಾಕೆಟ್ ಆಗಿದ್ದು, 100 ಕೆ.ಜಿ. ತೂಕದ ಪೇಲೋಡನ್ನು 700 ಕಿ.ಮೀ. ದೂರಕ್ಕೆ ಹೊತ್ತೂಯ್ಯಬಲ್ಲದು. 2022ರ ನ.19ರಂದು ಹೈದರಾಬಾದ್ ಮೂಲದ ಸ್ಕೈರೂಟ್ ಸಂಸ್ಥೆ ಮೊದಲ ಬಾರಿಗೆ ಖಾಸಗಿ ರಾಕೆಟ್‌ನ್ನು ಉಡಾವಣೆ ಮಾಡಿತ್ತು.