Advertisement

ISRO ಅಧ್ಯಕ್ಷರಿಗೆ ನಿವೃತ್ತಿ ಅಂಚಿನಲ್ಲಿ ಪಿಎಚ್‌.ಡಿ.; ಈಡೇರಿದ ಕನಸು

12:47 AM Jul 20, 2024 | Team Udayavani |

ಚೆನ್ನೈ: ತಮ್ಮ 60ನೇ ವಯಸ್ಸಿನಲ್ಲಿ ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ ಪಿಎಚ್‌ಡಿ ಪಡೆದು ಎಲ್ಲರಿಗೂ ಒಂದು ಮಾದರಿಯಾಗಿದ್ದಾರೆ. ಚೆನ್ನೈನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಮದ್ರಾಸ್‌ನಿಂದ ಮೆಕಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಅವರು ಪಿಎಚ್‌ಡಿ ಪಡೆದಿದ್ದಾರೆ.

Advertisement

ಭಾರತದ ವಿಜ್ಞಾನ ಕ್ಷೇತ್ರಕ್ಕೆ ಸೋಮ ನಾಥ್‌ ನೀಡಿರುವ ಕೊಡುಗೆ, ಅದ ರಲ್ಲೂ 3ನೇ ಮಾನವರಹಿತ ಚಂದ್ರ ಯಾನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅದಕ್ಕಾಗಿ ಸಂಸ್ಥೆಯು ತನ್ನ ನಿಯಮ ಗಳನ್ನು ಕೊಂಚ ಸಡಿಲಗೊಳಿಸಿ ತನ್ನ 61ನೇ ಘಟಿಕೋತ್ಸವದಲ್ಲಿ ಸೋಮನಾಥ್‌ ಅವರಿಗೆ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.

ಐಐಟಿ-ಎಂನ ನಿರ್ದೇಶಕ ಪ್ರೊ.ವಿ.ಕಾಮಕೋಟಿ ಹಾಗೂ ಐಐಟಿ ಮದ್ರಾಸ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ| ಪವನ್‌ ಗೊಯೇಂಕಾ ಸೋಮನಾಥ್‌ ಅವರಿಗೆ ಪದವಿಯನ್ನು ಹಸ್ತಾಂತರಿಸಿದರು.

‘ಜಿಎಸ್‌ಎಲ್‌ವಿ-ಎಂಕೆ3’ಯ ಅಭಿವೃದ್ಧಿ ಮಾಡಲು ತೊಡಗಿಸಿಕೊಂಡಿದ್ದ ಕಾರಣ ಪಿಎಚ್‌ಡಿ ಅರ್ಧಕ್ಕೇ ನಿಂತಿತ್ತು. ಇಸ್ರೋ ಅಧ್ಯಕ್ಷನಾದ ಬಳಿಕ ಅದನ್ನು ಪೂರ್ಣಗೊಳಿಸಲು ಅವಕಾಶ ಸಿಕ್ಕಿದ್ದು ಅದೃಷ್ಟ. ಇದು ನನಗೆ ದೊಡ್ಡ ಗೌರವ ಎಂದು ಇಸ್ರೋ ಅಧ್ಯಕ್ಷ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next