Advertisement

ISRO; ಮಾನವ ಸಹಿತ ಗಗನಯಾನಕ್ಕೆ ಸಿಇ20 ಎಂಜಿನ್‌ ಸುರಕ್ಷಿತ

12:01 AM Feb 22, 2024 | Team Udayavani |

ಹೊಸದಿಲ್ಲಿ: ಇಸ್ರೋ ಸಿದ್ಧಪಡಿಸಿರುವ ಸಿಇ20 ಕ್ರಯೋಜಿನಿಕ್‌ ಎಂಜಿನ್‌ ಮಾನವ ಸಹಿತ ಗಗನಯಾನಕ್ಕೆ ಸುರಕ್ಷಿತವಾಗಿದೆ ಎಂಬುದು ಅಂತಿಮ ಹಂತದ ಪರೀಕ್ಷೆಗಳಲ್ಲಿ ದೃಢಪಟ್ಟಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದ ಪ್ರಮುಖ ಮೈಲಿಗಲ್ಲಾಗಿದೆ. ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಬಾಹ್ಯಾಕಾಶ ಯೋಜನೆಯ ಭಾಗವಾಗಿ ಕ್ರಯೋಜಿನಿಕ್‌ ಎಂಜಿನ್‌ ಪರೀಕ್ಷೆ ನಡೆಸಲಾಗಿದೆ.

Advertisement

ತಮಿಳುನಾಡಿನ ಮಹೇಂದ್ರ ಗಿರಿಯ ಇಸ್ರೋ ಪ್ರೊಪಲÒನ್‌ ಕಾಂಪ್ಲೆಕ್ಸ್‌ನಲ್ಲಿರುವ ಹೈ ಅಲ್ಟಿಟೂಡ್‌ ಟೆಸ್ಟ್‌ ಫೆಸಿಟಿಲಿ ಸೆಂಟರ್‌ನಲ್ಲಿ ಫೆ. 13ರಂದು ವ್ಯಾಕ್ಯೂಮ್‌ ಇಗ್ನಿಶನ್‌ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದು ಏಳನೇ ಮತ್ತು ಅಂತಿಮ ಹಂತದ ಪರೀಕ್ಷೆಯಾಗಿದೆ ಎಂದು ಇಸ್ರೋ ತಿಳಿಸಿದೆ. “ಗಗನಯಾನ ಬಾಹ್ಯಾಕಾಶ ಯೋಜನೆಗಳಿಗೆ ಇಸ್ರೋದ ಸಿಇ20 ಕ್ರಯೋಜಿನಿಕ್‌ ಎಂಜಿನ್‌ ಮಾನವ ಸಹಿತ ಗಗನಯಾನಕ್ಕೆ ಸುರಕ್ಷಿತವಾಗಿದೆ’ ಎಂದು ಇಸ್ರೋ ಬುಧವಾರ ಟ್ವೀಟ್‌ ಮಾಡಿದೆ. ಮಾನವನ ಸುರಕ್ಷತೆ ನಿಟ್ಟಿನಲ್ಲಿ ಸಿಇ20 ಕ್ರಯೋಜಿನಿಕ್‌ ಎಂಜಿನ್‌ನ ಅಂತಿಮ ಹಂತದ ಪರೀಕ್ಷೆಯು ಲೈಫ್ ಡೆಮಾನ್ಸ್‌ ಸ್ಟ್ರೇಶನ್‌ ಟೆಸ್ಟ್‌, ಸಹಿಷ್ಣುತೆ ಪರೀಕ್ಷೆ ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನ ಪರೀಕ್ಷೆಗಳನ್ನು ಒಳಗೊಂಡಿತ್ತು. ಇನ್ನೊಂದೆಡೆ, 2024ರ ಎರಡನೇ ತ್ತೈಮಾಸಿಕದಲ್ಲಿ ಇಸ್ರೋದಿಂದ ಕೈಗೊಳ್ಳಲಿರುವ ಮೊದಲ ಮಾನವರಹಿತ ಗಗನಯಾನ(ಜಿ1) ಯೋಜನೆಗೆ ಪ್ಲೆ„ಟ್‌ ಎಂಜಿನ್‌ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next