Advertisement

ISRO: ನಮ್ಮ ‘ಶುಕ್ರಯಾನ’ಕ್ಕೆ ಮುಹೂರ್ತ ನಿಗದಿ

07:37 AM Oct 02, 2024 | Team Udayavani |

ಹೊಸದಿಲ್ಲಿ: ಚಂದ್ರ, ಮಂಗಳ ಮತ್ತು ಸೂರ್ಯರ ಅಧ್ಯಯನದ ಬಳಿಕ ಭೂಮಿಯ ಅವಳಿ ಗ್ರಹ ಎಂದೇ ಖ್ಯಾತವಾದ ಶುಕ್ರನ ಅಧ್ಯಯನಕ್ಕೆ ಭಾರತ ಮುಂದಾಗಿದೆ.

Advertisement

ಇದಕ್ಕಾಗಿ ಆರ್ಬಿಟರ್‌ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದ್ದು, 2028ರ ಮಾ. 29ರಂದು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಮಂಗಳವಾರ ಘೋಷಿಸಿದೆ.

ಈ ಯೋಜನೆಗೆ “ಶುಕ್ರಯಾನ-1′ ಎಂದು ಹೆಸರಿಡಲಾಗಿದೆ. ಶುಕ್ರ ಗ್ರಹದ ವಾತಾವರಣ, ಮೇಲ್ಪದರ, ಭೌಗೋಳಿಕ ರಚನೆ, ಸೂರ್ಯನೊಂದಿಗೆ ಶುಕ್ರ ಹೊಂದಿ ರುವ ಸಂಬಂಧವನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ.

ಉಡಾವಣೆ ಹೇಗೆ?: ಇಸ್ರೋದ ಶಕ್ತಿಶಾಲಿ ರಾಕೆಟ್‌ ಎಂದು ಕರೆಸಿಕೊಳ್ಳುವ ಎಲ್‌ಎಂವಿ ಮಾರ್ಕ್‌-3 ಮೂಲಕ ಉಡಾವಣೆ ಮಾಡ ಲಾಗುತ್ತದೆ. ನಿಗದಿತ ಕಕ್ಷೆಗೆ ನೌಕೆಯನ್ನು ಮಾರ್ಕ್‌-3 ತಲುಪಿಸ ಲಿದೆ. ಬಳಿಕ ಭೂಮಿಯನ್ನು ಸುತ್ತುತ್ತ ನೂಕುಬಲವನ್ನು ಪಡೆಯುವ ನೌಕೆಯು ಅನಂತರ ಶುಕ್ರನತ್ತ ಯಾನವನ್ನು ಮುಂದುವರಿಸಲಿದೆ. ಅದು 2028ರ ಜು. 19ರಂದು ಕಕ್ಷೆಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

5ನೇ ದೇಶ ಎಂಬ ಖ್ಯಾತಿ: ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂಟ ಮತ್ತು ಜಪಾನ್‌ ಈಗಾಗಲೇ ಶುಕ್ರಯಾನವನ್ನು ಯಶಸ್ವಿಯಾಗಿ ಕೈಗೊಂಡಿವೆ. ಭಾರತ ಯಶಸ್ವಿಯಾದರೆ 5ನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next