Advertisement
ಬಾಹ್ಯಾಕಾಶದಲ್ಲಿ ಕಂಡುಬರುವ ಪ್ರಬಲವಾದ ಕ್ಷಕಿರಣಗಳನ್ನು ಅಧ್ಯ ಯನ ಮಾಡುವ ಎಕ್ಸ್‌ಪೊಸ್ಯಾಟ್ ಉಪಗ್ರಹವನ್ನು ಸೋಮವಾರ ಇಸ್ರೋ ಉಡಾವಣೆ ಮಾಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣ ನೆಲೆಯಿಂದ ಬೆಳಗ್ಗೆ 9.10ಕ್ಕೆ ಪಿಎಸ್‌ಎಲ್‌ವಿ-ಸಿ58 ರಾಕೆಟ್ ಮೂಲಕ ಎಕ್ಸ್‌ಪೋಸ್ಯಾಟ್ ನಭಕ್ಕೆ ನೆಗೆಯಲಿದೆ. ಅದಕ್ಕೆ ಬೆಳಗ್ಗೆ 8.10ರಿಂದಲೇ ಕ್ಷಣಗಣನೆ ಪ್ರಾರಂಭವಾಗಲಿದೆ.
Related Articles
ಸೋಮವಾರ ಕೇವಲ ಎಕ್ಸ್ ಪೋಸ್ಯಾಟ್ ಮಾತ್ರ ಉಡಾವಣೆ ಯಾಗುತ್ತಿಲ್ಲ. ಅದರೊಂದಿಗೆ 10 ಇತರ ಉಪಗ್ರಹಗಳೂ ನಿಗದಿತ ಕಕ್ಷೆ ಸೇರಲಿವೆ.
Advertisement
ಅಧ್ಯಯನದಿಂದ ಲಾಭವೇನು?ಖಗೋಳಶಾಸ್ತ್ರಜ್ಞರಿಗೆ ಈ ಉಪಗ್ರಹ ದಿಂದ ಬಹಳ ಲಾಭವಾಗಲಿದೆ. ಈ ಉಪಗ್ರಹ ಸುತ್ತುವಾಗ ಸಣ್ಣ ಧೂಮಕೇತುಗಳಿಂದ ಹಿಡಿದು ದೂರದ ಆಕಾಶಕಾಯಗಳ ಬಗ್ಗೆಯೂ ಮಾಹಿತಿ ಸಿಗಲಿದೆ. ಬಾಹ್ಯಾ ಕಾಶದಲ್ಲಿರುವ ದ್ರವ್ಯಗಳು ಒಂದು ರೂಪ ಪಡೆಯುವು ದನ್ನು, ಅವು ಬೇರೆಬೇರೆ ಕಡೆಗೆ ಹರಡುವುದನ್ನು ಅರ್ಥ ಮಾಡಿಕೊಳ್ಳಬಹುದು. ಬೆಂಗಳೂರಿನ ಬೆಲೇಟ್ರಿಕ್ಸ್ ಸಹಿತ
4 ಸ್ಟಾರ್ಟಪ್‌ಗಳ ಪೇಲೋಡ್
ಇಸ್ರೋದ ನೌಕೆಯಲ್ಲಿ ಬೆಂಗಳೂರಿನ ಬೆಲೇಟ್ರಿಕ್ಸ್ ಏರೋಸ್ಪೇಸ್ ಸಹಿತ ದೇಶದ ಒಟ್ಟು ನಾಲ್ಕು ಬಾಹ್ಯಾಕಾಶ ಸಂಬಂಧಿ ಸ್ಟಾರ್ಟಪ್ ಗಳು ತಮ್ಮ ಪೇಲೋಡ್‌ಗಳನ್ನು ಸೇರಿಸಿವೆ. ಬೆಲೇಟ್ರಿಕ್ಸ್ ಸಂಸ್ಥೆ ರುದ್ರ 0.3 ಎಚ್‌ಪಿ ಜಿಪಿ ಎಂಬ ಥÅಸ್ಟರ್, ಅರ್ಕ-200 ಎಂಬ ಕಡಿಮೆ ಬಿಸಿಯಾಗುವ ಥಸ್ಟರ್ ಅನ್ನು ಸೇರಿಸಿದೆ. ಹೈದರಾಬಾದ್‌ನ ಧ್ರುವ ಸ್ಪೇಸ್ ಸಂಸ್ಥೆ ಲೀಪ್-ಟಿಡಿಯನ್ನು, ಟೇಕ್‌ಮಿ2ಸ್ಪೇಸ್ ಸಂಸ್ಥೆಯು ಆರ್‌ಎಸ್‌ಇಎಂ, ಮುಂಬಯಿಯ ಇನ್‌ಸ್ಪೆಸಿಟಿ ಸ್ಪೇಸ್ ಲ್ಯಾಬ್ಸ್ ಪ್ರೈ.ಲಿ. ಗಿತಾ ವನ್ನು ಕಳುಹಿಸಿಕೊಡಲಿವೆ. ಪೋಲಿಕ್ಸ್ ಅನ್ನು ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಯು.ಆರ್. ರಾವ್ ಸ್ಯಾಟ ಲೈಟ್ ಸೆಂಟರ್ ಸಹಯೋಗದೊಂದಿಗೆ ನಿರ್ಮಿಸಿದೆ. ಉದ್ದೇಶವೇನು?
-ಬಾಹ್ಯಾಕಾಶದ ಅಪರಿಚಿತ ಮೂಲಗಳಿಂದ ಹೊಮ್ಮುವ ಕ್ಷಕಿರಣಗಳು, ಅವು ಚದುರುವ ರೀತಿಯನ್ನು ಅಧ್ಯಯನ ಮಾಡು ವುದು ಮೂಲ ಉದ್ದೇಶ.
-ಬಾಹ್ಯಾಕಾಶದಲ್ಲಿರುವ ಕಾಂತೀಯ ವಲಯದ ವ್ಯಾಪ್ತಿಯನ್ನು ಅರಿಯುವುದು, ಬಾಹ್ಯಾಕಾಶದಿಂದ ಹೊಮ್ಮುವ ಬ್ರಹ್ಮಕಿರಣಗಳ (ಕಾಸ್ಮಿಕ್ ರೇ) ಸ್ವರೂಪವನ್ನು ಅಧ್ಯಯನ ಮಾಡುವುದು.
-ಕ್ಷ ಕಿರಣಗಳ ಉತ್ಪಾದನ ಕ್ರಮವನ್ನು ತಿಳಿಯುವುದು
-ಕಪ್ಪುಕುಳಿ (ಬ್ಲ್ಯಾಕ್‌ಹೋಲ್)ಗಳ ಭಿನ್ನ ಮೂಲಗಳನ್ನು ಅರ್ಥ ಮಾಡಿಕೊಳ್ಳುವುದು.
-ನಕ್ಷತ್ರಗಳ ಸ್ಫೋಟದ ಅನಂತರ ಉಳಿಯುವ ಅವಶೇಷಗಳಿಂದ ಹೊಮ್ಮುವ ಉಷ್ಣವನ್ನು ಅರ್ಥ ಮಾಡಿಕೊಳ್ಳುವುದು.