Advertisement

ISRO Aditya L1 ; ಸೌರ ಜ್ವಾಲೆಯ ಫೋಟೋ ಕ್ಲಿಕ್‌

01:02 AM Nov 08, 2023 | Team Udayavani |

ಹೊಸದಿಲ್ಲಿ: ಇಸ್ರೋದ ಸೌರ ಯೋಜನೆಯ ಆದಿತ್ಯ ಎಲ್‌1 ನೌಕೆಯು ಇದೇ ಮೊದಲ ಬಾರಿಗೆ ಸೌರ ಜ್ವಾಲೆಯ ಅತ್ಯಧಿಕ ಶಕ್ತಿಯುಳ್ಳ ಎಕ್ಸ್‌-ಕಿರಣಗಳ ಫೋಟೋ  ವನ್ನು ಸೆರೆಹಿಡಿದಿದೆ. ನೌಕೆಯಲ್ಲಿರುವ ಹೈ ಎನರ್ಜಿ ಎಲ್‌1 ಆರ್ಬಿಟಿಂಗ್‌ ಎಕ್ಸ್‌-ರೇ ಸ್ಪೆಕ್ಟ್ರೋ ಮೀಟರ್‌ (ಎಚ್‌ಇಎಲ್‌1ಒಎಸ್‌) ಸೌರಜ್ವಾಲೆಯಲ್ಲಿನ ಹಠಾತ್‌ ಪ್ರಕ್ರಿಯೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಸೌರಜ್ವಾಲೆ ಹೊರಹೊಮ್ಮುವ ಹಂತದಲ್ಲಿ ಬಿಡುಗಡೆಯಾಗುವ ಶಕ್ತಿ ಮತ್ತು ಎಲೆಕ್ಟ್ರಾನ್‌ಗಳ ವೇಗವರ್ಧಿಸುವಿಕೆಯನ್ನು ಅಧ್ಯಯನ ಮಾಡಲು ಇದರಿಂದ ಸಾಧ್ಯವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next