ಗಾಜಾ : ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಉಗ್ರ ಸಂಘಟನೆ ಹಮಾಸ್ ನಡುವಿನ ಯುದ್ಧವು ಶನಿವಾರ 15 ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಮಾಸ್ ದಾಳಿಗೆ 1,400 ಕ್ಕೂ ಹೆಚ್ಚು ಇಸ್ರೇಲಿಗಳು ಬಲಿಯಾಗಿದ್ದು, ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇಸ್ರೇಲ್ ಪ್ರತೀಕಾರದಲ್ಲಿ ಕನಿಷ್ಠ 4,137 ಪ್ಯಾಲೆಸ್ತೀನಿಯರನ್ನು ಹತ್ಯೆಗಿದಿದೆ.
ಹಮಾಸ್ ಅನ್ನು ನಾಶಮಾಡುವುದಾಗಿ ಪ್ರತಿಜ್ಞೆ ಮಾಡಿರುವ ಇ ಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿರಂತರ ವೈಮಾನಿಕ ದಾಳಿಗೈಯುತ್ತಿದೆ. ಗಾಜಾದಲ್ಲಿನ ಎಲ್ಲಾ ಮನೆಗಳಲ್ಲಿ ಮೂರನೇ ಒಂದು ಭಾಗದಷ್ಟುಹಾನಿಗೊಳಗಾಗಿದೆ, ಸುಮಾರು 13,000 ಮನೆಗಳು ಸಂಪೂರ್ಣವಾಗಿ ನಾಶವಾಗಿದೆ.
ರಫಾ ಗಡಿ ದಾಟಿದ ನಂತರ ಪ್ಯಾಲೆಸ್ಟೀನಿಯನ್ನರಿಗೆ ಮಾನವೀಯ ನೆರವು ನೀಡುವ ಟ್ರಕ್‌ಗಳು ಶನಿವಾರ ಈಜಿಪ್ಟ್‌ನಿಂದ ಗಾಜಾ ಪಟ್ಟಿಯನ್ನು ಪ್ರವೇಶಿಸಿವೆ.
ಬ್ರಿಟೀಷ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು ಶನಿವಾರ ಇಸ್ರೇಲ್ ಸರಕಾರದೊಂದಿಗೆ ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವ ಮತ್ತು ಗಾಜಾದಲ್ಲಿ ನಾಗರಿಕರ ಜೀವಗಳನ್ನು ಸಂರಕ್ಷಿಸುವ ಮತ್ತು ಅದರ ಮಿಲಿಟರಿ ಸಂಯಮವನ್ನು ಪ್ರದರ್ಶಿಸುವ ಕರ್ತವ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
“ನಾನು ಇಸ್ರೇಲ್ ಸರಕಾರದೊಂದಿಗೆ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸುವ ಕರ್ತವ್ಯ ಮತ್ತು ಗಾಜಾದಲ್ಲಿ ನಾಗರಿಕರ ಜೀವನವನ್ನು ಸಂರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ನೇರವಾಗಿ ಮಾತನಾಡಿದ್ದೇನೆ ಎಂದು ಈಜಿಪ್ಟ್ ಆಯೋಜಿಸಿದ್ದ ಕೈರೋ ಶಾಂತಿ ಶೃಂಗಸಭೆಯಲ್ಲಿ ಹೇಳಿದ್ದಾರೆ.
ಶನಿವಾರ ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮಾತನಾಡಿ ”ಲೆಬನಾನಿನ ಶಿಯಾ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪು ಹೆಜ್ಬೊಲ್ಲ ಯುದ್ಧಕ್ಕೆ ಸೇರಲು ನಿರ್ಧರಿಸಿದ್ದು, ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.