Advertisement

Lebanon ಗುರಿಯಾಗಿರಿಸಿ ಇಸ್ರೇಲ್ ಭಾರಿ ದಾಳಿ: ಹೆಜ್ಬುಲ್ಲಾ ಹಿರಿಯ ಕಮಾಂಡರ್ ಬಲಿ

08:00 PM Jan 08, 2024 | Team Udayavani |

ಬೈರುತ್: ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಪಡೆಗಳು ಸೋಮವಾರ ನಡೆಸಿದ ಭಾರಿ ದಾಳಿಯಲ್ಲಿ ಹೆಜ್ಬುಲ್ಲಾದ ರಾದ್ವಾನ್ ಪಡೆಯ ಹಿರಿಯ ಕಮಾಂಡರ್‌ ಒಬ್ಬ ಸಾವನ್ನಪ್ಪಿದ್ದಾನೆ ಎಂದು ಮೂರು ಭದ್ರತಾ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

Advertisement

ಭದ್ರತಾ ಮೂಲಗಳು ಹತನನ್ನು ರಾದ್ವಾನ್ ಪಡೆಯೊಳಗಿನ ಘಟಕದ ಉಪ ಮುಖ್ಯಸ್ಥ ವಿಸ್ಸಾಮ್ ಅಲ್-ತವಿಲ್ ಎಂದು ಗುರುತಿಸಿವೆ. ಲೆಬನಾನಿನ ಮಜ್ದಾಲ್ ಸೆಲ್ಮ್ ಗ್ರಾಮದ ಮೇಲೆ ದಾಳಿಯಲ್ಲಿ ವಿಸ್ಸಾಮ್ ಕಾರಿಗೆ ಅಪ್ಪಳಿಸಿ ಆತನೊಂದಿಗೆ ಇನ್ನೊಬ್ಬ ಹೆಜ್ಬುಲ್ಲಾ ಹೋರಾಟಗಾರ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಈಗ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ನಂತರ ದಕ್ಷಿಣ ಲೆಬನಾನ್‌ನಲ್ಲಿ 130 ಕ್ಕೂ ಹೆಚ್ಚು ಹೆಜ್ಬುಲ್ಲಾ ಹೋರಾಟಗಾರರನ್ನು ಹತ್ಯೆಗೈಯಲಾಗಿದೆ. ಸಿರಿಯಾದಲ್ಲಿ 19 ಮಂದಿ ಹತ್ಯೆಗೈಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next