Advertisement

ಕ್ವಾರಂಟೈನ್ ನಲ್ಲಿ ಬೆಂಜಮಿನ್ ನೇತನ್ಯಾಹು ; ಕೋವಿಡ್ 19 ಪಾಸಿಟಿವ್ ಪತ್ತೆ ಹಿನ್ನಲೆ

09:45 AM Mar 31, 2020 | Hari Prasad |

ಜೆರುಸಲೇಮ್: ಕೋವಿಡ್ 19 ಮಹಾಮಾರಿ ಘಟಾನುಘಟಿ ವ್ಯಕ್ತಿಗಳನ್ನೂ ಕಾಡುತ್ತಿದೆ. ಕೆನಡಾ ಪ್ರಧಾನಿ, ಇಂಗ್ಲಂಡ್ ರಾಜಕುಮಾರ, ಇಂಗ್ಲಂಡ್ ಪ್ರಧಾನಿ, ಹಣಕಾಸು ಸಚಿವ, ಸ್ಪೈನ್ ರಾಣಿ.. ಹೀಗೆ ಜನಸಾಮಾನ್ಯರೊಂದಿಗೆ ಜಾಗತಿಕ ನಾಯಕರು, ಸೆಲೆಬ್ರಿಟಿಗಳನ್ನೂ ಬಿಡದೆ ಕಾಡುತ್ತಿರುವ ಈ ಮಹಾಮಾರಿಯ ಪಟ್ಟಿಗೆ ಇದೀಗ ಹೊಸ ಸೇರ್ಪಡೆ ಇಸ್ರೇಲ್ ದೇಶದ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು.

Advertisement

ಹೌದು, ನೇತನ್ಯಾಹು ಅವರಲ್ಲಿ ಕೋವಿಡ್ 19 ವೈರಸ್ ಮಾದರಿ ಪರೀಕ್ಷೆ ಪಾಸಿಟಿವ್ ಬಂದ ನಂತರ ಸೋಮವಾರ ಅವರು ಸ್ವಯಂನಿರ್ಬಂಧಕ್ಕೆ ಒಳಗಾಗಿದ್ದಾರೆ (ಕ್ವಾರೆಂಟೈನ್) ಎಂದು ಪ್ರಧಾನಿ ಕಛೇರಿ ಮೂಲಗಳು ತಿಳಿಸಿವೆ.

ಇಸ್ರೇಲ್ ನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದು ಇಲ್ಲ ಜನರು ತಮ್ಮ ಮನೆಗಳಿಂದ 100 ಮೀಟರ್ ದೂರಕ್ಕೆ ಹೋಗಲೂ ಅವಕಾಶ ನೀಡದಂತೆ ನಿರ್ಬಂಧ ವಿಧಿಸಲಾಗಿದೆ. ಮತ್ತು ಆಹಾರ ಹಾಗೂ ಅವಶ್ಯಕ ಸಾಮಾಗ್ರಿಗಳನ್ನು ಸಂಗ್ರಹಿಸಲು ಮಾತ್ರವೇ ಹೊರಹೋಗಲು ಅವಕಾಶ ನೀಡಲಾಗುತ್ತಿದೆ.

ಇಸ್ರೇಲ್ ನಲ್ಲಿ ಇಲ್ಲಿಯವರೆಗೆ 4,347 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಸೌಮ್ಯ ಸ್ವರೂಪದ್ದಾಗಿವೆ ಹಾಗೂ 134 ಸೋಂಕಿತರು ಈಗಾಗಲೇ ಚೇತರಿಸಿಕೊಂಡಿದ್ದಾರೆ. ಹದಿನಾರು ಸೋಂಕಿತರು ಸಾವನ್ನಪ್ಪಿದ್ದು, 95 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಮತ್ತು ಓರ್ವ ಇಸ್ರೇಲಿ ಪ್ರವಾಸಿಗ ಇಟಲಿಯಲ್ಲಿ ಸಾವನ್ನಪ್ಪಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next