Advertisement

ಏಮ್ಸ್‌ ಗೆ ಇಸ್ರೇಲ್‌ನಿಂದ ವೈದ್ಯ ಉಪಕರಣ ಕೊಡುಗೆ

01:04 AM Aug 13, 2020 | mahesh |

ಹೊಸದಿಲ್ಲಿ: ಕೋವಿಡ್ ನಿರ್ವಹಣೆಗೆ ಭಾರತ ಹಾಗೂ ಇಸ್ರೇಲ್‌ ಸಹಕಾರ ಒಪ್ಪಂದದಡಿ ಅತ್ಯಾಧುನಿಕ ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನ ಹಾಗೂ ಉತ್ಕೃಷ್ಟಮಟ್ಟದ ಉಪಕರಣಗಳನ್ನು ಅಖೀಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಗೆ ಕಳುಹಿಸಿದೆ. ಭಾರತದ ಇಸ್ರೇಲ್‌ ರಾಯಭಾರಿ ಡಾ| ರೋನ್‌ ಮಾಸ್ಕ್ ಅವರು ಈ ತಂತ್ರಜ್ಞಾನ ಉಪಕರಣಗಳನ್ನು ಅಧಿಕೃತ ವಾಗಿ ನಮಗೆ ಹಸ್ತಾಂತರಿಸಿದ್ದಾರೆ ಎಂದು ಏಮ್ಸ್‌ ತಿಳಿಸಿದೆ. ತಂತ್ರಜ್ಞಾನ ಆಧಾರಿತ ಕೃತಕ ಬುದ್ಧಿಮತ್ತೆ ವೀಡಿಯೋ, ಆಡಿಯೋ ವ್ಯವಸ್ಥೆಯ ಉಪಕರಣ ಹಾಗೂ ಆ್ಯಪ್‌ ಅನ್ನು ಕಳುಹಿಸಿದೆ.

Advertisement

ಈ ಆ್ಯಪ್‌ ಅನ್ನು ಕೋವಿಡ್‌ ಕೇರ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಸಿಬಂದಿ ತಮ್ಮ ಮೊಬೈಲ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್‌ ಹೆಚ್ಚು ಪರಿ ಣಾಮ ಕಾರಿ ಹಾಗೂ ಸರಳವಾಗಿದೆ. ಈ ಉಪಕರಣಗಳಿಂದ ಸೋಂಕಿತ ರೋಗಿಯ ಹೃದಯ ಬಡಿತ, ಉಸಿರಾಟ ಸಾಮರ್ಥ್ಯವನ್ನು ಅಳೆಯಬಹುದಾಗಿದೆ. ಇತ್ತೀಚೆಗೆ ಇಸ್ರೇಲ್‌ಗೆ ಭಾರತವು ಔಷಧ ಹಾಗೂ ವೈದ್ಯಕೀಯ ಸುರಕ್ಷತ ಕಿಟ್‌ಗಳನ್ನು ನೀಡಿತ್ತು. ಇದೀಗ ಇಸ್ರೇಲ್‌ ತಂತ್ರಜ್ಞಾನ ಆಧಾರಿತ ಅತ್ಯುನ್ನತ ಉಪಕರಣಗಳನ್ನು ನಮಗೆ ಕಳುಹಿಸಿದೆ ಎಂದು ಏಮ್ಸ್‌ ನಿರ್ದೇಶಕ ಡಾ| ರಣದೀಪ್‌ ಗುಲೇರಿಯಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next